North Korea: ಬಿಸಿಲ ಬೇಗೆಯನ್ನು ತಡೆಯಲು ನಾಯಿ ಮಾಂಸದ ಸೂಪ್! ಉತ್ತರ ಕೊರಿಯಾ ಜನರಿಗೆ ಫಜೀತಿ ತಂದಿಟ್ಟ ಕಿಮ್ ಜಾಂಗ್ ಉನ್ ಸರ್ಕಾರದ ಆದೇಶ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನಾಯಿ ಮಾಂಸದ ಸೂಪ್​​ ಕುಡಿಯಲು ಉತ್ತರ ಕೊರಿಯಾ ಜನರಿಗೆ ಕಿಮ್ ಸರ್ಕಾರ ಆದೇಶ


Last Updated:

ತೀವ್ರವಾದ ಉಷ್ಣಗಾಳಿ (Heatwave) ಮತ್ತು ಬೇಸಿಗೆಯ ಬೇಗೆಯನ್ನು ಎದುರಿಸಲು ಜನರಿಗೆ ನಾಯಿ ಮಾಂಸದ ಸೂಪ್ (‘ಡಂಗೋಗಿ ಗುಕ್’) ಸೇವಿಸುವಂತೆ ಶಿಫಾರಸು ಮಾಡಿವೆ. ಇದನ್ನು ಸಾಂಪ್ರದಾಯಿಕ ಆರೋಗ್ಯ ಟಾನಿಕ್ ಎಂದು ಪರಿಗಣಿಸಲಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲುವವರಿಗೆ ಇದು ಶಕ್ತಿ ನೀಡುತ್ತದೆ ಎಂದು ಸರಕಾರ ಪ್ರಚಾರ ಮಾಡುತ್ತಿದೆ.

ನಾಯಿ ಮಾಂಸದ ಸೂಪ್​​ ಕುಡಿಯಲು ಉತ್ತರ ಕೊರಿಯಾ ಜನರಿಗೆ ಕಿಮ್ ಸರ್ಕಾರ ಆದೇಶ
ನಾಯಿ ಮಾಂಸದ ಸೂಪ್​​ ಕುಡಿಯಲು ಉತ್ತರ ಕೊರಿಯಾ ಜನರಿಗೆ ಕಿಮ್ ಸರ್ಕಾರ ಆದೇಶ

ಕೊರಿಯಾ ಪರ್ಯಾಯ ದ್ವೀಪದಲ್ಲಿ ತೀವ್ರ ಬೇಸಿಗೆಯ ಬಿಸಿಗಾಳಿ ಜನರನ್ನು ಹೈರಾಣಾಗಿಸುತ್ತಿದೆ. ಈ ತೀವ್ರವಾದ ಉಷ್ಣಗಾಳಿ (Heatwave) ಮತ್ತು ಬೇಸಿಗೆಯ ಬೇಗೆಯನ್ನು ಎದುರಿಸಲು ಉತ್ತರ ಕೊರಿಯಾ (North Korea) ಜನರಿಗೆ ನಾಯಿ ಮಾಂಸದ ಸೂಪ್ (‘ಡಂಗೋಗಿ ಗುಕ್’) ಸೇವಿಸುವಂತೆ ಅಲ್ಲಿನ ಸರ್ಕಾರಿ ಮಾಧ್ಯಮಗಳು ಶಿಫಾರಸು ಮಾಡಿವೆ. ಇದನ್ನು ಸಾಂಪ್ರದಾಯಿಕ ಆರೋಗ್ಯ ಟಾನಿಕ್ ಎಂದು ಪರಿಗಣಿಸಲಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲುವವರಿಗೆ ಇದು ಶಕ್ತಿ ನೀಡುತ್ತದೆ ಎಂದು ಸರಕಾರ ಪ್ರಚಾರ ಮಾಡುತ್ತಿದೆ. ಕೊರಿಯನ್ ಪೆನಿನ್ಸುಲಾದ (ಕೊರಿಯಾ ದ್ವೀಪಕಲ್ಪ) ಕೆಲವು ಭಾಗಗಳಲ್ಲಿ ತಾಪಮಾನವು 40°C ಗಿಂತಲೂ ಹೆಚ್ಚಾಗಿದ್ದು, ತೀವ್ರವಾದ ಉಷ್ಣಗಾಳಿ (ಹೀಟ್‌ವೇವ್) ಜನರನ್ನು ಕಂಗೆಡಿಸಿದೆ.

ಬಿಸಿಲಿಗೆ ನಾಯಿ ಮಾಂಸದ ಸೂಪ್ ಪ್ರಚಾರ

ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ (South China Morning Post) ವರದಿಯ ಪ್ರಕಾರ, ಕಿಮ್ ಜೊಂಗ್ ಉನ್ ನೇತೃತ್ವದ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಅಧಿಕೃತ ಪತ್ರಿಕೆಯಾದ ‘ರೊಡಾಂಗ್ ಸಿನ್ಮುನ್’ (Rodong Sinmun) ಭಾನುವಾರ ಈ ಸಲಹೆಯನ್ನು ಪ್ರಕಟಿಸಿದೆ. ಉಷ್ಣಗಾಳಿಯನ್ನು ಎದುರಿಸುವ ಮಾರ್ಗದರ್ಶನದ ಭಾಗವಾಗಿ ಈ ಲೇಖನ ಪ್ರಕಟವಾಗಿದ್ದು, ಇದರಲ್ಲಿ ಬಿಸಿಲಿನ ಬೇಗೆಯಿಂದ ಬರುವ ಕಾಯಿಲೆಗಳಿಗೆ ಪ್ರಥಮ ಚಿಕಿತ್ಸಾ ಕ್ರಮಗಳನ್ನು ಸಹ ವಿವರಿಸಲಾಗಿದೆ. ಸ್ಥಳೀಯವಾಗಿ ‘ದಂಗೋಗಿ ಗುಕ್’ (ಸಿಹಿ ಮಾಂಸದ ಸೂಪ್) ಎಂದು ಕರೆಯಲಾಗುವ ಈ ಖಾದ್ಯವನ್ನು ಸೇವಿಸುವುದರಿಂದ ಬೇಸಿಗೆಯ ತಾಪವನ್ನು ತಡೆದುಕೊಳ್ಳಬಹುದು ಮತ್ತು ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಅಲ್ಲಿನ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ.

ಆರೋಗ್ಯ ಸಲಹೆಯಲ್ಲಿ ಸಾಂಪ್ರದಾಯಿಕ ಆಹಾರದ ಉಲ್ಲೇಖ

ಪ್ಯೊಂಗ್ಯಾಂಗ್ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರ ಹೇಳಿಕೆಗಳನ್ನು ಉಲ್ಲೇಖಿಸಿರುವ ಈ ವರದಿಯಲ್ಲಿ, ಉಷ್ಣಗಾಳಿಯನ್ನು ಎದುರಿಸಲು ವಿಶೇಷ ಆರೋಗ್ಯ ಮಾರ್ಗಸೂಚಿಯನ್ನು ಪ್ರಕಟಿಸಿದೆ. ತೀವ್ರವಾದ ಉಷ್ಣತೆಯು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹವನ್ನು ಉಲ್ಬಣಗೊಳಿಸಬಹುದು ಎಂದು ಎಚ್ಚರಿಸಿರುವ ಪತ್ರಿಕೆಯು, ದೇಹವನ್ನು ತಂಪಾಗಿಸಲು ಮೀನಿನ ಗಂಜಿ, ಕರಬೂಜ ಹಣ್ಣುಗಳೊಂದಿಗೆ ನಾಯಿ ಮಾಂಸದ ಸೂಪ್ ಅತ್ಯಂತ ಪೌಷ್ಟಿಕಯುಕ್ತ ಆಹಾರ ಎಂದು ಶಿಫಾರಸು ಮಾಡಿದೆ.

ರಾಷ್ಟ್ರೀಯ ಅಡುಗೆ ಸ್ಪರ್ಧೆಗಳ ಮೂಲಕ ಸರ್ಕಾರಿ ಪ್ರೋತ್ಸಾಹ

ಉತ್ತರ ಕೊರಿಯಾದ ಸರ್ವಾಧಿಕಾರಿ ಸರ್ಕಾರವು ನಾಯಿ ಮಾಂಸವನ್ನು ಕೇವಲ ಆರೋಗ್ಯ ಟಾನಿಕ್ ಮಾತ್ರವಲ್ಲದೆ, ದೇಶದ ಹೆಮ್ಮೆಯ ಸಾಂಪ್ರದಾಯಿಕ ಆಹಾರ ಎಂದು ಬಿಂಬಿಸುತ್ತಿದೆ. ಇದಕ್ಕಾಗಿಯೇ ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಪ್ರತಿವರ್ಷ ರಾಷ್ಟ್ರೀಯ ಮಟ್ಟದ ನಾಯಿ ಮಾಂಸದ ಅಡುಗೆ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆದರೆ, ಸರ್ಕಾರದ ಇಷ್ಟೆಲ್ಲಾ ಪ್ರಚಾರದ ಹೊರತಾಗಿಯೂ, ದೇಶದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಇದು ಸಾಮಾನ್ಯ ನಾಗರಿಕರಿಗೆ ಕೈಗೆಟುಕದ ದುಬಾರಿ ಐಷಾರಾಮಿ ಆಹಾರವಾಗಿದೆ.

ನಾಯಿ ಮಾಂಸ ಸೇವನೆ ಆರೋಗ್ಯಕ್ಕೆ ಒಳ್ಳೆಯದಾ?

ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ವೈದ್ಯಕೀಯ ಸಂಶೋಧನೆಗಳ ಪ್ರಕಾರ, ನಾಯಿ ಮಾಂಸ ಸೇವನೆ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಮತ್ತು ಕೆಟ್ಟದ್ದು. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ಇದು ದೇಹಕ್ಕೆ ಶಕ್ತಿ ನೀಡುತ್ತದೆ ಎನ್ನಲಾದರೂ, ವೈಜ್ಞಾನಿಕವಾಗಿ ಇದರ ಸೇವನೆಯಿಂದ ಪ್ರಾಣಾಪಾಯ ತಂದೊಡ್ಡುವ ರೋಗಗಳು ಹರಡುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ನಾಯಿ ಮಾಂಸ ಸೇವನೆಯಿಂದ ರೇಬಿಸ್, ಜಂತುಹುಳುಗಳ ಹೆಚ್ಚಳ, ಆಂಟಿಬಯೋಟಿಕ್ ರೆಸಿಸ್ಟೆನ್ಸ್ ಹಾಗೂ ಕಾಲರಾ ಮತ್ತು ಬ್ಯಾಕ್ಟೀರಿಯಾ ಸೋಂಕುಗಳು ಹರಡುವ ಭೀತಿಯಿದೆ.

ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸಕ್ಕೆ ಸಂಪೂರ್ಣ ನಿಷೇಧ

ಉತ್ತರ ಕೊರಿಯಾದ ಈ ನಿಲುವಿಗೆ ತದ್ವಿರುದ್ಧವಾಗಿ, ನೆರೆಯ ದಕ್ಷಿಣ ಕೊರಿಯಾ ದೇಶವು ನಾಯಿ ಮಾಂಸದ ಉದ್ಯಮಕ್ಕೆ ಶಾಶ್ವತವಾಗಿ ಬ್ರೇಕ್ ಹಾಕಿದೆ. ಪ್ರಾಣಿ ದಯಾ ಸಂಘಟನೆಗಳ ತೀವ್ರ ಹೋರಾಟ ಮತ್ತು ಜಾಗತಿಕ ಒತ್ತಡಕ್ಕೆ ಮಣಿದ ದಕ್ಷಿಣ ಕೊರಿಯಾ ಸರ್ಕಾರವು 2024ರಿಂದಲೇ ನಾಯಿಗಳ ತಳಿ ಅಭಿವೃದ್ಧಿ, ಹತ್ಯೆ, ಮಾಂಸದ ವಿತರಣೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ಐತಿಹಾಸಿಕ ಕಾನೂನನ್ನು ಜಾರಿಗೆ ತಂದಿದೆ.

2027 ರಿಂದ ಕಟ್ಟುನಿಟ್ಟಿನ ಕಾನೂನು ಜಾರಿ

ದಕ್ಷಿಣ ಕೊರಿಯಾ ಸಂಸತ್ತು ಅಂಗೀಕರಿಸಿರುವ ಈ ಹೊಸ ಕಾನೂನಿನ ಅಡಿಯಲ್ಲಿ, ನಾಯಿ ಮಾಂಸದ ಉದ್ಯಮದಲ್ಲಿ ತೊಡಗಿರುವ ವ್ಯಾಪಾರಿಗಳಿಗೆ ಪರ್ಯಾಯ ಉದ್ಯೋಗ ಕಂಡುಕೊಳ್ಳಲು ಕಾಲಾವಕಾಶ ನೀಡಲಾಗಿದೆ. ಈ ಪರಿವರ್ತನಾ ಅವಧಿಯು ಮುಕ್ತಾಯಗೊಂಡು, ಮುಂಬರುವ ಫೆಬ್ರವರಿ 2027 ರಿಂದ ನಾಯಿ ಮಾಂಸ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಿಮಿನಲ್ ಮೊಕದ್ದಮೆ ಮತ್ತು ಕಠಿಣ ಶಿಕ್ಷೆ ವಿಧಿಸುವ ಪ್ರಕ್ರಿಯೆ ಜಾರಿಗೆ ಬರಲಿದೆ. ಒಂದೇ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಎರಡು ದೇಶಗಳು ಪ್ರಾಣಿ ಕಲ್ಯಾಣ ಮತ್ತು ಸಂಪ್ರದಾಯದ ವಿಷಯದಲ್ಲಿ ಈಗ ಸಂಪೂರ್ಣ ವಿಭಿನ್ನ ಹಾದಿಯಲ್ಲಿ ಸಾಗುತ್ತಿರುವುದು ಜಗತ್ತಿನ ಗಮನ ಸೆಳೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed