Women’s T20 World Cup: ನೆದರ್ಲ್ಯಾಂಡ್ಸ್ ವಿರುದ್ಧ ಬೃಹತ್​ ಜಯ ಸಾಧಿಸಿದ ಭಾರತ! ಸತತ 2ನೇ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಕೌರ್ ಪಡೆ | ಕ್ರೀಡಾ ಸುದ್ದಿ | ACTPnews

ಭಾರತ ಮಹಿಳಾ ತಂಡ


Last Updated:

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್​​ಗಳಲ್ಲಿ 5 ವಿಕೆಟ್ ಕಳೆದುಕೊಂಡಯ 209 ರನ್​ಗಳಿಸಿತ್ತು. ನಂತರ 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ 17.3 ಓವರ್​​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 114ರನ್​ಗಳಿಗೆ ಸರ್ವಪತನಗೊಂಡಿತು.

ಭಾರತ ಮಹಿಳಾ ತಂಡ
ಭಾರತ ಮಹಿಳಾ ತಂಡ

ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ (Women’s T20 World Cup) ಭಾರತ ಮಹಿಳಾ ತಂಡ ನೆದರ್ಲ್ಯಾಂಡ್ಸ್ ತಂಡವನ್ನ (Netherlands Women vs India Women) ಮಣಿಸುವ ಮೂಲಕ ಸತತ 2ನೇ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್​​ಗಳಲ್ಲಿ 5 ವಿಕೆಟ್ ಕಳೆದುಕೊಂಡಯ 209 ರನ್​ಗಳಿಸಿತ್ತು. ನಂತರ 210 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ 17.3 ಓವರ್​​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 114ರನ್​ಗಳಿಗೆ ಸರ್ವಪತನಗೊಂಡಿತು. ಭಾರತ ತಂಡ ತನ್ನ ವಿಶ್ವಕಪ್​ ಇತಿಹಾಸದಲ್ಲಿ ಗರಿಷ್ಠ ರನ್ಗಳ ಅಂತರದಿಂದ ಗೆಲುವು ಸಾಧಿಸಿತು. ಈ ಗೆಲುವು ಭಾರತ ತಂಡಕ್ಕೆ ಗುಂಪು ಹಂತದಲ್ಲಿ ಅಗ್ರಸ್ಥಾನ ತಂದುಕೊಟ್ಟಿದೆ.

ಶತಕದ ಜೊತೆಯಾಟ

ನೆದರ್ಲ್ಯಾಂಡ್ಸ್ ನಾಯಕಿ ಬಾಬೆಟ್ ಡಿ ಲೀಡೆ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 70 ಎಸೆತಗಳಲ್ಲಿ 115 ರನ್‌ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ನೀಡಿದರು. ಶೆಫಾಲಿ 38 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 55 ರನ್ ಗಳಿಸಿ ಔಟಾದರು. ನಂತರ ಮಂಧಾನ ಜೆಮಿಮಾ ರೊಡ್ರಿಗಸ್ ಜೊತೆಗೆ ಜವಾಬ್ದಾರಿ ವಹಿಸಿಕೊಂಡರು. ಇಬ್ಬರೂ 26 ಎಸೆತಗಳಲ್ಲಿ ಎರಡನೇ ವಿಕೆಟ್‌ಗೆ 47 ರನ್ ಸೇರಿಸಿದರು. 16ನೇ ಓವರ್‌ನ ಕೊನೆಯ ಎಸೆತದಲ್ಲಿ ಸ್ಮೃತಿ ಮಂಧಾನಾ ಔಟ್ ಆದರು. ಕಳೆದ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದ ಮಂಧಾನಾ ಇಂದೂ ಕೂಡ 47 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 11 ಬೌಂಡರಿಗಳೊಂದಿಗೆ 74 ರನ್ ಗಳಿಸಿದರು.

ಫಿನಿಷಿಂಗ್ ಟಚ್ ಕೊಟ್ಟ ರಿಚಾ-ದೀಪ್ತಿ

ಜೆಮಿಮಾ 13 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 19 ರನ್ ಗಳಿಸಿ ಔಟಾದರು. ಯಸ್ತಿಕಾ ಭಾಟಿಯಾರಿಂದ ಕೇವಲ 3 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಭಾರತ 168 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಕೊನೆಯಲ್ಲಿ ರಿಚಾ ಘೋಷ್ (ಔಟಾಗದೆ 20) ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ (12) ಐದನೇ ವಿಕೆಟ್‌ಗೆ 15 ಎಸೆತಗಳಲ್ಲಿ 31 ರನ್ ಸೇರಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ದೀಪ್ತಿ ಶರ್ಮಾ (ಔಟಾಗದೆ 10) ಇನ್ನಿಂಗ್ಸ್‌ನ ಕೊನೆಯ ಎರಡು ಎಸೆತಗಳಲ್ಲಿ ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.

ನೆದರ್ಲ್ಯಾಂಡ್ಸ್ ಪರ ಕ್ಯಾರೋಲಿನ್ ಡಿ ಲ್ಯಾಂಗ್ 2 ವಿಕೆಟ್ ಪಡೆದರು. ಹೀದರ್ ಸೀಜರ್,ಐರಿಸ್ ಜ್ವಿಲ್ಲಿಂಗ್ ಹಾಗೂ ಮೀರ್ತ್ ವಾನ್ ಡೆನ್ ರಾತ್ ತಲಾ ಒಂದು ವಿಕೆಟ್ ಪಡೆದರು.

ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ನೆದರ್ಲ್ಯಾಂರ್ಡ್ಸ್

ನಂತರ 210 ರನ್​​ಗಳ ಬೃಹತ್ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ ಮೊದಲ ವಿಕೆಟ್ ಜೊತೆಯಾಟದಲ್ಲಿ 34 ರನ್ ಸೇರಿಸಿತು. ಹೀದರ್​ ಸೀಜರ್ಸ್ 16 ಎಸೆತಗಳಲ್ಲಿ 21 ರನ್​ಗಳಿಸಿದರು. ನಂದನಿ ಶರ್ಮಾ ಸೀಜರ್ಸ್ ವಿಕೆಟ್ ಪಡೆದು ಭಾರತಕ್ಕೆ ಮೊದಲ ಬ್ರೇಕ್ ತಂದುಕೊಟ್ಟರು. ಮೊದಲ ವಿಕೆಟ್ ಪತನದ ನಂತರ ನೆದರ್ಲ್ಯಾಂಡ್ಸ್​ಗೆ ಚೇತರಿಸಿಕೊಳ್ಳಲು ಭಾರತೀಯ ಬೌಲರ್​ಸ್ ಅವಕಾಶ ನೀಡಲಿಲ್ಲ. ನಾಯಕಿ ಬಾಬಟ್​​ ಡಿ ಲೀಡೆ 28 ರನ್​​ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸ್ಟೆರ್ ಕಾಲೀಸ್ 18, ಫೀಬಿ ಮೊಲ್ಕನ್‌ಬೂರ್ 15 ರನ್​ಗಳಿಸಿ ಎರಡಂಕಿ ದಾಟಿದ ಬ್ಯಾಟರ್ಸ್ ಎನಿಸಿಕೊಂಡರು.

ಭಾರತದ ಪರ ಶ್ರೀಚರಣಿ 19ಕ್ಕೆ4, ಶಫಾಲಿ ವರ್ಮಾ 20ಕ್ಕೆ3, ನಂದನಿ ಶರ್ಮಾ 22ಕ್ಕೆ2, ದೀಪ್ತಿ ಶರ್ಮಾ 26ಕ್ಕೆ1 ವಿಕೆಟ್ ಪಡೆದರು. ಭಾರತದ ಮುಂದಿನ ಪಂದ್ಯ ಜೂನ್​ 21 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed