Viral News: ಸಮುಯ ಮುಗಿದರೂ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ! ಮಾಸ್​ ವಾರ್ನಿಂಗ್ ಕೊಟ್ಟ ಬಾಸ್​ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

(ಸಾಂದರ್ಭಿಕ ಚಿತ್ರ)


Last Updated:

Viral News: ಟೈಂ ಮುಗಿದರೂ ಆಫೀಸ್‌ನಲ್ಲಿ ಕೆಲಸ ಮಾಡಿದ ಉದ್ಯೋಗಿ; ನೀನು ಜಾಸ್ತಿ ಕೆಲಸವನ್ನ ಯಾಕೆ ಮಾಡುತ್ತಿದ್ದೀಯಾ? ಹೀಗೆ ಮುಂದುವರೆಸಿದ್ರೆ ಸುಮ್ಮನಿರಲ್ಲ ಎಂದ ಬಾಸ್​!

(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

Viral News: ಸಂಜೆ 6 ಆಯ್ತು, ಕೆಲಸದ ಅವಧಿ (Work Time) ಮುಗಿಯಿತು, ಮನೆಗೆ ಹೋಗೋಣ ಅಂತ ಖುಷಿಯಾಗ್ತೀವಿ ನಾವು. ಆದರೆ ಅದನ್ನ ನೋಡಿದ ಎಷ್ಟೋ ಮ್ಯಾನೇಜರ್‌ಗಳು, ಬಾಸ್‌ಗಳು (Boss) “ಬೇಗ ಯಾಕೆ ಹೋಗ್ತಾ ಇದೀಯಾ?” ಅಂತ ಖಡಕ್ ಆಗಿ ಪ್ರಶ್ನೆ ಮಾಡ್ತಾರೆ. 9 ಗಂಟೆ ಕೆಲಸ (Work) ಮಾಡಿದ್ರೂ ಸಾಲಲ್ಲ, ಇನ್ನೂ ಕೂತಿರಬೇಕು ಅನ್ನೋದು ಅವರ ನಿರೀಕ್ಷೆ. ಇದರ ನಡುವೆನೇ, “ನೀನು ಜಾಸ್ತಿ ಕೆಲಸ (Over Work) ಏನು ಮಾಡುತ್ತಿದ್ದೀಯಾ; ಹೀಗೆ ಮುಂದುವರೆಸಿದ್ರೆ ಸುಮ್ಮನಿರಲ್ಲ” ಅಂತ ಬಾಸ್ ವಾರ್ನಿಂಗ್ ಕೊಡುವ ಸ್ಥಿತಿಯೂ ಬಂದಿದೆ.! ಆ ಕುರಿತ ವರದಿ ಇಲ್ಲಿದೆ.

ಕಾರ್ಪೊರೇಟ್ ಜಗತ್ತಿನಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಬಗ್ಗೆ ಚರ್ಚೆ ಜೋರಾಗಿರುವಾಗಲೇ ನಾರ್ವೆಯಲ್ಲಿ ನೆಲೆಸಿರುವ ಭಾರತೀಯ ಉದ್ಯೋಗಿಯೊಬ್ಬರ ಅನುಭವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 15 ವರ್ಷಗಳ ಹಿಂದೆ ಕೆಲಸಕ್ಕಾಗಿ ನಾರ್ವೆಗೆ ಹೋದ ವಿನೋದ್ ಎಂಬುವರು ತಮ್ಮ ಭಾರತೀಯ ಕೆಲಸದ ಶೈಲಿಯಿಂದಾಗಿ ಬಾಸ್‌ನಿಂದ ಬೈಸಿಕೊಂಡ ಘಟನೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಹೌದು, ಭಾರತದಲ್ಲಿ ಪ್ರಶಂಸೆಗೆ ಕಾರಣವಾಗುತ್ತಿದ್ದ ಅಭ್ಯಾಸವೇ ನಾರ್ವೆಯಲ್ಲಿ ತಪ್ಪು ಎಂದು ಪರಿಗಣಿಸಲ್ಪಟ್ಟಿದ್ದು ಅವರನ್ನು ಗೊಂದಲಕ್ಕೀಡು ಮಾಡಿತ್ತು.

ಏನಿದು ಘಟನೆ?

ಭಾರತೀಯ ಮೂಲದ, ವಿನೋದ್ ಅವರು ನಾರ್ವೆಗೆ ಹೋಗುವಾಗ ವಾರಾಂತ್ಯದ ಕೆಲಸ, ಊಟ ಬಿಟ್ಟು ಕೆಲಸ, ತಡರಾತ್ರಿವರೆಗೆ ದುಡಿಮೆ, ಅನಾರೋಗ್ಯದಲ್ಲೂ ಕೆಲಸ ಮಾಡುವ ಭಾರತೀಯ ಮನೋಭಾವವನ್ನು ಹೊತ್ತುಕೊಂಡು ಹೋಗಿದ್ದರು. ಇದು ಶ್ರದ್ಧೆ ಮತ್ತು ಸಮರ್ಪಣೆಯ ಸಂಕೇತ ಎಂದು ನಂಬಿದ್ದ ಅವರು, ಹೊಸ ಕೆಲಸದ ಆರಂಭದ ದಿನಗಳಲ್ಲಿ ಅವರು ಅದೇ ರೀತಿ ವರ್ತಿಸಿದರು.

ಆದರೆ, ಇದು ಮುಂದುವರೆದಂತೆ, ಒಂದು ದಿನ ಬಾಸ್ ಅವರನ್ನು ಕಚೇರಿಗೆ ಕರೆದರು. ಈ ವೇಳೆ, ವಿನೋದ್ ತಮಗೆ ಪ್ರಶಂಸೆ ಸಿಗುತ್ತದೆ ಎಂದುಕೊಂಡಿದ್ದರು. ಆದರೆ ಬಾಸ್ ಹೇಳಿದ್ದು ಬೇರೆಯೇ ಆಗಿತ್ತು. “ನೀನು ಶನಿವಾರ ನನ್ನ ಇಮೇಲ್‌ಗೆ ಉತ್ತರಿಸಿದ್ದೀಯಾ. ಪ್ರಾಜೆಕ್ಟ್ ಮುಗಿಸಲು ರಜೆಯನ್ನು ರದ್ದು ಮಾಡಿದ್ದೀಯಾ. ನಿನ್ನ ಉದ್ದೇಶ ಒಳ್ಳೆಯದಿರಬಹುದು ಆದರೆ ಇದು ಸರಿಯಲ್ಲ. ರಜೆ ಕಡ್ಡಾಯ. ನೀನು ಅದನ್ನು ಎಂದಿಗೂ ಬಿಟ್ಟುಕೊಡಬಾರದು. ನಿನ್ನ ಜೂನಿಯರ್​ಗಳು ನಿನ್ನನ್ನು ನೋಡುತ್ತಿದ್ದಾರೆ. ಅವರು ಇದನ್ನೇ ಸಮರ್ಪಣೆ ಎಂದುಕೊಳ್ಳುತ್ತಾರೆ” ಎಂದು ಬಾಸ್ ಖಡಕ್ ಆಗಿ ಹೇಳಿದ್ದಾರೆ.

ರಜೆ ಕಡ್ಡಾಯ ಎಂದು ಪಾಠ ಮಾಡಿದ ಬಾಸ್​!

ಈ ಮಾತುಗಳನ್ನು ಕೇಳಿ ವಿನೋದ್‌ಗೆ ಆಘಾತವಾಯಿತು. ಹೆಚ್ಚು ಕೆಲಸ ಮಾಡಿದ್ದಕ್ಕೆ ಬೈಸಿಕೊಳ್ಳುವುದು ಅವರಿಗೆ ಹೊಸ ಅನುಭವ. ಅದರಂತೆ, ನಾರ್ವೆಯ ಕೆಲಸದ ಸಂಸ್ಕೃತಿಯಲ್ಲಿ ಜೀವನವನ್ನು ಕೆಲಸಕ್ಕಿಂತ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ರಜೆ ತೆಗೆದುಕೊಳ್ಳುವುದು ಹಕ್ಕು ಮಾತ್ರವಲ್ಲ, ಕಡ್ಡಾಯ ಜವಾಬ್ದಾರಿ. ನಾಯಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ತಂಡವೂ ಆರೋಗ್ಯಕರವಾಗಿ ಕೆಲಸ ಮಾಡುತ್ತದೆ ಎಂಬ ನಂಬಿಕೆ ಅಲ್ಲಿದೆ.

ಏತನ್ಮಧ್ಯೆ, ವಿನೋದ್ ಅವರು ಆ ದಿನ ಕಚೇರಿಯಲ್ಲಿ ಕುಳಿತು ಗೊಂದಲಕ್ಕೊಳಗಾದರು. ಭಾರತದಲ್ಲಿ ಇದೇ ವರ್ತನೆಗೆ ಹೆಚ್ಚು ಸಮರ್ಪಿತ ಎಂದು ಮೆಚ್ಚುಗೆ ಸಿಗುತ್ತಿತ್ತು. ಇಲ್ಲಿ ಅದು ಸಮಸ್ಯೆಯಾಗಿ ಕಂಡಿತು. ಆ ಕ್ಷಣ ಅವರಲ್ಲಿ ಏನೋ ಮುರಿದುಹೋಯಿತು. ವರ್ಷಗಳ ಕಾಲ ನಿರಂತರವಾಗಿ ದುಡಿದಿದ್ದ ಹಸ್ಲ್, ಆತಂಕ ಮತ್ತು ವಿಶ್ರಾಂತಿ ಇಲ್ಲದೆ ಓಡಿದ್ದ ಜೀವನದ ಬೆಲೆಯನ್ನು ಅವರು ಮೊದಲ ಬಾರಿಗೆ ಅರಿತರು. ಆ ದಿನ ನಾನು ಕಣ್ಣೀರು ಹಾಕಿದೆ ಎಂದು ಬರೆದುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *