Bigg Boss: ಬಿಗ್ ಬಾಸ್‌ ಬಗ್ಗೆ ಬಿಗ್ ಡೇಟ್ ಅನೌನ್ಸ್! ಇದೇ ದಿನದಿಂದ ಪ್ರಸಾರವಾಗೋದು ಪಕ್ಕಾ! | | ACTPnews

Bigg Boss


Last Updated:

ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೀಗಿರುವಾಗ ಬಿಗ್ ಬಾಸ್ 20ನೇ ಸೀಸನ್ ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ ಪ್ರೀಮಿಯರ್ ಆಗಲಿದೆ.

Bigg Boss
Bigg Boss

ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಚರ್ಚೆಯಾಗುವ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ (Bigg Boss) ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿ ಸೀಸನ್‌ನಲ್ಲೂ ಹೊಸ ಸ್ಪರ್ಧಿಗಳು, ವಿವಾದಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಈ ಕಾರ್ಯಕ್ರಮ ಈಗ ತನ್ನ 20ನೇ ಸೀಸನ್‌ಗೆ ಸಜ್ಜಾಗಿದೆ. ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದ ಹೊಸ ಅಧ್ಯಾಯದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಹಿಂದಿ ಬಿಗ್ ಬಾಸ್ 19 ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಹಲವು ಜನಪ್ರಿಯ ಮುಖಗಳು ಸ್ಪರ್ಧಿಗಳಾಗಿ ಭಾಗವಹಿಸಿದ್ದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಜನಪ್ರಿಯತೆ ದೊರೆಯಿತು. ಇನ್ನು ಕಳೆದ ಸೀಸನ್ ನಲ್ಲಿ ಕಿರುತೆರೆ ನಟ ಗೌರವ್ ಖನ್ನಾ ಟ್ರೋಫಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದರು. ಫರ್ಹಾನಾ ಭಟ್ ಮೊದಲ ರನ್ನರ್ ಅಪ್ ಸ್ಥಾನ ಪಡೆದರು.

ಮನರಂಜನಾ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಬಿಗ್ ಬಾಸ್ 20ರ ಪೂರ್ವ ಸಿದ್ಧತೆಗಳು ಈಗಾಗಲೇ ನಡೆಯುತ್ತಿದ್ದು, ಕಾರ್ಯಕ್ರಮದ ನಿರ್ಮಾಪಕರು ಹೊಸ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಕಿರುತೆರೆ ಕ್ಷೇತ್ರದ ಜನಪ್ರಿಯ ಕಲಾವಿದರು, ಸಾಮಾಜಿಕ ಜಾಲತಾಣದ ಪ್ರಭಾವಿಗಳು ಮತ್ತು ವಿವಿಧ ರಿಯಾಲಿಟಿ ಶೋಗಳಲ್ಲಿ ಹೆಸರು ಮಾಡಿರುವ ವ್ಯಕ್ತಿಗಳೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ. ಜೊತೆಗೆ ವೆರೈಟಿ ಇಂಡಿಯಾ ವರದಿಯ ಪ್ರಕಾರ, ಬಿಗ್ ಬಾಸ್ 20ನೇ ಸೀಸನ್ ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ ಪ್ರೀಮಿಯರ್ ಆಗಲಿದೆ.

ಬಿಗ್ ಬಾಸ್ 20 ಕುರಿತ ಮತ್ತೊಂದು ಕುತೂಹಲಕಾರಿ ಮಾಹಿತಿ ಎಂದರೆ, ಕೆಲವು ಮಾಜಿ ಸ್ಪರ್ಧಿಗಳಿಗೂ ಅವಕಾಶ ಸಿಗುವ ಸಾಧ್ಯತೆ ಇದೆ ಎಂಬುದು. ಹಿಂದಿನ ಸೀಸನ್‌ಗಳಲ್ಲಿ ಜನಪ್ರಿಯತೆ ಗಳಿಸಿದ್ದ ಕೆಲವು ಮುಖಗಳು ಮತ್ತೆ ಕಾರ್ಯಕ್ರಮಕ್ಕೆ ಮರಳಬಹುದು ಎಂಬ ಚರ್ಚೆಗಳು ಜೋರಾಗಿವೆ.

ಬಿಗ್ ಬಾಸ್ ಎಂದರೆ ಸಲ್ಮಾನ್ ಖಾನ್, ಸಲ್ಮಾನ್ ಖಾನ್ ಎಂದರೆ ಬಿಗ್ ಬಾಸ್ ಎಂಬಷ್ಟರ ಮಟ್ಟಿಗೆ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಗುರುತಿಸಿಕೊಂಡಿರುವ ಸಲ್ಮಾನ್ ಮತ್ತೊಮ್ಮೆ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಿಗೆ ಸಂತಸ ತಂದಿದೆ.

ಪ್ರತಿ ವರ್ಷದಂತೆ ಈ ಬಾರಿ ಕೂಡ ಬಿಗ್ ಬಾಸ್ ಪ್ರಸಾರಕ್ಕೂ ಮುನ್ನ ಖತ್ರೋನ್ ಕೆ ಖಿಲಾಡಿ ಕಾರ್ಯಕ್ರಮ ಪ್ರಸಾರವಾಗಲಿದೆ. ರೋಹಿತ್ ಶೆಟ್ಟಿ ನಿರೂಪಣೆಯ ಈ ರಿಯಾಲಿಟಿ ಶೋ ಕಳೆದ ವರ್ಷ ಕೆಲವು ಕಾರಣಗಳಿಂದ ವಿರಾಮ ಪಡೆದಿತ್ತು.

ಆದರೆ ಈ ಬಾರಿ ಕಾರ್ಯಕ್ರಮ ಮತ್ತೆ ಮರಳಿದ್ದು, ಸ್ಪರ್ಧಿಗಳು ಈಗಾಗಲೇ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಖತ್ರೋನ್ ಕೆ ಖಿಲಾಡಿ ಮುಕ್ತಾಯವಾದ ಬಳಿಕ ಬಿಗ್ ಬಾಸ್ 20 ಆರಂಭವಾಗುವ ಸಾಧ್ಯತೆ ಹೆಚ್ಚಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports