Last Updated:
ಆಪ್ ಕಿ ಅದಾಲತ್ ಶೋದಲ್ಲಿ ಯಶ್ ಬಂದಿದ್ದಾರೆ. ಈ ಒಂದು ಶೋಗೆ ಪ್ರಧಾನಿ ಮೋದಿ ಅವರು ಬಂದು ಹೋಗಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಹೀಗೆ ಟಾಪ್ ಸ್ಟಾರ್ಸ್ ಬಂದು ಹೋಗಿದ್ದಾರೆ. ಫಸ್ಟ್ ಟೈಮ್ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಈ ಶೋಗೆ ಹೋಗಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವವರ ಇಲ್ಲಿದೆ ಓದಿ.
ಬಾಲಿವುಡ್ನ (Bollywood) ಹೆಸರಾಂತ ಶೋ ಆಪ್ ಕಿ ಅದಾಲತ್ ಶೋದಲ್ಲಿ (Aap Ki Adalat Show) ಇಲ್ಲಿವರೆಗೂ ಕನ್ನಡಿಗರು ಯಾರು ಹೋಗಿಯೇ ಇಲ್ಲ. ಆದರೆ, ಯಶ್ ಇದನ್ನ ಸಾಧಿಸಿದ್ದಾರೆ. ಹಿರಿಯ ಪತ್ರಕರ್ತ ರಜತ್ ಶರ್ಮಾ ಇದನ್ನ ನಡೆಸುತ್ತಾರೆ. ಕಟಕಟೆಯಲ್ಲಿ ಸೆಲೆಬ್ರಿಟಿಗಳನ್ನ ಕೂಡಿಸುತ್ತಾರೆ. ರಜತ್ ಶರ್ಮಾ (Rajat Sharma) ಅವರು ನೇರಾನೇರವಾಗಿಯೇ ಪ್ರಶ್ನೆನೂ ಮಾಡ್ತಾರೆ. ಉತ್ತರವನ್ನು ಪಡೀತಾರೆ. ಪ್ರಧಾನಿ ಮೋದಿ ಅವರು ಕೂಡ ಈ ಒಂದು ಶೋಗೆ ಬಂದು ಹೋಗಿದ್ದಾರೆ. ಇಂತಹ ಪ್ರಖ್ಯಾತ ಶೋಗೆ ರಾಕಿಂಗ್ ಸ್ಟಾರ್ ಯಶ್ (Rocking Star Yash) ಬಂದಿದ್ದಾರೆ. ಈ ಬಗ್ಗೆ ಸ್ವತಃ ರಜತ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಬರೆದುಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














