Last Updated:
Viral News: ಗರ್ಭಿಣಿಯೊಬ್ಬರು ಆಟೋದಲ್ಲಿಯೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು ಅದರಲ್ಲಿ ಎಲ್ಲ ಮಕ್ಕಳೂ ಮೃತಪಟ್ಟಿರುವ ಘಟನೆ ನಡೆದಿದೆ.
ತುರ್ತು ವೈದ್ಯಕೀಯ ಸೇವೆ ಕೇವಲ ಒಂದು ಕಾಲ್ನಲ್ಲಿ ಸಿಗಬೇಕಾದ ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಮಧ್ಯಪ್ರದೇಶದ (Madhya Pradesh) ಮಾಂಡ್ಲಾ (Mandla) ನಗರದಲ್ಲಿ ಮಹಿಳೆಯೊಬ್ಬರು (Woman) ಆಸ್ಪತ್ರೆಗೆ (Hospital) ಕರೆದೊಯ್ಯುವಾಗ ಆಟೋರಿಕ್ಷಾದೊಳಗೆ (Autorikshaw) ನಾಲ್ಕು ಅಕಾಲಿಕ ಶಿಶುಗಳಿಗೆ ಜನ್ಮ ನೀಡಿದ್ದಾರೆ. ನಾಲ್ವರು ನವಜಾತ ಶಿಶುಗಳು (Newborn) ಸಾವನ್ನಪ್ಪಿದರು. ತಾಯಿ ಬದುಕುಳಿದರು.
ಮಂಗಳವಾರ ಈ ಘಟನೆ ನಡೆದಿದ್ದು, ನೈಗನ್ವಾ ಗ್ರಾಮದ ನಿವಾಸಿ 28 ವರ್ಷದ ರಜನಿ ಸಿಂದ್ರಮ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಅವರ ಕುಟುಂಬದವರು ತಕ್ಷಣ 108 ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ಅವರ ಪ್ರಕಾರ, ಸಹಾಯವು ಸಮಯಕ್ಕೆ ಸರಿಯಾಗಿ ತಲುಪಲಿಲ್ಲ.
ರಜನಿಯ ಸ್ಥಿತಿ ಹದಗೆಡುತ್ತಿದ್ದಂತೆ, ಕುಟುಂಬಕ್ಕೆ ಬೇರೆ ದಾರಿಯಿರಲಿಲ್ಲ, ಆಕೆಯನ್ನು ಆಟೋರಿಕ್ಷಾದಲ್ಲಿ ಕೂರಿಸಿ ಆಶಾ ಕಾರ್ಯಕರ್ತೆಯರ ಸಹಾಯದಿಂದ ಘುಟಾಸ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಘುಟಾಸ್ನಲ್ಲಿ ವೈದ್ಯರು ಆಕೆಗೆ ಆರಂಭಿಕ ಚಿಕಿತ್ಸೆ ನೀಡಿ, ಹೆಚ್ಚಿನ ಆರೈಕೆಗಾಗಿ ಬಿಚಿಯಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದರು.
ಆದರೆ ಬಿಚಿಯಾಗೆ ಹೋಗುವ ದಾರಿಯಲ್ಲಿ, ಆಟೋರಿಕ್ಷಾ ಆಸ್ಪತ್ರೆ ತಲುಪುವ ಮೊದಲೇ, ರಜನಿ ವಾಹನದೊಳಗೆ ಒಂದರ ನಂತರ ಒಂದರಂತೆ ನಾಲ್ಕು ಶಿಶುಗಳಿಗೆ ಜನ್ಮ ನೀಡಿದರು.
ಕುಟುಂಬದೊಂದಿಗೆ ಬಂದ ಆಶಾ ಕಾರ್ಯಕರ್ತೆ ಆ ಸಂದರ್ಭ ನಿಭಾಯಿಸಲು ಸಹಾಯ ಮಾಡಿದರು. ರಜನಿಯನ್ನು ಬಿಚ್ಚಿಯಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ವೈದ್ಯರು ನವಜಾತ ಶಿಶುಗಳನ್ನು ಪರೀಕ್ಷಿಸಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬಿಚ್ಚಿಯಾ ಬಿಎಂಒ ಡಾ. ಅನೂಪ್ ಕುಮಾರ್ ಭಾರತೀಯ ಅವರು, ಮಹಿಳೆ ಆಸ್ಪತ್ರೆಗೆ ತಲುಪುವ ಮೊದಲೇ ಹೆರಿಗೆಯಾಗಿತ್ತೆಂದು ಹೇಳಿದರು. ರಜನಿ ಸುಮಾರು 30 ವಾರಗಳ ಗರ್ಭಿಣಿಯಾಗಿದ್ದರು, ಅಂದರೆ ಸುಮಾರು ಏಳು ತಿಂಗಳುಗಳಾಗಿದ್ದವು. ಶಿಶುಗಳು ಪ್ರಿಮೆಚ್ಯೂರ್ ಆಗಿದ್ದವು. ಸಂಪೂರ್ಣವಾಗಿ ಬೆಳೆದಿರಲಿಲ್ಲ ಎಂದು ಅವರು ಹೇಳಿದರು. ತಾಯಿಗೆ ತುರ್ತು ಚಿಕಿತ್ಸೆ ನೀಡಲಾಯಿತು ಮತ್ತು ಈಗ ಚೇತರಿಸಿಕೊಳ್ಳುತ್ತಿದ್ದಾರೆ.
108 ಆಂಬ್ಯುಲೆನ್ಸ್ ಸೇವೆಯಲ್ಲಿನ ವಿಳಂಬದಿಂದಾಗಿ ರಜನಿ ಅವರನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ಅವರ ಪತಿ ಧನೇಶ್ ಸಿಂದ್ರಮ್ ಆರೋಪಿಸಿದ್ದಾರೆ.
“ನನ್ನ ಹೆಂಡತಿ 6-7 ತಿಂಗಳ ಗರ್ಭಿಣಿಯಾಗಿದ್ದಳು. ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ನಾವು ಅವಳನ್ನು ಆಟೋರಿಕ್ಷಾದಲ್ಲಿ ಕರೆತರಬೇಕಾಯಿತು. ದಾರಿಯಲ್ಲಿ ಅವಳ ಹೆರಿಗೆಯಾಯಿತು. ನಾಲ್ಕು ಮಕ್ಕಳು ಸತ್ತಿದ್ದಾರೆ. ಆದರೆ ನನ್ನ ಹೆಂಡತಿ ಹುಷಾರಾಗಿದ್ದಾಳೆ” ಎಂದು ಅವರು ಹೇಳಿದರು.
ಆಶಾ ಕಾರ್ಯಕರ್ತೆ ಮಾಂಟೋ ಸಿಂಗ್ರಾಮ್ ಮಾತನಾಡಿ, ಹೆರಿಗೆ ನೋವು ಇದ್ದಕ್ಕಿದ್ದಂತೆ ಪ್ರಾರಂಭವಾಯಿತು. ಕುಟುಂಬದವರು ರಜನಿಯನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆತರುತ್ತಿರುವುದಾಗಿ ತಿಳಿಸಿದರು.
Bangalore [Bangalore],Bangalore,Karnataka













