Last Updated:
ಗೋವಿಂದಾ-ಸುನೀತಾ ಅಹುಜಾ ವೈಯಕ್ತಿಕ ಭಿನ್ನಾಭಿಪ್ರಾಯ ಬಹಿರಂಗ. ಪತ್ನಿಯ ಹೇಳಿಕೆಗಳಿಗೆ ಗೋವಿಂದಾ ವಿಡಿಯೋ ಮೂಲಕ ಪ್ರತಿಕ್ರಿಯೆ, ವೃತ್ತಿಜೀವನಕ್ಕೆ ಹಾನಿಯಾಗದಂತೆ ಮನವಿ.
ಬಾಲಿವುಡ್‌ನ ಖ್ಯಾತ ನಟ ಗೋವಿಂದಾ (Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯ ಇದೀಗ ಬಹಿರಂಗ ಚರ್ಚೆಯ ವಿಷಯವಾಗಿದೆ. ಗೋವಿಂದಾ ತಮ್ಮ ಮುಂದಿನ ಸಿನಿಮಾ ರೂಪಾ ಚಿತ್ರದ ನಾಯಕಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ಸುನೀತಾ ಅಹುಜಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ನಟಿಯ ಬಗ್ಗೆ ಮತ್ತು ಗೋವಿಂದಾ ನಡವಳಿಕೆ ಕುರಿತು ಕಟುವಾದ ಹೇಳಿಕೆಗಳನ್ನು ನೀಡಿದ್ದರು. ಇದೀಗ ಈ ಹೇಳಿಕೆಗಳಿಗೆ ಗೋವಿಂದಾ ಕೂಡ ಸಾರ್ವಜನಿಕ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದು, ಪತ್ನಿಗೆ ನೇರವಾಗಿ ಮನವಿ ಮಾಡಿದ್ದಾರೆ.














