Last Updated:
ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಧೋನಿ ಸ್ಟೈಲ್‌ನಲ್ಲಿ ರನೌಟ್ ಮಾಡಲು ಪ್ರಯತ್ನಿಸಿ ಇಶಾನ್ ಕಿಶನ್ ಸುಲಭವಾದ ಅವಕಾಶವನ್ನು ಕೈಚೆಲ್ಲಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ 81 ರನ್ ಗಳೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿ ಪ್ಲೇಯರ್ ಆಫ್ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಶೈಲಿ ಕೀಪಿಂಗ್ ವಿಶೇಷ (Wicket Keeper) ಎಂದೇ ಗುರುತಿಸಿಕೊಂಡಿದೆ. ವಿಕೆಟ್‌ಗಳ ಹಿಂದೆ ಚೆಂಡನ್ನು ನೋಡದೆಯೇ ಒಂದೇ ಕೈನಲ್ಲಿ ಸ್ಟಂಪ್ಸ್ ಬ್ರೇಕ್ ಮಾಡುವುದರಲ್ಲಿ ಧೋನಿ ಹೆಸರು ಮಾಡಿದ್ದಾರೆ. ಆದರೆ ಇಂತಹ ತಂತ್ರ, ಕೌಶಲ್ಯಗಳನ್ನು ಹೊಂದುವುದು ಸುಲಭದ ಕೆಲಸ ಅಲ್ಲ. ಇಂತಹದ್ದೇ ಘಟನೆಯೊಂದು ಜಿಂಬಾಬ್ವೆ (Ind vs Zim) ವಿರುದ್ಧದ ಪಂದ್ಯದಲ್ಲಿ ನಡೆಯಿತು. 28 ವರ್ಷದ ಇಶಾನ್ ಕಿಶನ್, ಧೋನಿ ಶೈಲಿಯನ್ನು ಕಾಪಿ ಮಾಡಲು ಹೋಗಿ ರನೌಟ್ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ (Run Out Chance). ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಜಿಂಬಾಬ್ವೆ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಸ್ಪಿನ್ನರ್ ರವಿ ಬಿಷ್ಣೋಯ್ ಮಾಡಿದ ಓವರ್‌ನ 5ನೇ ಎಸೆತದಲ್ಲಿ ಬ್ಯಾಟರ್ ತಡಿವನಾಶೆ ಮರುಮಾನಿ ಅದನ್ನು ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಹೊಡೆದು ಸಿಂಗಲ್ ಓಡಿದರು. ಆದರೆ ಆತನೊಂದಿಗಿದ್ದ ನಾನ್-ಸ್ಟ್ರೈಕರ್ ನ್ಯೂಮಾನ್ ಎರಡನೇ ರನ್‌ಗಾಗಿ ಅರ್ಧ ಕ್ರಿಸ್ಗೆ ಬಂದಿದ್ದ. ಆದರೆ ಮರುಮಾನಿ ನೋ ಎಂದ ಕಾರಣ, ವಿಕೆಟ್ ಕೀಪರ್ ಕಡೆಗೆ ವಾಪಸ್ ಓಡಿದ್ದರು. ಇದರೊಂದಿಗೆ ಸ್ಟ್ರೈಕರ್ ಕಡೆಗೆ ನಿಂತುಕೊಂಡಿದ್ದರಿಂದ ಒಂದು ಕಡೆ ಕ್ರಿಸ್ ಖಾಲಿ ಆಗಿತ್ತು.
ಫೀಲ್ಡರ್‌ನಿಂದ ನೇರ ಚೆಂಡು ಇಶಾನ್ ಕಿಶನ್ ಕೈಸೇರಿತ್ತು. ರನೌಟ್ ಮಾಡಲು ಸಾಕಷ್ಟು ಸಮಯ ಕೂಡ ಇತ್ತು. ವಿಕೆಟ್ ಬಳಿ ನಡೆದುಕೊಂಡು ಹೋಗಿ ಔಟ್ ಮಾಡಿದ್ದರು ಬ್ಯಾಟರ್ ಬರಲು ಸಮಯ ಉಳಿಯುತ್ತಿತ್ತು. ಆದರೆ ಇಶಾನ್, ಕ್ರಿಸ್ ಬಳಿ ಹೋಗದೆ ವಿಕೆಟ್ ಕಡೆಯೂ ನೋಡದೆ ಅಂಡರ್ ಹರ್ಮ್ ಥ್ರೋ ಮಾಡಿದ್ದರು. ಚೆಂಡು ನೇರವಾಗಿ ಸ್ಟಂಪ್ಸ್‌ಗೆ ಬಡಿಯುತ್ತದೆ ಎಂದುಕೊಂಡಿದ್ದರು. ಆದರೆ ಚೆಂಡು ಮಿಸ್ ಆಗಿ ಹೋಯ್ತು. ಇದರೊಂದಿಗೆ ಇಶಾನ್ ನಿರಾಸೆಯಿಂದ ತಲೆ ಮೇಲೆ ಕೈಹೊತ್ತು ಕುಳಿತರು.
ಪಂದ್ಯದ ಬಳಿಕ ಮಾತನಾಡಿದ ಇಶಾನ್, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ‘ಸರಿಯಾದ ಸಮಯದಲ್ಲಿ ಬ್ಯಾಟರ್ ಕ್ರಿಸ್ಗೆ ಎಂಟ್ರಿಕೊಟ್ಟಿರುವ ಎಂದು ತಪ್ಪಾಗಿ ತಿಳಿದೆ. ಥ್ರೋ ಮಾಡುವ ಸಂದರ್ಭದಲ್ಲಿ ನನ್ನಿಂದ ತಪ್ಪಾಗಿದೆ. ಮತ್ತೆ ಇಂತಹ ಸಂದರ್ಭ ಎದುರಾದರೆ, ಖಂಡಿತ ಸ್ಟಂಪ್ಸ್ ಕಡೆ ನೋಡಿ ಸರಿಯಾದ ರೀತಿಯಲ್ಲಿ ರನೌಟ್ ಮಾಡ್ತೀನಿ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಪಂದ್ಯದಲ್ಲಿ ಮರುಮಾನಿ, 19 ಎಸೆತಗಳಲ್ಲಿ 24 ರನ್ ಗಳಿಸಿದರೆ, ಮತ್ತೊಂದು ಕಡೆ ಬ್ರಯಾನ್ 19 ಎಸೆತಗಳಲ್ಲಿ 32 ರನ್ ಗಳಿಸಿದರು.
ವಿಕೆಟ್ ಕೀಪಿಂಗ್‌ನಲ್ಲಿ ತಪ್ಪು ಮಾಡಿದರೂ, ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್ ಈ ಪಂದ್ಯದಲ್ಲಿ ಹೀರೋ ಆಗಿ ನಿಂತರು. ಕೇವಲ 44 ಎಸೆತಗಳಲ್ಲಿ 09 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 81 ರನ್ ಗಳಿಸಿದರು. ಉಳಿದಂತೆ ತಿಲಕ್ ವರ್ಮಾ 29 ಎಸೆತಗಳಲ್ಲಿ 60 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ ಟೀಂ ಇಂಡಿಯಾ ಸ್ಕೋರ್ 219 ರನ್ ಆಗಿತ್ತು. ಆ ಬಳಿಕ ಜಿಂಬಾಬ್ವೆ ತಂಡವನ್ನು 129 ರನ್‌ಗಳಿಗೆ ಆಲೌಟ್ ಮಾಡಿ ಭಾರತ 90 ರನ್ ಗಳ ಅಂತರದ ಗೆಲುವನ್ನು ಪಡೆದುಕೊಂಡಿತ್ತು. ಈ ಗೆಲುವಿನೊಂದಿಗೆ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯನ್ನು 2-0ಯೊಂದಿಗೆ ಗೆದ್ದು ಬೀಗಿದೆ.














