Vivek Simha: ಅನಿರೀಕ್ಷಿತವಾಗಿ ಸಿಕ್ಕ ಸಿನಿಮಾ, ಮರೆಯಲಾಗದ ಪಾತ್ರ; ಮನಬಿಚ್ಚಿ ಮಾತನಾಡಿದ ವಿವೇಕ್ ಸಿಂಹ | | ACTPnews

"ಅನಿರೀಕ್ಷಿತ ಅತಿಥಿಗಳು ಚಿತ್ರದ ಪಾತ್ರ ಸಿಕ್ಕಿರೋದೇ ಅನಿರೀಕ್ಷಿತ"; ವಿವೇಕ್ ಸಿಂಹ Exclusive ಸಂದರ್ಶನ!


Last Updated:

ಅನಿರೀಕ್ಷಿತ ಅತಿಥಿಗಳು ಚಿತ್ರದ ಕತೆಯನ್ನ ಒಟ್ಟಿಗೆ ಕುಳಿತು ಬರೆದಿದ್ದೇವೆ. ರಂಗಭೂಮಿಯ ಎಲ್ಲ ಸ್ನೇಹಿತರೇ ಸೇರಿ ಈ ಚಿತ್ರ ಮಾಡಿದ್ದೇವೆ. ಆದರೆ, ಈ ಒಂದು ಚಿತ್ರದಲ್ಲಿ ನನಗೂ ಒಂದು ಪಾತ್ರ ಇದೆ ಅಂತ ಗೊತ್ತೇ ಇರಲಿಲ್ಲ ಅಂತಲೇ ನಟ ವಿವೇಕ್ ಸಿಂಹ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಇನ್ನು ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

"ಅನಿರೀಕ್ಷಿತ ಅತಿಥಿಗಳು ಚಿತ್ರದ ಪಾತ್ರ ಸಿಕ್ಕಿರೋದೇ ಅನಿರೀಕ್ಷಿತ"; ವಿವೇಕ್ ಸಿಂಹ Exclusive ಸಂದರ್ಶನ!
“ಅನಿರೀಕ್ಷಿತ ಅತಿಥಿಗಳು ಚಿತ್ರದ ಪಾತ್ರ ಸಿಕ್ಕಿರೋದೇ ಅನಿರೀಕ್ಷಿತ”; ವಿವೇಕ್ ಸಿಂಹ Exclusive ಸಂದರ್ಶನ!

ಅನಿರೀಕ್ಷಿತ ಅತಿಥಿಗಳು ಚಿತ್ರದ (Anireekshitha Atithigalu Movie) ಕತೆ ಏನು ಅಂತ ಮೊದಲೇ ಗೊತ್ತಿತ್ತು. ರಂಗಭೂಮಿ ಕಲಾವಿದರೇ ಸೇರಿ ಈ ಚಿತ್ರ ಮಾಡಿದ್ದೇವೆ ಅಲ್ವೇ? ಹಾಗಾಗಿಯೇ ಈ ಕತೆ ಹೇಗೆ ಹುಟ್ಟಿದೆ ಅನ್ನೋದು ತಿಳಿದಿದೆ. ಇದರಲ್ಲಿ ಬರುವ ಪಾತ್ರಗಳ ಪರಿಚಯ ಆಗಲೇ ಇತ್ತು. ಗೆಳೆಯ ಹಾಗೂ ಚಿತ್ರದ ಡೈರೆಕ್ಟರ್ ಮನೋಜ್ ಅಣ್ಣಯ್ಯ (Manoj Annaiah) ನಾವೆಲ್ಲ ಒಟ್ಟಿಗೆ ಕೆಲಸ ಮಾಡಿದವರು. ಮನೋಜ್ ಅಭಿನಯ ಕೂಡ ಮಾಡಿದ್ದಾರೆ. ಇವರೆ ಕತೆಯನ್ನ ಬರೆದಿರೋದ್ರಿಂದ ನಾವೆಲ್ಲ ಜೊತೆಗೇನೆ ಇದ್ದೇವು. ಆದರೆ, ಈ ಒಂದು ಚಿತ್ರದಲ್ಲಿ ನನಗೂ ಒಂದು ಪಾತ್ರ ಇದೆ ಅನ್ನೋದು ತಿಳಿದಿರಲಿಲ್ಲ. ಅದು ನಿಜಕ್ಕೂ ಅನಿರೀಕ್ಷಿತವೇ ಆಗಿತ್ತು. ನನಗೆ ಇದು ಅನಿರೀಕ್ಷಿತವಾಗಿ ಸಿಕ್ಕ ಪಾತ್ರ ಅಂತ ಈ ಚಿತ್ರಕ್ಕೆ ಅನಿರೀಕ್ಷಿತ ಅತಿಥಿಗಳು ಅಂತ ಟೈಟಲ್ ಏನೂ ಇಲ್ಲ. ಹೀಗೆ ಚಿತ್ರದ ನಾಯಕ ನಟ ವಿವೇಕ್ ಸಿಂಹ (Vivek Simha) ಹೇಳಿಕೊಂಡಿದ್ದಾರೆ. ನ್ಯೂಸ್ -18 ಕನ್ನಡ ಡಿಜಿಟಲ್‌ ಜೊತೆಗಿನ Exclusive ಸಂದರ್ಶನದಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಅನಿರೀಕ್ಷಿತ ಅತಿಥಿಗಳು….

ಈ ಚಿತ್ರಕ್ಕೆ ಟೈಟಲ್ ತುಂಬಾನೆ ಮುಖ್ಯವಾಗಿದೆ. ಟೈಟಲ್ ಅಲ್ಲಿ ಏನಿದಿಯೋ ಅದು ಚಿತ್ರದಲ್ಲೂ ಇದೆ. ಸಿನಿಮಾ ನೋಡಿದಾಗ ನಿಮಗೆ ಪಕ್ಕಾ ಅನಿಸುತ್ತದೆ.

Anireekshitha Atithigalu Movie Vivek Simha Exclusive Interview with News 18 Kannada Digital

ಸೆಪ್ಟೆಂಬರ್ ಕೊನೆಯಲ್ಲಿ ಪಕ್ಕಾ ರಿಲೀಸ್

(ಚಿತ್ರ ಕೃಪೆ: ವಿವೇಕ್ ಸಿಂಹ ಇನ್‌ಸ್ಟಾಗ್ರಾಮ್)

ಅನಿರೀಕ್ಷಿತ ಅತಿಥಿಗಳು ಅಂತ ಈ ಚಿತ್ರಕ್ಕೆ ಟೈಟಲ್ ಇಟ್ಟಿರೋದು ಸರಿಯಾಗಿಯೇ ಇದೆ ಅನ್ನೋದು ನಿಮಗೆ ಅರ್ಥ ಆಗುತ್ತದೆ. ಅನಿರೀಕ್ಷಿತ ಅತಿಥಿಗಳು ಚಿತ್ರದಲ್ಲಿ ನಮ್ಮ ನಡುವಿನ ಕತೇನೆ ಇದೆ. ಆದರೆ, ಇಲ್ಲಿ ಚಿತ್ರಕಥೆ ವಿಶೇಷವಾಗಿಯೇ ಇದೆ. ನೋಡುಗರಿಗೆ ಥ್ರಿಲ್ ಪಕ್ಕಾ ಸಿಗುತ್ತದೆ.

ನಾನು ಹೀರೋ ಅಲ್ಲ…

ಅನಿರೀಕ್ಷಿತ ಅತಿಥಿಗಳು ಚಿತ್ರದಲ್ಲಿ ನಾಯಕ ಇಲ್ಲ. ನಾಯಕಿನೂ ಇಲ್ಲ. ಆದರೆ, ಇಲ್ಲಿರೋದೆಲ್ಲ ಪಾತ್ರಗಳೇ ಆಗಿವೆ. ಮೈತ್ರಿ ಜಗ್ಗಿ, ಸಂಪ್ರತಿ ಆಳ್ವ, ಹರಿತಾ ಶಾ ಹೀಗೆ ಈ ಎಲ್ಲ ಕಲಾವಿದರು ಚಿತ್ರದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದರೆ, ಇಲ್ಲಿ ಕಥೇನೆ ಹೀರೋ, ಕಥೇನೆ ವಿಲನ್ ನೋಡಿ.

ಈ ಚಿತ್ರದಲ್ಲಿ ಮ್ಯೂಸಿಕ್ ಚೆನ್ನಾಗಿದೆ. ಸ್ವಾಮಿನಾಥನ್ ಆರ್.ಕೆ. ಈ ಚಿತ್ರಕ್ಕೆ ಸಂಗೀತ ಮಾಡಿದ್ದಾರೆ. ಈ ಚಿತ್ರದ ಎರಿಕ್ ವಿಜೆ ಅವರ ಕ್ಯಾಮರಾವರ್ಕ್ ಅದ್ಭುತವಾಗಿಯೇ ಇದೆ.

ಜುಲೈಗೆ ಬರಬೇಕಿತ್ತು

ಜುಲೈ-31ಕ್ಕೆ ಬರಬೇಕಿತ್ತು. ಆದರೆ, ಸೆನ್ಸಾರ್ ಲೇಟ್ ಆಯಿತು. ಚಿತ್ರದ ಮೇಜರ್ ಸೀನ್‌ಗೂ ಕತ್ತರಿ ಬಿತ್ತು. ಆದರೆ, ಈಗ ಎಲ್ಲವೂ ನೀಟ್ ಆಗಿದೆ.

ಟಾಕ್ಸಿಕ್ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಯಿತು ನೋಡಿ. ಆಗಲೇ ನಮ್ಮ ಸಿನಿಮಾದ ರಿಲೀಸ್ ಅನ್ನ ಮುಂದೆ ಹಾಕಿದೇವು. ಇಂತಹ ದೊಡ್ಡ ಚಿತ್ರದ ಮುಂದೆ ಬರೋದು ರಿಸ್ಕ್ ಅಂತಲೇ ನಮ್ಮ ಅನಿರೀಕ್ಷಿತ ಅತಿಥಿಗಳು ಮುಂದೆ ಹಾಕಿದ್ದೇವೆ.

Anireekshitha Atithigalu Movie Vivek Simha Exclusive Interview with News 18 Kannada Digital

ನಾನು ಹೀರೋ ಅಲ್ಲ…

(ಚಿತ್ರ ಕೃಪೆ: ವಿವೇಕ್ ಸಿಂಹ ಇನ್‌ಸ್ಟಾಗ್ರಾಮ್)

ಸೆಪ್ಟೆಂಬರ್ ಕೊನೆಯಲ್ಲಿ ಪಕ್ಕಾ ರಿಲೀಸ್

ನಮ್ಮ ಈ ಚಿತ್ರ ಸೆಪ್ಟೆಂಬರ್ ಕೊನೆಯಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಸಾಂಗ್ಸ್, ಮೋಷನ್ ಪೋಸ್ಟರ್, ಟ್ರೈಲರ್ ಅನ್ನು ರಿಲೀಸ್ ಮಾಡುತ್ತಿದ್ದೇವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed