Yashaswi Jaiswal: ಕೇವಲ 32 ರನ್​ಗಳಿಸಿದ್ರೂ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್! ಈ ಗೌರವಕ್ಕೆ ಪಾತ್ರರಾದ 3ನೇ ಭಾರತೀಯ | ಕ್ರೀಡಾ ಸುದ್ದಿ | ACTPnews

ಜೈಸ್ವಾಲ್ -ರಾಹುಲ್


Last Updated:

ಶ್ರೀಲಂಕಾದ ಬೌಲರ್​​ ಚೆಂಡು ಹಿಡಿಯಲು ಪ್ರಯತ್ನಿಸುವ ವೇಳೆ ಜೈಸ್ವಾಲ್ ಅವರ ಕಾಲು ತಗುಲಿ ಬಿದ್ದು, ನಂತರ ಉಂಟಾದ ಗೊಂದಲದಲ್ಲಿ ರನ್​ಔಟ್ ಆದರು. ಆದರೂ ಈ ಪಂದ್ಯದಲ್ಲಿ ಜೈಸ್ವಾಲ್‌ ಒಂದು ವಿಶಿಷ್ಟ ಸಾಧನೆ ಮಾಡಿದ್ದಾರೆ.

ಜೈಸ್ವಾಲ್ -ರಾಹುಲ್
ಜೈಸ್ವಾಲ್ -ರಾಹುಲ್

ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ (Yashaswi Jaiswal) ಮತ್ತೊಮ್ಮೆ ಕಡಿಮೆ ಮೊತ್ತಕ್ಕೆ ಔಟ್ ಆದರು. ಆದರೆ ಈ ಬಾರಿ ಔಟಾದ ರೀತಿ ಮ್ಯಾನೇಜ್​ಮೆಂಟ್​​ಗೆ ಚಿಂತೆ ತಂದಿಲ್ಲ. ಏಕೆಂದರೆ ಜೈಸ್ವಾಲ್ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕ್ಷಣದಲ್ಲಿ ರನೌಟ್ ಆಗಿ ಪೆವಿಲಿಯನ್‌ಗೆ ಹಿಂತಿರುಗಬೇಕಾಯಿತು. ಶ್ರೀಲಂಕಾದ ಬೌಲರ್​​ ಚೆಂಡು ಹಿಡಿಯಲು ಪ್ರಯತ್ನಿಸುವ ವೇಳೆ ಜೈಸ್ವಾಲ್ ಅವರ ಕಾಲು ತಗುಲಿ ಬಿದ್ದು, ನಂತರ ಉಂಟಾದ ಗೊಂದಲದಲ್ಲಿ ರನ್​ಔಟ್ ಆದರು. ಆದರೂ ಈ ಪಂದ್ಯದಲ್ಲಿ ಜೈಸ್ವಾಲ್‌ ಒಂದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಅವರು ಇಲ್ಲಿಯವರೆಗೆ ಆಡಿರುವ ಎಲ್ಲಾ ಟೆಸ್ಟ್ ಪಂದ್ಯಗಳು ವಿಭಿನ್ನ ಮೈದಾನಗಳಾಗಿವೆ. ಅಂದರೆ ಅವರು ಒಂದೇ ಕ್ರೀಡಾಂಗಣದಲ್ಲಿ ಇದುವರೆಗೂ ಎರಡು ಬಾರಿ ಎಲ್ಲೂ ಆಡಿಲ್ಲ. ಇದನ್ನು ಸಾಧಿಸಿದ ಮೊದಲ ಭಾರತೀಯ ಆಟಗಾರ ಅವರು ಅಲ್ಲದಿದ್ದರೂ, ಆ ಕೆಲವೇ ಆಟಗಾರರಿರುವ ಪಟ್ಟಿಗೆ ಸೇರಿಕೊಂಡಿದ್ದಾರೆ..



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports