ಏನೋ ವಿಷಯ ಇದೆ ಎಂದ ಫ್ಯಾನ್ಸ್
(ಚಿತ್ರ ಕೃಪೆ: ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್)
ಭಟ್ರ ಈ ಸ್ಕ್ರಿಪ್ಟ್ ಓದಿ ಜಯಂತ್ ಕಾಯ್ಕಿಣಿ ಅವರು ಆನಂದಿಸಿದ್ದಾರೆ. ಭಟ್ರ ಬೆನ್ನು ತಟ್ಟಿದ್ದಾರೆ. ಇದರಿಂದ ಯೋಗರಾಜ್ ಭಟ್ರಿಗೆ ಇನ್ನಿಲ್ಲದಂತೆ ಖುಷಿ ಆಗಿದೆ. ಅದನ್ನ ಅವರು ಹೀಗೆ ಬರೆದುಕೊಂಡಿದ್ದಾರೆ.
ನಮಸ್ತೆ,
ಜಯಂತ್ ಸರ್ ನನ್ನ ಕನಸಿನ ಸ್ಕ್ರಿಪ್ಟ್ ಒಂದನ್ನು ನಖಶಿಖಾಂತ ಓದಿ, ಆನಂದಿಸಿ, ಬೆನ್ನು ತಟ್ಟಿದ್ದು ನನ್ನ ಪಾಲಿಗೆ ಈ ದಶಕದ ಖುಷಿ ಸಮಾಚಾರ … ಬರಹಗಾರ ಮಾತ್ರ ಬರಹಗಾರನನ್ನು ಅರ್ಥ ಮಾಡಿಕೊಳ್ಳಬಲ್ಲ.. ಬಡವ ಮಾತ್ರ ಬಡವನನ್ನು ಅರ್ಥ ಮಾಡಿಕೊಳ್ಳಬಲ್ಲ..
ಓದುವಿಕೆ ನಶಿಸಿ ಹೋಗುತ್ತಿರುವ ಈ ಮೊಬೈಲ್ ಯುಗದಲ್ಲಿ ಜಯಂತ್ ಸರ್ ಬರೆಯೋದಕ್ಕೆ , ಓದುವುದಕ್ಕೆ ಮಾದರಿ ವ್ಯಕ್ತಿ ಆಗಿಬಿಟ್ಟರು.
ಕನಸಿನ ಸ್ಕ್ರಿಪ್ಟ್ ಓದಿದರು…
(ಚಿತ್ರ ಕೃಪೆ: ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್)
ಯೋಗರಾಜ್ ಭಟ್ರು ಒಂದು ವಿನಂತಿ ಕೂಡ ಮಾಡಿದ್ದಾರೆ. ಈ ವಿನಂತಿಯಲ್ಲಿ ಓದುವ ಹವ್ಯಾಸ ರೂಢಿಸಿಕೊಳ್ಳಿ ಅಂತ ಹೇಳಿದ್ದಾರೆ. ಸಾಹಿತ್ಯ ಪಾಹಿತ್ಯ ಓದಿಕೊಳ್ರಪ್ಪ ಅಂತಲೇ ಹೇಳಿದ್ದಾರೆ. ಆ ವಿನಂತಿಯ ಸಾಲುಗಳು ಈ ರೀತಿ ಇವೆ.
ವಿನಂತಿ-
ಎಲ್ಲರೂ ಸ್ವಲ್ಪ ಸಾಹಿತ್ಯ ಪಾಹಿತ್ಯ
ಓದಿಕೊಳ್ರಪ್ಪ/ಮ್ಮ.. ಬಾಳಲ್ಲಿ ನಿಜಕ್ಕೂ ಯೂಸ್ ಆಯ್ತದೆ..
ಈ ಪತ್ರ ಇಲ್ಲಿವರೆಗೆ ಓದಿದ ಹಾಗೂ ಓದದ ಎಲ್ಲರಿಗೂ ಅನಂತ
ಧನ್ಯವಾದ..
ಈ ಒಂದು ಪುಟ್ಟ ಲೆಟರ್ ಜೊತೆಗೆ ಯೋಗರಾಜ್ ಭಟ್ ಒಂದೆರಡು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಅವರು ಒಟ್ಟಿಗೆ ಕುಳಿತುಕೊಂಡಿದ್ದಾರೆ. ಹಾಗೆ ಇನ್ನೊಂದು ಫೋಟೋದಲ್ಲಿ ಮೇಲೆ ಓದಿದ ಪತ್ರದ ಫೋಟೋ ಇದೆ.
ಯೋಗರಾಜ್ ಭಟ್ ಕನಸಿನ ಸ್ಕ್ರಿಪ್ಟ್ ಕಂಪ್ಲೀಟ್; ಜಯಂತ್ ಮೆಚ್ಚುಗೆ! (ಚಿತ್ರ ಕೃಪೆ: ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್)
ಯೋಗರಾಜ್ ಭಟ್ರ ಈ ಒಂದು ಪೋಸ್ಟ್‌ಗೆ ಕಾಂಪ್ಲಿಮೆಂಟ್ ಬಂದಿದೆ. ಇದನ್ನ ನೋಡಿದವರು ತಮ್ಮದೇ ರೀತಿಯಲ್ಲಿಯೇ ಕಾಮೆಂಟ್ ಬಾಕ್ಸ್ ಅಲ್ಲಿ ಬರೆದುಕೊಂಡಿದ್ದಾರೆ. ಅವು ಹೀಗೆ ಇವೆ.
– ಇದನ್ನು ಓದುತ್ತಿರುವಾಗ ಜಯಂತ್ ಕಾಯ್ಕಿಣಿ ಅವರ ಮೊಟ್ಟ ಮೊದಲ ಗೀತೆ ರಚನೆ, ವಿ.ಮನೋಹರ್ ಅವರ ಸಂಗೀತ ಸಂಯೋಜನೆಯಲ್ಲಿ ಅಣ್ಣಾವ್ರು ಹಾಡಿದ “ಬಂಧುವೇ ಓ ಬಂಧುವೇ …ಗಂಗವ್ವ ಗಂಗಾಮಾಯಿ ಮಮತೆಯ ಧಾರೆ …” ಹಾಡು ಎಲ್ಲೋ ಪ್ರಸಾರವಾಗುತ್ತಿದ್ದದ್ದು ಕೇಳಿಸಿತು.
– ನಿಮ್ಮ ಜಯಂತ್ ಸರ್ ಬತ್ತಳಿಕೆಯಲ್ಲಿ ಸಿನಿಮಾಗಳು ಹಾಡುಗಳು ಇನ್ನೂ ಹೆಚ್ಚಾಗಿ ಬರಲಿ ಗುರುಗಳೇ ……..ಜೈ ಭಟ್ರು
– ನೀವು ಮತ್ತೆ ಗಣೇಶ್ ಸರ್ ಕಾಂಬೋದಲ್ಲಿ ಮೂವಿ ಬರಬೇಕು ವೇಟ್ ಮಾಡ್ತಾ ಇದೀನಿ
ಈ ರೀತಿಯ ಕಾಂಪ್ಲಿಮೆಂಟ್ಸ್ ಬಂದಿವೆ. ಇನ್ನು ಸಾಕಷ್ಟು ಇವೆ. ಅದರಲ್ಲಿಯ ಕೆಲವು ಇಲ್ಲಿವೆ ಅಂತ ಹೇಳಬಹುದು.












