Yastika Bhatia : ಲಾರ್ಡ್ಸ್​ ಮೈದಾನದಲ್ಲಿ ಚರಿತ್ರೆ ಸೃಷ್ಟಿಸಿದ ಯಾಸ್ತಿಕಾ! ಮಹಿಳಾ ಕ್ರಿಕೆಟ್​ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews

ಯಾಸ್ತಿಕಾ ಭಾಟಿಯಾ


Last Updated:

ಕ್ರಿಕೆಟ್​​ನ ಮೆಕ್ಕಾ ಎಂದೇ ಕರೆಯಲ್ಪಡುವ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಟೆಸ್ಟ್ ಪಂದ್ಯ ಇದಾಗಿದೆ. ಲಾರ್ಡ್ಸ್​ನ ಮೊದಲ ಟೆಸ್ಟ್​​ನಲ್ಲೇ ಟೆಸ್ಟ್ ಶತಕ ಗಳಿಸುವ ಮೂಲಕ ಭಾಟಿಯಾ ಚರಿತ್ರೆ ಸೃಷ್ಟಿಸಿದರು.

ಯಾಸ್ತಿಕಾ ಭಾಟಿಯಾ
ಯಾಸ್ತಿಕಾ ಭಾಟಿಯಾ

ಭಾರತದ 25 ವರ್ಷದ ಯುವ ಬ್ಯಾಟರ್ ಯಾಸ್ತಿಕಾ ಭಾಟಿಯಾ (Yastika Bhatia)ಟೆಸ್ಟ್ ಕ್ರಿಕೆಟ್​​ನಲ್ಲಿ ದಿಗ್ಗಜ ಬ್ಯಾಟರ್​ಗಳಿಂದ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ಮಹಿಳಾ ತಂಡದ (India Women vs England Women) ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ (Lord’s Ground) ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಸಾಧನೆ ಮೂಲಕ 25 ವರ್ಷದ ಯಸ್ತಿಕಾ ಈ ಐತಿಹಾಸಿಕ ಮೈದಾನದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಲಾರ್ಡ್ಸ್ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ, ಯಾಸ್ತಿಕಾ ಭಾಟಿಯಾ ಅವರನ್ನು ಖಂಡಿತವಾಗಿಯೂ ನೆನಪಿಸಿಕೊಳ್ಳುವಂತಹ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ 113 ರನ್‌ಗಳ ಅದ್ಭುತ ಇನ್ನಿಂಗ್ಸ್‌ನೊಂದಿಗೆ ಈ ಸಾಧನೆ ಮಾಡಿದ್ದಾರೆ. ಕುತೂಹಲಕಾರಿಯಾಗಿ, ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವಾಗಿದೆ. ಯಾಸ್ತಿಕಾ ಈಗಾಗಲೇ ಮೂರು ಸ್ವರೂಪಗಳಲ್ಲಿ ಭಾರತಕ್ಕಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಸ್ಮರಣೀಯ ಇನ್ನಿಂಗ್ಸ್‌ನಿಂದಾಗಿ, ಭಾರತವು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

142 ವರ್ಷಗಳಲ್ಲೇ ಮೊದಲ ಪಂದ್ಯ

ಕ್ರಿಕೆಟ್​​ನ ಮೆಕ್ಕಾ ಎಂದೇ ಕರೆಯಲ್ಪಡುವ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಟೆಸ್ಟ್ ಪಂದ್ಯ ಇದಾಗಿದೆ. ಲಾರ್ಡ್ಸ್​ನ ಮೊದಲ ಟೆಸ್ಟ್​​ನಲ್ಲೇ ಟೆಸ್ಟ್ ಶತಕ ಗಳಿಸುವ ಮೂಲಕ ಭಾಟಿಯಾ ಚರಿತ್ರೆ ಸೃಷ್ಟಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 158 ಎಸೆತಗಳಲ್ಲಿ 113 ರನ್ ಗಳಿಸಿದ ಅವರು, 14 ಬೌಂಡರಿಗಳನ್ನು ಬಾರಿಸಿ ಇಂಗ್ಲಿಷ್ ಬೌಲರ್‌ಗಳ ಮೇಲೆ ನಿರಂತರ ಒತ್ತಡ ಹೇರಿದರು. ಈ ಶತಕವು ಅವರ ವೃತ್ತಿಜೀವನದಲ್ಲಿ ಸ್ಮರಣೀಯ ಕ್ಷಣವನ್ನು ಮಾತ್ರವಲ್ಲದೆ, ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೂ ಬರೆದಿದೆ.

3ನೇ ಇನ್ನಿಂಗ್ಸ್​​​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ

ಯಾಸ್ತಿಕಾ ಟೆಸ್ಟ್ ಪಂದ್ಯದ ಮೂರನೇ ಅಥವಾ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಮಹಿಳಾ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಲ್ಲದೆ, ಅವರು ಈ ಸ್ವರೂಪದಲ್ಲಿ ಭಾರತದ ಅತ್ಯಧಿಕ ಇನ್ನಿಂಗ್ಸ್‌ನ ದಾಖಲೆಯನ್ನು ಸಹ ಸ್ಥಾಪಿಸಿದರು. ಈ ಹಿಂದೆ, ಈ ದಾಖಲೆಯನ್ನು 1985 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಲಕ್ನೋ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 98 ರನ್ ಗಳಿಸಿದ ಸಂಧ್ಯಾ ಅಗರ್ವಾಲ್ ಹೊಂದಿದ್ದರು. 1984 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು 83 ರನ್ ಗಳಿಸಿನ 2ನೇ ಸ್ಥಾನವನ್ನೂ ಹೊಂದಿದ್ದರು.

ಸೌರವ್ ಗಂಗೂಲಿ ಅವರ ಎಲೈಟ್ ಕ್ಲಬ್‌ಗೆ ಸೇರ್ಪಡೆ 

ಯಾಸ್ತಿಕಾ ಭಾಟಿಯಾ ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕ ಗಳಿಸಿದ ಎರಡನೇ ಎಡಗೈ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯನ್ನು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಾತ್ರ ಸಾಧಿಸಿದ್ದರು, ಅವರು 1996 ರಲ್ಲಿ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಐತಿಹಾಸಿಕ 131 ರನ್ ಗಳಿಸಿದ್ದರು. ಈ ಪ್ರತಿಷ್ಠಿತ ಮೈದಾನದಲ್ಲಿ ಶತಕಗಳನ್ನು ಗಳಿಸುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿರುವ ಮತ್ತು ಲಾರ್ಡ್ಸ್ ಗೌರವ ಮಂಡಳಿಯಲ್ಲಿ ತಮ್ಮ ಹೆಸರುಗಳನ್ನು ಹೊಂದಿರುವ ಆಯ್ದ ಭಾರತೀಯ ಬ್ಯಾಟ್ಸ್‌ಮನ್‌ಗಳ ಗುಂಪಿಗೆ ಯಾಸ್ತಿಕಾ ಈಗ ಸೇರಿದ್ದಾರೆ.

ಕ್ರಾಂತಿ ಗೌಡ್ ಹೊಸ ದಾಖಲೆ

ಯಾಸ್ತಿಕಾ ಜೊತೆಗೆ ಭಾರತದ ಬೌಲರ್ ಕ್ರಾಂತಿ ಗೌಡ್ ಇದೇ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ ಐದು ವಿಕೆಟ್ ಪಡೆದ ವಿಶ್ವದ ಮೊದಲ ಮಹಿಳಾ ಟೆಸ್ಟ್ ಬೌಲರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Yastika Bhatia : ಲಾರ್ಡ್ಸ್​ ಮೈದಾನದಲ್ಲಿ ಚರಿತ್ರೆ ಸೃಷ್ಟಿಸಿದ ಯಾಸ್ತಿಕಾ! ಮಹಿಳಾ ಕ್ರಿಕೆಟ್​ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed