Viral News: ರೈಸ್ ಕುಕ್ಕರ್ ಜೊತೆ ಮದುವೆ! ಮೂರೇ ದಿನಕ್ಕೆ ವಿಚ್ಛೇದನ; ಹಾಗಾದ್ರೆ, ಮೊದಲ ರಾತ್ರಿ ನಡೆದಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರೈಸ್ ಕುಕ್ಕರ್ ಜೊತೆ ಮದುವೆ!


Last Updated:

Viral News: ಈ ಬಾರಿ ಇಂಡೋನೇಷ್ಯಾದಿಂದ ಬಂದ ಸುದ್ದಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅದುವೇ, ಒಬ್ಬ ಯುವಕ ತನ್ನ ಪ್ರೀತಿಯ ರೈಸ್ ಕುಕ್ಕರ್‌ನನ್ನೇ ವಧುವಿನಂತೆ ಅಲಂಕರಿಸಿ ಮದುವೆಯಾಗಿದ್ದಾನೆ. ಆದರೆ, ಮದುವೆಯಾದ ಮೂರೇ ದಿನಕ್ಕೆ ವಿಚ್ಛೇದನ; ಹಾಗಾದ್ರೆ, ಮೊದಲ ರಾತ್ರಿ ನಡೆದಿದ್ದೇನು?

ರೈಸ್ ಕುಕ್ಕರ್ ಜೊತೆ ಮದುವೆ!
ರೈಸ್ ಕುಕ್ಕರ್ ಜೊತೆ ಮದುವೆ!

Viral News: ಸಾಮಾಜಿಕ ಜಾಲತಾಣದಲ್ಲಿ (Social Media) ಪ್ರತಿದಿನ ಏನಾದರೂ ಒಂದು ವಿಚಿತ್ರ ಸುದ್ದಿ ವೈರಲ್ (Viral) ಆಗುತ್ತದೆ. ಈ ಬಾರಿ ಇಂಡೋನೇಷ್ಯಾದಿಂದ (Indonesia) ಬಂದ ಸುದ್ದಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅದುವೇ, ಒಬ್ಬ ಯುವಕ ತನ್ನ ಪ್ರೀತಿಯ ರೈಸ್ ಕುಕ್ಕರ್‌ನನ್ನೇ (Rice Cooker) ವಧುವಿನಂತೆ ಅಲಂಕರಿಸಿ ಮದುವೆಯಾಗಿದ್ದಾನೆ (Marriage). ಆ ಕುಕ್ಕರ್‌ಗೆ ವಧುವಿನಂತೆ ಹೂ, ಫ್ರಾಕ್ ಹಾಕಿಸಿ ಮದುವೆಯನ್ನೂ ಕೂಡ ಆಗಿದ್ದಾನೆ. ಆದರೆ, ಮದುವೆಯಾದ ಮೂರೇ ದಿನಕ್ಕೆ ವಿಚ್ಛೇದನ ನೀಡಿದ್ದಾನೆ. ಹಾಗಾದರೆ, ಈ ಜೋಡಿ ನಡುವೆ ಆಗಿದ್ದೇನು? ಮದುವೆಯಾದ ಮೊದಲ ರಾತ್ರಿ (First Night) ಇವರಿಬ್ಬರ ನಡುವೆ ನಡೆದಿದ್ದೇನು? ಎನ್ನುವ ಮಾಹಿತಿ ಇಲ್ಲಿದೆ.

ಏನಿದು ಘಟನೆ?

ಜಾವಾ ದ್ವೀಪದ ಕಂಟೆಂಟ್ ಕ್ರಿಯೇಟರ್ ಖೈರುಲ್ ಅನಮ್, ತನ್ನ ಮನೆಯ ರೈಸ್ ಕುಕ್ಕರ್ ಜೊತೆ ನಿಜವಾದ ಮದುವೆಯಂತೆ ಶಾಸ್ತ್ರ ನೆರವೇರಿಸಿದ್ದಾನೆ. ಹೌದು, ಅಕ್ಕಿ ಬೇಯಿಸುವ ಸಾಮಾನ್ಯ ಪಾತ್ರೆಯನ್ನು ವಧುವಿನಂತೆ ಅಲಂಕರಿಸಿ, ಫೋಟೋಶೂಟ್ ಮಾಡಿ, ಮದುವೆ ಪ್ರಮಾಣಪತ್ರಕ್ಕೆ ಸಹಿ ಹಾಕಿ, ಮೂರು ದಿನಗಳ ನಂತರ ಅಧಿಕೃತವಾಗಿ ವಿಚ್ಛೇದನವನ್ನೂ ಘೋಷಿಸಿದ್ದಾನೆ. ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದನ್ನು ನೋಡಿದ ಜನರು ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.

ವಧುವಿನಂತೆ ಸಿಂಗಾರ!

ಖೈರುಲ್ ಹಂಚಿಕೊಂಡ ಫೋಟೋಗಳಲ್ಲಿ ಅವನು ಸಂಪೂರ್ಣ ಮದುವೆ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾನೆ. ಪಕ್ಕದಲ್ಲಿ ಬಿಳಿ ಬಣ್ಣದ ಫಿಲಿಪ್ಸ್ ರೈಸ್ ಕುಕ್ಕರ್‌ಗೆ ಫ್ರಾಕ್ ಹಾಕಿಸಿ ಜೊತೆಗೆ ಸಣ್ಣ ಆಭರಣಗಳಂತೆ ಸ್ಟಿಕರ್‌ಗಳನ್ನು ಹಾಕಿ ವಧುವಿನಂತೆ ಸಿಂಗರಿಸಿದ್ದಾನೆ. ಒಂದು ಚಿತ್ರದಲ್ಲಿ ಅವನು ಕುಕ್ಕರ್‌ಗೆ ಮುತ್ತಿಡುತ್ತಿರುವಂತೆ ಪೋಸ್ ನೀಡಿದ್ದಾನೆ, ಮತ್ತೊಂದರಲ್ಲಿ ಇಬ್ಬರೂ ಪಕ್ಕಪಕ್ಕ ಕುಳಿತು ಮದುವೆ ದಾಖಲೆಗೆ ಸಹಿ ಹಾಕುತ್ತಿರುವ ದೃಶ್ಯವಿದೆ.

ಇದರೊಂದಿಗೆ, ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ, “ನನ್ನ ಹೆಂಡತಿ ನ್ಯಾಯಯುತ, ವಿಧೇಯ, ಪ್ರೀತಿಯುಳ್ಳವಳು ಮತ್ತು ಅಡುಗೆ ಚೆನ್ನಾಗಿ ಮಾಡುತ್ತಾಳೆ ಎಂದು ಬರೆದಿದ್ದಾನೆ. ಇನ್ನೂ ಈ ಚಿತ್ರಗಳನ್ನು ಮೊದಲು ನೋಡಿದವರು ಇದು ನಿಜವಾದ ಮದುವೆಯೋ ಅಥವಾ ತಮಾಷೆಯೋ ಎಂದು ಗೊಂದಲಕ್ಕೊಳಗಾದರು, ಆದರೆ ಕಾನೂನುಬದ್ಧ ದಾಖಲೆಯಂತೆ ಕಾಣುವ ಕಾಗದವನ್ನು ನೋಡಿ ಇನ್ನಷ್ಟು ಕುತೂಹಲ ಹೆಚ್ಚಾಯಿತು.

ಮೂರೇ ದಿನಕ್ಕೆ ವಿಚ್ಛೇದನ! ಕಾರಣವೇನು?

ಮದುವೆಯ ಸಂಭ್ರಮದ ನಡುವೆ, ಖೈರುಲ್ ಮತ್ತೊಂದು ಪೋಸ್ಟ್ ಹಾಕಿದ. ಅದುವೇ, “ವಿಚ್ಛೇದನದ ಘೋಷಣೆ”. ಹೌದು, ಮದುವೆಯಾದ ಕೇವಲ ಮೂರು ದಿನಗಳ ನಂತರ, ಆ ವ್ಯಕ್ತಿ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ.

ಕೇವಲ ಮನರಂಜನೆಗಾಗಿ ಮಾಡಿದ ಸ್ಟಂಟ್?

ವೈರಲ್ ಆದ ನಂತರ ಸ್ಥಳೀಯ ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಖೈರುಲ್, “ಇದು ಸಂಪೂರ್ಣವಾಗಿ ಮನರಂಜನೆಗಾಗಿ ಮಾಡಿದ ನಾಟಕ, ಯಾವುದೇ ಕಾನೂನುಬದ್ಧ ಮದುವೆ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾನೆ.

ಏತನ್ಮಧ್ಯೆ, ಕೆಲ ವರ್ಷಗಳಿಂದ ಇಂಡೋನೇಷ್ಯಾದಲ್ಲಿ ಜೀವವಿಲ್ಲದ ವಸ್ತುಗಳ ಜೊತೆ ಮದುವೆಯಾಗುವ ಹಾಸ್ಯ ವಿಡಿಯೋಗಳು ಟ್ರೆಂಡ್ ಆಗಿದ್ದು, ಅವನು ಈ ಹಿಂದೆಯೂ ಇಂತಹ ವಿಚಿತ್ರ ಐಡಿಯಾಗಳಿಂದ ಫಾಲೋವರ್ಸ್ ಗಳಿಸಿದ್ದಾನೆ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed