Last Updated:
ರಾವಣನ ಪಾತ್ರದಲ್ಲಿ ಯಶ್ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ಸಿಯಾ ಕೆ ರಾಮ್ ಸೀರಿಯಲ್ ಅಲ್ಲಿ ಕನ್ನಡಿಗ ಜೆ.ಕೆ. ರಾವಣನ ರೋಲ್ ಮಾಡಿದ್ದರು. ಇನ್ನು ಯಾರೆಲ್ಲ ರಾವಣನ ರೋಲ್ ಮಾಡಿದ್ದರು ಅನ್ನೋದು ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Yash) ಅವರಿಗೆ ರಾವಣನ ಪಾತ್ರದ (Ravana Role) ಪರಿಚಯ ಬಾಲ್ಯದಲ್ಲಿಯೇ ಆಗಿದೆ. ಅಜ್ಜ ಹೇಳಿದ ಕತೆಗಳಲ್ಲಿ ರಾಮಾಯಣ ಕೂಡ ಇದೆ. ಅದರಲ್ಲಿ ಬರುವ ರಾಮ ಮತ್ತು ರಾವಣನ ಕತೆಯನ್ನು ಕೇಳಿದ್ದಾರೆ. ಆದರೆ, ತಾವು ನಿರ್ಮಾಪಕರೂ ಆಗಿರೋ ರಾಮಾಯಣ ಚಿತ್ರದಲ್ಲಿ (Ramayana Movie) ಇವರು ರಾವಣನ ಪಾತ್ರ ಮಾಡೋಕೆ ಒಪ್ಪಿದ್ದಾರೆ. ಗುಡ್ ರಾಮ ಆದರೆ ಬ್ಯಾಡ್ ರಾವಣ ಅನ್ನೋದನ್ನು ಈ ರಾಮಾಯಣ ಹೇಳುತ್ತದೆ. ಈ ರಾಮಾಯಣದ ಕತೆಯನ್ನ ಅಮೆರಿಕಾದಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗೆ ಯಶ್ (Yash) ಅಷ್ಟೆ ಸೊಗಸಾಗಿಯೇ ಇಂಗ್ಲಿಷ್ ಅಲ್ಲೂ ವಿವರಿಸುತ್ತಾರೆ. ರಾವಣನ ಬಗ್ಗೆನೂ ಅಷ್ಟೆ ಚೆಂದಗೆ ವಿವರಿಸ್ತಾರೆ ನೋಡಿ.
ರಾವಣನ ಪಾತ್ರವನ್ನ ಅನೇಕರು ಮಾಡಿದ್ದಾರೆ. ನನ್ನ ಮುಂದೆ ಅದಕ್ಕೆ ಜೀವ ತುಂಬಿದ್ದಾರೆ. ಇಲ್ಲಿ ನಾನು ರಾವಣನ ಪಾತ್ರ ಮಾಡಿದ್ದೇನೆ. ಈ ಒಂದು ರಾವಣನ ಪಾತ್ರದ ಬಗ್ಗೆ ಬಾಲ್ಯದಲ್ಲಿಯೇ ಕೇಳಿದ್ದೇನೆ.
ಇದೀಗ ಯಶ್
(ಚಿತ್ರ ಕೃಪೆ: ಯಶ್ ಫ್ಯಾನ್ ಇನ್ಸ್ಟಾಗ್ರಾಮ್)
ನಮ್ಮ ಅಜ್ಜ ಹೇಳಿದ ಕತೆಗಳಲ್ಲಿ ಈ ರಾವಣ ಕೂಡ ಬರ್ತಾ ಇದ್ದ ನೋಡಿ. ಹಾಗೆ ನಾನು ರಾವಣನ ಬಗ್ಗೆ ತಿಳಿದುಕೊಂಡಿದ್ದೇನೆ. ಈಗ ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದೇನೆ.
ರಾವಣನನ್ನ ನಾನು ಅರ್ಥ ಮಾಡಿಕೊಂಡಿದ್ದೇನೆ. ಈ ರಾವಣ ಯಾವ ಸಂದರ್ಭದಲ್ಲಿ ಹೇಗೆ ವರ್ತಿಸುತ್ತಿದ್ದ, ಯಾವ ಸಮಯದಲ್ಲಿ ಮನಸ್ಥಿತಿ ಹೇಗೆ ಇರ್ತಾ ಇತ್ತು.
ರಾವಣನ ಪಾತ್ರದಲ್ಲಿ ಜೆ.ಕೆ.
ಈ ಎಲ್ಲವನ್ನು ತಿಳಿದುಕೊಂಡಿದ್ದೇನೆ. ಹಾಗೆ ಈ ಒಂದು ರಾವಣನ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದೇನೆ. ಈ ಚಿತ್ರದಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ತುಂಬಾನೆ ಚೆನ್ನಾಗಿ ಕೆಲಸ ಮಾಡಿದ್ದಾರೆ. ರಾಮನಾಗಿ ಅಭಿನಯಿಸೋದು ಅಷ್ಟು ಸುಲಭವಲ್ಲ ಅಂತಲೂ ಯಶ್ ಹೇಳಿಕೊಂಡಿದ್ದಾರೆ.
ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ರಾವಣ ಪಾತ್ರ ಇತ್ತು. ಇದನ್ನ ಅರವಿಂದ್ ತ್ರಿವೇದಿ ಮಾಡಿದ್ದರು. 1987 ರಲ್ಲಿ ಸೀರಿಯಲ್ ರೂಪದಲ್ಲಿಯೇ ಪ್ರತಿ ಭಾನುವಾರ ಈ ರಾಮಾಯಣ ಪ್ರಸಾರ ಆಗ್ತಾ ಇತ್ತು.
‘ರಾವಣ’ ಪಾತ್ರದಲ್ಲಿ ಅಬ್ಬರಿಸಿದವರು
ರಾವಣ ಅಂದರೆ ಇವರೇ ಅನ್ನುವಷ್ಟು ಅರವಿಂದ್ ತ್ರಿವೇದಿ ಅದ್ಭುತವಾಗಿಯೇ ನಟಿಸಿದ್ದರು. 2015 ರಲ್ಲಿ ಸಿಯಾ ಕೆ ರಾಮ್ ಅನ್ನುವ ಸೀರಿಯಲ್ ಬಂತು. ಇದರಲ್ಲಿ ಕನ್ನಡದ ನಾಯಕ ನಟ ಜೆ.ಕೆ. (ಜಯರಾಮ್ ಕಾರ್ತಿಕ್) ರಾವಣನ ರೋಲ್ ಮಾಡಿದ್ದರು. 2023 ರಲ್ಲಿ ಆದಿಪುರುಷ್ ಚಿತ್ರ ಬಂತು. ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ರಾವಣನ ರೋಲ್ ಮಾಡಿದ್ದರು.
2026 ರಲ್ಲಿ ಬರ್ತಿರೋ ರಾಮಾಯಣ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ರೋಲ್ ಮಾಡ್ತಿದ್ದಾರೆ. ಇತರ ರಾವಣನ ಪಾತ್ರಧಾರಿಗಳನ್ನ ಹೋಲಿಸಿದ್ರೆ, ಯಶ್ ಹಾಗೂ ಜಯರಾಮ್ ಕಾರ್ತಿಕ್ ನಿಜಕ್ಕೂ ಅದ್ಭುತ ಅನಿಸುತ್ತಾರೆ.
ಅರವಿಂದ್ ತ್ರಿವೇದಿ
ರಾವಣನ ಪಾತ್ರದಲ್ಲಿ ಜೆ.ಕೆ. ಹೇಗೆ ಕಾಣಿಸುತ್ತಾರೆ ಅನ್ನೋದು ಗೊತ್ತೇ ಇದೆ. ಆದರೆ, ಯಶ್ ಹೇಗೆ ಕಾಣಿಸುತ್ತಾರೆ? ಹೇಗೆಲ್ಲ ಅಭಿನಯಿಸಿದ್ದಾರೆ ಅನ್ನುವ ಕುತೂಹಲ ಇದ್ದೇ ಇದೆ. ಇದನ್ನ ನೋಡಲು ಈ ವರ್ಷ ದೀಪಾವಳಿ ವರೆಗೂ ಕಾಯಬೇಕು. ಆ ದಿನವೇ ಈ ಚಿತ್ರ ಬರ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 26, 2026 10:44 AM IST














