Alia Nassif: ಜಗತ್ತಿನ ಅತೀ ಭ್ರಷ್ಟ ಸಂಸದೆ ಅರೆಸ್ಟ್! ಆಕೆ ಮನೆಯಲ್ಲಿ ಸಿಕ್ತು 148 ಕೋಟಿ ಕ್ಯಾಶ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭ್ರಷ್ಟ ಸಂಸದೆ ಅರೆಸ್ಟ್


Last Updated:

Alia Nassif: ಜಗತ್ತಿನ ಅತೀ ಭ್ರಷ್ಟ ಸಂಸದೆ ಎಂಬ ಕುಖ್ಯಾತಿ ಪಡೆದ ಸಂಸದೆಯೊಬ್ಬಳನ್ನು ಅರೆಸ್ಟ್ ಮಾಡಲಾಗಿದೆ. ಆಕೆ ಮನೆಯಲ್ಲಿ ಬರೋಬ್ಬರಿ 146 ಕೋಟಿ ರೂಪಾಯಿ ಕ್ಯಾಶ್, ಅಪಾರ ಪ್ರಮಾಣದ ಚಿನ್ನಾಭರಣ ಸೀಜ್ ಮಾಡಿದ್ದಾರೆ.

ಭ್ರಷ್ಟ ಸಂಸದೆ ಅರೆಸ್ಟ್
ಭ್ರಷ್ಟ ಸಂಸದೆ ಅರೆಸ್ಟ್

ಇರಾಕ್: ಜಗತ್ತಿನ ಅತೀ ಭ್ರಷ್ಟ ಸಂಸದೆ (world’s most corrupt MP) ಎಂಬ ಕುಖ್ಯಾತಿ ಪಡೆದ ಸಂಸದೆಯೊಬ್ಬಳನ್ನು ಅರೆಸ್ಟ್ ಮಾಡಲಾಗಿದೆ. ಈಕೆಯ ಜೊತೆಗೆ ಈಕೆಯ ಮಗನನ್ನೂ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ (anti-corruption operation) ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಕೆಯ ಮನೆ ಪರಿಶೀಲನೆ ವೇಳೆ ಅಧಿಕಾರಿಗಳೇ ಶಾಕ್‌ಗೆ ಒಳಗಾಗಿದ್ದಾರಂತೆ. ಬರೋಬ್ಬರಿ 146 ಕೋಟಿ ರೂಪಾಯಿ ಕ್ಯಾಶ್, ಅಪಾರ ಪ್ರಮಾಣದ ಚಿನ್ನಾಭರಣ ಸೀಜ್ ಮಾಡಿದ್ದಾರೆ.

148 ಕೋಟಿ ರೂಪಾಯಿ ನಗದು ಹಣ ಸೀಜ್

ಅಂದಹಾಗೆ ಆ ಭ್ರಷ್ಟ ಸಂಸದೆ ಇರಾಕ್‌ನ ಸಂಸತ್ ಸದಸ್ಯೆ ಅಲಿಯಾ ನಾಸಿಫ್. ಈಕೆ ಜೊತೆ ಈಕೆಯ ಮಗನನ್ನು ಇರಾಕ್‌ನ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ವೇಳೆ ಅರೆಸ್ಟ್ ಮಾಡಲಾಗಿದೆ. ಆಕೆ ನಿವಾಸದ ಮೇಲೆ ಇರಾಕಿನ ಭ್ರಷ್ಟಾಚಾರ-ವಿರೋಧಿ ತನಿಖೆಯ ಭಾಗವಾಗಿ ನಡೆಸಿದ ದಾಳಿಯ ಸಮಯದಲ್ಲಿ ಅಧಿಕಾರಿಗಳು 20 ಬಿಲಿಯನ್ ಇರಾಕಿ ದಿನಾರ್‌ಗಳಿಗೂ ಹೆಚ್ಚು ಅಂದರೆ ಸುಮಾರು $15.5 ಮಿಲಿಯನ್ ಅಥವಾ £11.4 ಮಿಲಿಯನ್ ಹಣ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 146 ಕೋಟಿ ರೂಪಾಯಿ ನಗದು ಮತ್ತು ಅಪಾರ ಪ್ರಮಾಣದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಭಷ್ಟಾಚಾರದ ವಿರುದ್ಧ ಮಾತನಾಡಿ ಫೇಮಸ್!

ಸಂಸದೆ ಅಲಿಯಾ ನಾಸಿಫ್ ಈ ಹಿಂದೆ ಇರಾಕ್‌ನ ಮಾಜಿ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಜೊತೆಯಲ್ಲಿ ಕೆಲಸ ಮಾಡಿದ್ದರು. ಆಕೆ ಸ್ಟೇಲ್‌ ಆಫ್‌ ಲಾ ಕೋಲಿಷನ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಈ ಹಿಂದೆ ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಖ್ಯಾತಿ ಗಳಿಸಿದ್ದರು. ಈಗ ಖುದ್ದು ಅಪಾರ ಪ್ರಮಾಣದ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಲಾಗಿದ್ದು ನೋಡಿ ಆಕೆಯ ಬೆಂಬಲಿಗರೇ ಶಾಕ್‌ಗೆ ಒಳಗಾಗಿದ್ದಾರೆ.

ಕುದುರೆ ಲಾಯದಲ್ಲೂ ತುಂಬಿತ್ತು ಹಣ, ಬಂಗಾರ!

ಮನೆಗಳಲ್ಲಿ ಅಡಗಿಸಿಟ್ಟಿದ್ದ ಹಣ ಮತ್ತು ಚಿನ್ನವನ್ನು ಪಡೆಗಳು ಪತ್ತೆ ಹಚ್ಚಿವೆ. ಕುದುರೆಗಳಿಂದ ತುಂಬಿದ ಲಾಯ ಸೇರಿದಂತೆ ಎಲ್ಲಾ ರೀತಿಯ ಐಷಾರಾಮಿ ವಸ್ತುಗಳನ್ನು ಸಹ ಅವರು ಪತ್ತೆ ಮಾಡಿದ್ದಾರೆ. ಬಡತನ ಸಾಮಾನ್ಯವಾಗಿ ಕಂಡುಬರುವ ಇರಾಕ್‌ನಂತಹ ದೇಶದಲ್ಲಿ, ಇದನ್ನು ಭ್ರಷ್ಟಾಚಾರದ ಸ್ಪಷ್ಟ ಪುರಾವೆಯಾಗಿ ನೋಡಲಾಗುತ್ತದೆ.

ಒಟ್ಟೂ 3 ಸಾವಿರ ಕೋಟಿ ಕ್ಯಾಶ್ ವಶ

ಇನ್ನು ಇರಾಕ್ ಪ್ರಧಾನಿ ಅಲಿ ಅಲ್ ಜೈದಿ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಯಿತು. ಇರಾಕ್‌ನ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ ಹಲವಾರು ಸಂಸದರು ಮತ್ತು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಇತರೆ ಸ್ಥಳಗಳಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭ್ರಷ್ಟ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ಬಂಧನ

ಇರಾಕ್‌ನ ರಾಜ್ಯ ಸುದ್ದಿ ಸಂಸ್ಥೆ ಬಂಧಿತರಲ್ಲಿ ಕೆಲವರ ಹೆಸರನ್ನು ತಿಳಿಸಿದೆ. ಅಲ್-ಅಜ್ಮ್ ಅಲೈಯನ್ಸ್‌ನ ಮುಖ್ಯಸ್ಥ ಮತ್ತು ಸಂಸತ್ ಸದಸ್ಯ ಮುತನ್ನಾ ಅಲ್-ಸಮರ್ರೈ ಎಂದು ಅದು ಉಲ್ಲೇಖಿಸುತ್ತದೆ. ಈ ಪಟ್ಟಿಯಲ್ಲಿ ಹಾಲಿ ಶಾಸಕರಾದ ಜಿಯಾದ್ ಅಲ್-ಜನಾಬಿ, ಬಹಾ ಅಲ್-ನೂರಿ, ಮೊಹಮ್ಮದ್ ಅಲ್-ಕರ್ಬೌಲಿ, ಅಲಿಯಾ ನಾಸಿಫ್, ಮೊಹಮ್ಮದ್ ಜಮಿಲ್ ಅಲ್-ಮಯಾಹಿ, ಹಸನ್ ಅಲ್-ಖಫಾಜಿ, ಅಬ್ದುಲ್ ರಹಮಾನ್ ಅಲ್-ಲುವೈಜಿ, ಮುಧರು ಅಲ್-ಕರಾವಿ, ಹಿಂದ್, ಅಲ್-ಜಬ್ಬುರ್ಸಿಮನ್, ಅಲ್-ಜಬ್ಬುರಸಿಮಾನ್, ಅಲ್-ಜಬ್ಬುರ್ಸಿಮನ್ ಕೂಡ ಸೇರಿದ್ದಾರೆ. ಅಲ್-ಖೈಸಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಇನ್ನು ಇದೇ ವೇಳೆ ಹಲವು ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನೂ ಬಂಧಿಸಲಾಗಿದೆ ಎಂದ ಗಲ್ಫ್ ನ್ಯೂಸ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed