Last Updated:
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ. ಕೊಹ್ಲಿಗೆ ಮಂಡಿರಜ್ಜು ಗಾಯವಾಗಿದ್ದು, ಅವರು ಯಾವಾಗ ಮರಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಏಕದಿನ (ODI) ಸರಣಿಯಿಂದ ವಿರಾಟ್ ಕೊಹ್ಲಿ (Viart Kohli) ಹೊರಗುಳಿದಿದ್ದಾರೆ. 2026 ರ ಐಪಿಎಲ್ ಫೈನಲ್ ಸಮಯದಲ್ಲಿ ಕೊಹ್ಲಿಗೆ ಮಂಡಿರಜ್ಜು (Hamstring) ಗಾಯವಾಗಿತ್ತು. ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಟೀಮ್ ಇಂಡಿಯಾವನ್ನು ಘೋಷಿಸುವಾಗ, ವಿರಾಟ್ ಫಿಟ್ ಆಗಿದ್ದರೆ ಆಡಲು ಅರ್ಹರು ಎಂದು ಬಿಸಿಸಿಐ ಹೇಳಿತ್ತು. ಆದರೆ, ಕೊಹ್ಲಿ ಪೂರ್ಣ ಫಿಟ್ನೆಸ್ ಸಾಧಿಸಲು ವಿಫಲರಾದರು. ಪರಿಣಾಮ ಅಫ್ಘಾನಿಸ್ತಾನ ವಿರುದ್ಧದ ಸರಣಿಯಿಂದ ಕೊಹ್ಲಿ ಹೊರಗುಳಿದಿದ್ದರು. ಈಗ, ವಿರಾಟ್ ಕೊಹ್ಲಿ ಕಮ್ಬ್ಯಾಕ್ (Comeback) ಬಗ್ಗೆ ಗುಡ್ ನ್ಯೂಸ್ ಹೊರಬಿದ್ದಿದೆ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಭಾರತದ ಪ್ರಮುಖ ಬ್ಯಾಟರ್ ಆಗಿದ್ದು, ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಅವರ ಅನುಪಸ್ಥಿತಿ ಟೀಮ್ ಇಂಡಿಯಾ ಮೇಲೆ ಬೀರಲಿದೆ. ರೆವ್ಸ್ಪೋರ್ಟ್ಸ್ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ತಮ್ಮ ಮಂಡಿರಜ್ಜು ಗಾಯದಿಂದ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ.
ಕೊಹ್ಲಿ ಪ್ರಸ್ತುತ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಮುಂದಿನ ತಿಂಗಳು ಮೈದಾನಕ್ಕೆ ಮರಳಬಹುದು. ಅಂದ್ರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಆಡುವುದನ್ನು ಕಾಣಬಹುದು ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಪ್ರಸ್ತುತ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಹಾಜರಾಗಬೇಕಾಗುತ್ತದೆ. ಟೀಮ್ ಇಂಡಿಯಾ ಪರ ಮತ್ತೆ ಏಕದಿನ ಪಂದ್ಯಗಳನ್ನು ಆಡುವ ಮೊದಲು ಕೊಹ್ಲಿ ಅಲ್ಲಿ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾಗುತ್ತದೆ.
ಇತ್ತೀಚೆಗೆ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಸಿಒಇಯಲ್ಲಿ ಫಿಟ್ನೆಸ್ ಪರೀಕ್ಷೆಗಳನ್ನು ತೆಗೆದುಕೊಂಡರು. ವಿರಾಟ್ ಕೂಡ ಅದೇ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಇದಾದ ನಂತರ, ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಮಿಂಚುವ ನಿರೀಕ್ಷೆಯಿದೆ.
ಜುಲೈ 14, 2026: ಇಂಗ್ಲೆಂಡ್ vs ಭಾರತ- 1ನೇ ಏಕದಿನ ಪಂದ್ಯ, ಬರ್ಮಿಂಗ್ಹ್ಯಾಮ್
ಜುಲೈ 16, 2026: ಇಂಗ್ಲೆಂಡ್ vs ಭಾರತ- 2ನೇ ಏಕದಿನ ಪಂದ್ಯ, ಕಾರ್ಡಿಫ್
ಜುಲೈ 19, 2026: ಇಂಗ್ಲೆಂಡ್ vs ಭಾರತ- 3ನೇ ಏಕದಿನ ಪಂದ್ಯ, ಲಾರ್ಡ್ಸ್, ಲಂಡನ್













