WhatsApp status: ‘ಲಕ್ಷ ಲಕ್ಷ ಹಣದೊಂದಿಗೆ ಮಗು ಆಟ’, ಸ್ನೇಹಿತನ ಸ್ಟೇಟಸ್​ ನೋಡಿ ಕಳ್ಳತನ; ಆದರೆ ಕೊನೆಗೆ ಬಿಗ್ ಟ್ವಿಸ್ಟ್! | Crime News | ACTPnews

ಬಿಲ್ಡಪ್ ಕೊಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ!


Last Updated:

ಸಾಮಾಜಿಕ ಜಾಲತಾಣದಲ್ಲಿ ಲೈಕ್, ವೀವ್ಸ್ ಹಾಗೂ ಫಾಲೋವರ್ಸ್​ಗಾಗಿ ವ್ಯಕ್ತಿಯೊಬ್ಬರು ಜೀವ ಕಳೆದುಕೊಳ್ಳುವ ಹಂತಕ್ಕೆ ತೆರಳಿದ ಘಟನೆ ನಡೆದಿದೆ. ತನ್ನ ಬಳಿ ಕಂತೆ ಕಂತೆ ಹಣ ಇರುವಂತೆ ಎಐ ವಿಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್​ ಹಾಕಿದ್ದ ವ್ಯಕ್ತಿಯ ಮನೆಯಲ್ಲಿ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ.

ಬಿಲ್ಡಪ್ ಕೊಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ!
ಬಿಲ್ಡಪ್ ಕೊಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ (Social Media) ತಮ್ಮನ್ನು ತಾವು ಶ್ರೀಮಂತರು ಎಂದು ತೋರಿಸಿಕೊಳ್ಳುವುದು ಹಲವರಿಗೆ ಅಭ್ಯಾಸವಾಗಿದೆ. ಆದರೆ ಮಹಾರಾಷ್ಟ್ರದ (Maharashtra) ನಾಗಪುರ್ ಮೂಲದ ಸಮೀರ್ ಯಾಚಲ್ವಾರ್ ಎಂಬಾತ ಇಂತಹದ್ದೇ ಫೇಕ್ ವಿಡಿಯೋ (Fake AI Video) ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ತಾನು ಭಾರೀ ಶ್ರೀಮಂತ ಅಂತ ಸ್ನೇಹಿತರ ಬಳಿ ಬಿಲ್ಡಪ್ ನೀಡುತ್ತಿದ್ದನಂತೆ. ಅಲ್ಲದೇ ಎಐ ತಂತ್ರಜ್ಞಾನ ಬಳಸಿ ಆತನ ಮನೆಯಲ್ಲಿ ಕಂತೆ ಕಂತೆ ನೋಟು (Money) ಇರುವಂತೆ ವಿಡಿಯೋ ಮಾಡುತ್ತಿದ್ದನಂತೆ. ಅಚ್ಚರಿ ವಿಷಯ ಅಂದರೆ, ಸ್ನೇಹಿತರೇ (Friends) ವಿಡಿಯೋ ನೋಡಿ ದರೋಡೆಗೆ ಯತ್ನಿಸಿದ್ದಾರೆ.

ನಾಗಪುರ ಮೂಲದ ಸಂತ್ರಸ್ತ ಸಮೀರ್, ಸ್ನೇಹಿತರ ಬಳಿ ಶ್ರೀಮಂತನಂತೆ ಪೋಸ್ ಕೊಡುತ್ತಿದ್ದ. ಇದಕ್ಕಾಗಿ ಆತ ಎಐ ಟೂಲ್ಸ್ ಬಳಕೆ ಮಾಡಿಕೊಂಡು ತನ್ನ ಮಗಳು ಕಂತೆ ಕಂತೆ ಹಣದೊಂದಿಗೆ ಆಟವಾಡುತ್ತಿದ್ದಂತೆ. ತನ್ನ ಮನೆಯಲ್ಲಿ ಕಂತೆ ಕಂತೆ ಹಣ ಜೋಡಿಸಿ ಇಟ್ಟಂತೆ ಪದೇ ಪದೇ ವಿಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್​ ಹಾಕಿಕೊಂಡಿದ್ದನಂತೆ.

ಆದರೆ ಎಐ ತಂತ್ರಜ್ಞಾನ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಆತನ ಸ್ನೇಹಿತ ಶ್ರೇಯಸ್ ಬೋರ್ಕರ್ ಎಂಬಾತ ಈ ವಿಡಿಯೋ ನೋಡಿ ಶಾಕ್ ಹಾಕಿದ್ದ. ಅಲ್ಲದೇ ತನ್ನ ಸ್ನೇಹಿತನನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಲು ಪ್ಲ್ಯಾನ್ ಮಾಡಿದ್ದನಂತೆ. ಜೊತೆಗೆ ಕೆಲವರೊಂದಿಗೆ ಸೇರಿ ಸ್ನೇಹಿತರ ಮನೆಯಲ್ಲೇ ದರೋಡೆ ಮಾಡಲು ಪ್ಲ್ಯಾನ್ ಮಾಡಿದ್ದನಂತೆ. ಸ್ನೇಹಿತ ಕುಟುಂಬದೊಂದಿಗೆ ಟೂರ್​​ಗೆ ಹೋದಾಗ ಸ್ನೇಹಿತನ ಮನೆಗೆ ನುಗ್ಗಿ ದರೋಡೆ ಕೂಡ ಮಾಡಿದ್ದರಂತೆ. ಆಗ ಮನೆಯಲ್ಲಿ ಸುಮಾರು 4.5 ಲಕ್ಷ ಚಿನ್ನಾಭರಣ ಹಾಗೂ ಸುಮಾರು 4 ಲಕ್ಷ ರೂಪಾಯಿ ನಗದು ಸಿಕ್ಕಿತ್ತಂತೆ. ಈ ಬಗ್ಗೆ ಆತ ಪೊಲೀಸರಿಗೆ ದೂರು ನೀಡಿದ್ದ, ಪೊಲೀಸರು ಪ್ರಕರಣದ ತನಿಖೆ ಕೂಡ ನಡೆಸುತ್ತಿದ್ದರು.

ಆರೋಪಿಗಳನ್ನು ಬಂಧಿಸಿದ ಪೊಲೀಸರು

ಆದರೆ, ಮನೆಯಲ್ಲಿ ಕಳ್ಳತನ ಮಾಡಿದ ಬಳಿಕವೂ ಆರೋಪಿಗಳ ಹಣದ ಆಸೆ ದೂರ ಆಗಿರಲಿಲ್ಲ. ಆತನ ಬಳಿ ಇನ್ನು ಹಣ ಇದೆ ಎಂದು ಭಾವಿಸಿ, ಆತನಿಗೆ ವಾಟ್ಸಾಪ್ ಕರೆಯ ಮೂಲಕ ಬೆದರಿಕೆ ಹಾಕಿ, 40 ಲಕ್ಷ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರಂತೆ. ಇಲ್ಲ ಎಂದರೇ, ನಿನ್ನ ಪತ್ನಿ, ಮಗಳನ್ನು ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರಂತೆ. ಆರೋಪಿಗಳ ಬೆದರಿಕೆ ಕರೆಗಳು ಹೆಚ್ಚಾಗುತ್ತಿದ್ದಂತೆ ಸಂತ್ರಸ್ತ ಪೊಲೀಸರಿಗೆ ಮಾಹಿತಿ ನೀಡಿದ್ದ.

ಇದನ್ನೂ ಓದಿ: Hassan: ಬೇಲೂರಿನ ಚೆನ್ನಕೇಶವ ದೇವಾಲಯದ ಹುಂಡಿ‌ ಹಣ ಕಳ್ಳತನ; ಎಣಿಕೆ ವೇಳೆ ಲಕ್ಷ ಲಕ್ಷ ಹಣ ಎಗರಿಸಿದ ವಿಡಿಯೋಗ್ರಾಫರ್

ಸಂತ್ರಸ್ತ ವ್ಯಕ್ತಿಯ ದೂರಿನ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವಿಚಿತ್ರ ಪ್ರಕರಣದ ಬಗ್ಗೆ ಮಾತನಾಡಿದ ಬೆಳ್ತರೋಡಿ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಅಹೆರ್, ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸ್ಟೇಟಸ್ ಹಾಕಿದ ಕಾರಣದಿಂದಲೇ ಕೃತ್ಯ ನಡೆದಿದೆ ಎಂದು ಹೇಳಿದ್ದಾರೆ. ಆರೋಪಿಗಳು ಸಮೀರ್ ಎಲ್ಲಿ ಹೋಗ್ತಾನೆ ಬರ್ತಾನೆ ಅಂತ ತಿಳಿದುಕೊಳ್ಳಲು, ಆತನ ಬೈಕ್‌ನಲ್ಲಿ ಮೊಬೈಲ್ ಒಂದನ್ನು ಸೈಲೆಂಟ್ ಮಾಡಿ ಯಾರಿಗೂ ತಿಳಿಯದಂತೆ ಇಟ್ಟಿದ್ದರಂತೆ. ಇನ್ನು, ಸಾಮಾಜಿಕ ಜಾಲತಾಣದಲ್ಲಿ ಇಲ್ಲದ ಶ್ರೀಮಂತಿಕೆ ಪ್ರದರ್ಶನಕ್ಕೆ ನಿಂತರೆ ಏನೆಲ್ಲಾ ಅಪಾಯಗಳು ಎದುರಾಗಬಹುದು ಎಂಬುವುದಕ್ಕೆ ಇದು ನೈಜ ಉದಾಹರಣೆ ಎಂದು ಪೊಲೀಸರು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಕನ್ನಡ ಸುದ್ದಿ/ ನ್ಯೂಸ್/Crime/

WhatsApp status: ‘ಲಕ್ಷ ಲಕ್ಷ ಹಣದೊಂದಿಗೆ ಮಗು ಆಟ’, ಸ್ನೇಹಿತನ ಸ್ಟೇಟಸ್​ ನೋಡಿ ಕಳ್ಳತನ; ಆದರೆ ಕೊನೆಗೆ ಬಿಗ್ ಟ್ವಿಸ್ಟ್!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed