Women’s T20 World Cup: ಟಿ20 ವಿಶ್ವಕಪ್​​ನಲ್ಲಿ ಚರಿತ್ರೆ ಸೃಷ್ಟಿಸಿದ ಆಸ್ಟ್ರೇಲಿಯಾ ತಂಡ! ಯಾರೂ ಮಾಡದ ಸಾಧನೆ ಮಾಡಿದ ಕಾಂಗರೂಪಡೆ | ಕ್ರೀಡಾ ಸುದ್ದಿ | ACTPnews

ಆಸ್ಟ್ರೇಲಿಯಾ ಮಹಿಳಾ ತಂಡ


Last Updated:

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ಎದುರಾಳಿ ಯಾರೂ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯದ ವಿಜೇತರು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದಾರೆ. ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಜುಲೈ 5 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ಮಹಿಳಾ ತಂಡ
ಆಸ್ಟ್ರೇಲಿಯಾ ಮಹಿಳಾ ತಂಡ

ಮುಂಬೈ: ಆಸ್ಟ್ರೇಲಿಯಾ ಮಹಿಳಾ ತಂಡವು (Australia Women’s Team) ದಾಖಲೆಯ ಎಂಟನೇ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್‌ಗೆ (T20 World Cup Final) ತಲುಪಿ ದಾಖಲೆ ಬರೆದಿದೆ. ಆಸ್ಟ್ರೇಲಿಯಾ 7 ಟಿ20 ವಿಶ್ವಕಪ್ ಫೈನಲ್‌ಗಳಲ್ಲಿ 6 ರಲ್ಲಿ ಗೆದ್ದಿದೆ. ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ (Australia vs West Indies) ತಂಡವನ್ನ 8 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಬೆತ್ ಮೂನಿ ಮತ್ತು ಆಶ್ಲೇ ಗಾರ್ಡ್ನರ್ ಅವರ ಬಿರುಗಾಳಿಯ ಇನ್ನಿಂಗ್ಸ್‌ ನೆರವಿನಿಂದ, ಆಸ್ಟ್ರೇಲಿಯಾ ಕೇವಲ 13 ಓವರ್‌ಗಳಲ್ಲಿ 126 ರನ್‌ಗಳ ಗುರಿಯನ್ನು ದಾಟಿತು.

ಆಸ್ಟ್ರೇಲಿಯಾ ಎದುರಾಳಿ ಯಾರು?

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ಎದುರಾಳಿ ಯಾರೂ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ. ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯದ ವಿಜೇತರು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದಾರೆ. ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಜುಲೈ 5 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ.

ವೆಸ್ಟ್ ಇಂಡೀಸ್ ಬ್ಯಾಟಿಂಗ್ ಕುಸಿತ

ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದ ಆಸ್ಟ್ರೇಲಿಯಅ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 125 ರನ್‌ಗಳನ್ನು ಮಾತ್ರ ಗಳಿಸಿತು. ನಾಯಕ ಹೇಲಿ ಮ್ಯಾಥ್ಯೂಸ್ ಮತ್ತು ಕಿಯಾನಾ ಜೋಸೆಫ್ ಮೊದಲ ವಿಕೆಟ್‌ಗೆ 49 ಎಸೆತಗಳಲ್ಲಿ 47 ರನ್‌ಗಳ ಜೊತೆಯಾಟ ಹಂಚಿಕೊಂಡರು. ಮ್ಯಾಥ್ಯೂಸ್ 28 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 30 ರನ್ ಗಳಿಸಿದರೆ, ಜೋಸೆಫ್ 16 ರನ್‌ಗಳಿಗೆ ಔಟಾದರು. ಶೆಮಾನ್ ಕ್ಯಾಂಪ್‌ಬೆಲ್ 25 ಎಸೆತಗಳಲ್ಲಿ 22 ರನ್ ಗಳಿಸಿದರು. ಇದಲ್ಲದೆ, ಜನೆಲಿಯಾ ಗ್ಲಾಸ್ಗೋ 15 ಮತ್ತು ಡಿಯಾಂಡ್ರಾ ಡಾಟಿನ್ 16 ಎಸೆತಗಳಲ್ಲಿ ಔಟಾಗದೆ 26 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಸೋಫಿ ಮೊಲಿನೆಕ್ಸ್, ಆಶ್ಲೇ ಗಾರ್ಡ್ನರ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್ ಪಡೆದರು. ಅನ್ನಾಬೆಲ್ ಸದರ್ಲ್ಯಾಂಡ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮೂನಿ ಆಕ್ರಮಣಕಾರಿ ಬ್ಯಾಟಿಂಗ್

ಆಸ್ಟ್ರೇಲಿಯಾ ತಂಡವು ವೆಸ್ಟ್ ಇಂಡೀಸ್ ಒಡ್ಡಿದ ಸವಾಲನ್ನು 13 ಓವರ್‌ಗಳಲ್ಲಿಯೇ ತಲುಪಿ ಜಯ ಸಾಧಿಸಿದೆ. ಜಾರ್ಜಿಯಾ ವೋಲ್ ಮತ್ತು ಬೆತ್ ಮೂನಿ ಮೊದಲ ವಿಕೆಟ್‌ಗೆ 29 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ಜಾರ್ಜಿಯಾ 11 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರೆ, ಫೋಬೆ ಲಿಚ್‌ಫೀಲ್ಡ್ ಕೂಡ 4 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಎಲಿಸ್ ಪೆರ್ರಿ 2 ರನ್‌ಗಳಿಸಿ ಗಾಯಗೊಂಡು ನಿವೃತ್ತರಾದರು.

ಆದರೆ ಮೂನಿ ಆಶ್ಲೇ ಗಾರ್ಡ್ನರ್ ಅವರೊಂದಿಗೆ 36 ಎಸೆತಗಳಲ್ಲಿ 63 ರನ್‌ಗಳ ಅಜೇಯ ಜೊತೆಯಾಟ ನಡೆಸಿ ಆಸ್ಟ್ರೇಲಿಯಾಕ್ಕೆ ಸುಲಭವಾದ ಗೆಲುವು ತಂದುಕೊಟ್ಟರು. ಮೂನಿ 36 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ ಅಜೇಯ 61 ರನ್ ಗಳಿಸಿದರು. ಗಾರ್ಡ್ನರ್ 20 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ ಅಜೇಯ 35 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ, ಶನೆಲ್ ಹೆನ್ರಿ ಮತ್ತು ಹೇಲಿ ಮ್ಯಾಥ್ಯೂಸ್ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ ಪ್ರಶಸ್ತಿ ಸುತ್ತು (ಫೈನಲ್) ತಲುಪಿದ ತಂಡಗಳ ವಿವರ

ಆಸ್ಟ್ರೇಲಿಯಾ ತಂಡ: 8 ಬಾರಿ (2010, 2012, 2014, 2016, 2018, 2020, 2023, 2026)- 6 ಬಾರಿ ಚಾಂಪಿಯನ್

ಇಂಗ್ಲೆಂಡ್ ತಂಡ: 4 ಬಾರಿ (2009, 2012, 2014, 2018)- ಒಂದು ಬಾರಿ ಚಾಂಪಿಯನ್

ನ್ಯೂಜಿಲ್ಯಾಂಡ್ ತಂಡ: 3 ಬಾರಿ (2009, 2010, 2024)- ಒಂದು ಬಾರಿ ಚಾಂಪಿಯನ್

ದಕ್ಷಿಣ ಆಫ್ರಿಕಾ ತಂಡ: 2 ಬಾರಿ (2023, 2024)- 2 ಬಾರಿಯೂ ರನ್ನರ್ ಅಪ್

ಭಾರತ ತಂಡ : ಒಂದು ಬಾರಿ (2016)- ರನ್ನರ್ ಅಪ್

ವೆಸ್ಟ್ ಇಂಡೀಸ್ ತಂಡ: ಒಂದು ಬಾರಿ (2016)- ಚಾಂಪಿಯನ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports