Last Updated:
ಜುಲೈ 2023ರಲ್ಲಿ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಈ ಗೆಲುವಿನ ಹೊರತಾಗಿಯೂ, ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಪಾಕಿಸ್ತಾನ (Pakistan) ತನ್ನ ಸೋಲಿನ ಸರಣಿಗೆ ಕೊನೆಗೂ ಅಂತ್ಯ ಹಾಡಿದೆ. ಮೂರು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಪಾಕಿಸ್ತಾನ ವಿದೇಶಿ ನೆಲದಲ್ಲಿ ತನ್ನ ಮೊದಲ ವಿದೇಶಿ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಬುಧವಾರ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ (West Indies) ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ಎಂಟು ವಿಕೆಟ್ಗಳಿಂದ ಜಯಗಳಿಸಿತು. ಈ ಗೆಲುವಿನೊಂದಿಗೆ, ಪಾಕಿಸ್ತಾನ ಎರಡು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿತು, ವಿದೇಶದಲ್ಲಿ ಸತತ ಎಂಟು ಟೆಸ್ಟ್ ಸೋಲುಗಳ ಬಳಿಕ ಪಾಕಿಸ್ತಾನಕ್ಕೆ ಸಿಕ್ಕ ಮೊದಲ ಟೆಸ್ಟ್ ಗೆಲುವಾಗಿದೆ.
ಜುಲೈ 2023ರಲ್ಲಿ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿತ್ತು. ಈ ಗೆಲುವಿನ ಹೊರತಾಗಿಯೂ, ಅವರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ನಲ್ಲಿ 60 ರನ್ಗಳ ಮುನ್ನಡೆ ಸಾಧಿಸುವುದು ಪಾಕಿಸ್ತಾನದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 344 ರನ್ಗಳಿಗೆ ಆಲೌಟ್ ಆಯಿತು. ಜಸ್ಟಿನ್ ಗ್ರೀವ್ಸ್ (73) ಮತ್ತು ರೋಸ್ಟನ್ ಚೇಸ್ (70) ಅರ್ಧಶತಕಗಳೊಂದಿಗೆ ಮಿಂಚಿದರು. ಪಾಕಿಸ್ತಾನ ಬೌಲರ್ಗಳಲ್ಲಿ, ಸಾಜಿದ್ ಖಾನ್ (4/85) ನಾಲ್ಕು ವಿಕೆಟ್ಗಳನ್ನು ಕಬಳಿಸಿದರು, ಆದರೆ ಮೊಹಮ್ಮದ್ ಅಲಿ (2/67), ಉಬೈದ್ ಶಾ (2/66), ಮತ್ತು ಅಲಿ ಉಸ್ಮಾನ್ (2/80) ತಲಾ ಎರಡು ವಿಕೆಟ್ಗಳನ್ನು ಪಡೆದರು.
ನಂತರ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 387 ರನ್ಗಳಿಗೆ ಆಲೌಟ್ ಆಯಿತು. ಅಬ್ದುಲ್ಲಾ ಶಫೀಕ್ ಶತಕ (323 ಎಸೆತಗಳಲ್ಲಿ 15 ಬೌಂಡರಿಗಳು ಮತ್ತು 3 ಸಿಕ್ಸರ್ಗಳು ಸೇರಿದಂತೆ 160), ಬಾಬರ್ ಅಜಮ್ (147 ಎಸೆತಗಳಲ್ಲಿ 10 ಬೌಂಡರಿಗಳು ಮತ್ತು ಒಂದು ಸಿಕ್ಸರ್ನೊಂದಿಗೆ 88) ಸ್ವಲ್ಪದರಲ್ಲೇ ಶತಕವನ್ನು ತಪ್ಪಿಸಿಕೊಂಡರು. ವೆಸ್ಟ್ ಇಂಡೀಸ್ ಪರ ಜೋಮೆಲ್ ವಾರಿಕನ್ (6/112) ಆರು ವಿಕೆಟ್ ಪಡೆದರು, ಶಮರ್ ಜೋಸೆಫ್ (2/84) ಎರಡು ವಿಕೆಟ್ ಪಡೆದರು ಮತ್ತು ಜೇಡನ್ ಸೀಲ್ಸ್ ಒಂದು ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 117 ರನ್ಗಳಿಗೆ ಆಲೌಟ್ ಆಯಿತು. ಕವೆಮ್ ಹಾಡ್ಜ್ (34) ಹೊರತುಪಡಿಸಿ, ಎಲ್ಲಾ ಬ್ಯಾಟ್ಸ್ಮನ್ಗಳು ವಿಫಲರಾದರು. ಪಾಕಿಸ್ತಾನ ಬೌಲರ್ಗಳಲ್ಲಿ, ಅಲಿ ಉಸ್ಮಾನ್ ಮತ್ತು ಸಾಜಿದ್ ಖಾನ್ ತಲಾ ನಾಲ್ಕು ವಿಕೆಟ್ ಪಡೆದರೆ, ಮೊಹಮ್ಮದ್ ಅಲಿ ಒಂದು ವಿಕೆಟ್ ಪಡೆದರು.
ಪಾಕಿಸ್ತಾನ ಎರಡನೇ ಇನ್ನಿಂಗ್ಸ್ನಲ್ಲಿ 75 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 23.3 ಓವರ್ಗಳಲ್ಲಿ 2 ವಿಕೆಟ್ಗಳಿಗೆ 77 ರನ್ ಗಳಿಸಿ ಗೆಲುವು ಸಾಧಿಸಿತು. ಆರಂಭಿಕರಾದ ಅಜಾನ್ ಅವೈಸ್ (18) ಮತ್ತು ಇಮಾಮ್-ಉಲ್-ಹಕ್ (9) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, ಅಬ್ದುಲ್ಲಾ ಶಫೀಕ್ ಅಜೇಯ 24 ಮತ್ತು ಬಾಬರ್ ಅಜಮ್ ಅಜೇಯ 24 ರನ್ಗಳಿಸಿ ತಂಡವನ್ನ ಗೆಲುವು ತಂದುಕೊಟ್ಟರು.
ಈ ಗೆಲುವಿನ ಹೊರತಾಗಿಯೂ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಗಳ ಪಟ್ಟಿಯಲ್ಲಿ ಪಾಕಿಸ್ತಾನ ತಂಡ ಕೊನೆಯ ಸ್ಥಾನದಲ್ಲಿಯೇ ಮುಂದುವರಿದಿದೆ. ಪಾಕಿಸ್ತಾನದ ಬಳಿ 6.67% ಪಿಸಿಟಿ ಅಂಕ ಹೊಂದಿದೆ. ಆಸ್ಟ್ರೇಲಿಯಾ ತಂಡವು ಶೇಕಡಾ 87.50 ರಷ್ಟು ಅಂಕಗಳೊಂದಿಗೆ (PCT) ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ (75.00%) ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ (72.22%), ಬಾಂಗ್ಲಾದೇಶ (58.33%) ಮತ್ತು ಭಾರತ (48.15%) ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಶ್ರೀಲಂಕಾ (41.67%), ಇಂಗ್ಲೆಂಡ್ (24.36%), ವೆಸ್ಟ್ ಇಂಡೀಸ್ (22.73%), ಪಾಕಿಸ್ತಾನ (6.67%) ನಂತರದ ಸ್ಥಾನದಲ್ಲಿವೆ.














