Vinod Kambli: ವೃದ್ಧಾಶ್ರಮ ಸೇರಿದ ಭಾರತದ ಮಾಜಿ ಕ್ರಿಕೆಟಿಗ! ಸಚಿನ್ ಸ್ನೇಹಿತ ವಿನೋದ್ ಕಾಂಬ್ಳಿಗೆ ಆಗಿದ್ದೇನು? | | ACTPnews

ವಿನೋದ್​ ಕಾಂಬ್ಳಿ


Last Updated:

ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮದಲ್ಲಿರುವ ವಿಡಿಯೋವೊಂದು ವೈರಲ್ ಆಗಿದ್ದು, ಕ್ರಿಕೆಟ್​ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿನೋದ್​ ಕಾಂಬ್ಳಿ
ವಿನೋದ್​ ಕಾಂಬ್ಳಿ

ಕ್ರಿಕೆಟ್​​ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar ಅವರ ಬಾಲ್ಯದ ಸ್ನೇಹಿತ ಮತ್ತು ಮಾಜಿ ಭಾರತೀಯ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಅವರ ಆರೋಗ್ಯದ ಕುರಿತು ಮತ್ತೊಮ್ಮೆ ಚರ್ಚೆ ಶುರುವಾಗಿದೆ. ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮ (Old Age Home) ಸೇರಿಕೊಂಡಿರುವ ವಿಡಿಯೋವೊಂದು ವೈರಲ್​ ಆಗಿದೆ. ಭಾರತ ಕ್ರಿಕೆಟ್​  ತಂಡದ ಮಾಜಿ ಕ್ರಿಕೆಟಿಗನನ್ನು ವೃದ್ಧಾಶ್ರಮದಲ್ಲಿ ನೋಡಿ ಕ್ರಿಕೆಟ್​ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ವಿನೋದ್​​ ಕಾಂಬ್ಳಿ ವಿಡಿಯೋದಲ್ಲಿ, “ನಾನು ವಿನೋದ್ ಕಾಂಬ್ಳಿ, ವೃದ್ಧಾಶ್ರಮದಲ್ಲಿದ್ದೇನೆ. ಇಲ್ಲಿ ನನಗೆ ಬಹಳ ಒಳ್ಳೆಯ ಸೌಲಭ್ಯ ಸಿಕ್ಕಿದೆ. ಮತ್ತು ಸ್ವಚ್ಛತೆ ಇತ್ಯಾದಿ ಎಲ್ಲವೂ ಅತ್ಯುತ್ತಮವಾಗಿದೆ” ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಮಾತನಾಡುವಾಗ ಕಾಂಬ್ಳಿ ಅವರ ನಾಲಿಗೆ ಸಾಕಷ್ಟು ತೊದಲುತ್ತಿದ್ದು, ಇದರಿಂದ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ನಾನು ಮನೆಯಲ್ಲಿಲ್ಲ ಎಂದು ಅನಿಸುವುದಿಲ್ಲ – ಕಾಂಬ್ಳಿ

ಮುಂದುವರಿದು ಮಾತನಾಡಿರುವ ವಿನೋದ್ ಕಾಂಬ್ಳಿ, “ಇಲ್ಲಿಗೆ ಬಂದ ಮೇಲೆ ನಾನು ಮನೆಯಲ್ಲಿಲ್ಲ ಎಂದು ಎಂದಿಗೂ ಅನಿಸುವುದಿಲ್ಲ. ಮತ್ತು ಇಲ್ಲಿರುವ ಎಲ್ಲರೂ ನನಗೆ ಬಹಳಷ್ಟು ಪ್ರೀತಿಯನ್ನು ನೀಡಿದ್ದಾರೆ” ಎಂದಿದ್ದಾರೆ. ವೀಡಿಯೊದ ಕೊನೆಯಲ್ಲಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು, ವಿಡಿಯೋ ನೋಡಿದ ನೆಟ್ಟಿಗರು ಮತ್ತು ಅಭಿಮಾನಿಗಳು ವಿನೋದ್​ ಕಾಂಬ್ಳಿ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ವಿನೋದ್ ಕಾಂಬ್ಳಿ ಅವರ ಕ್ರಿಕೆಟ್ ವೃತ್ತಿಜೀವನ

1991 ರಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿನೋದ್ ಕಾಂಬ್ಳಿ ತಮ್ಮ ವೃತ್ತಿಜೀವನದಲ್ಲಿ 121 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 17 ಟೆಸ್ಟ್‌ಗಳಲ್ಲಿ 54.20 ರ ಸರಾಸರಿಯಲ್ಲಿ 1084 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ವಿನೋದ್​ ಕಾಂಬ್ಳಿ 4 ಶತಕ ಮತ್ತು 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್‌ನಲ್ಲಿ ಕಾಂಬ್ಲಿ ಅವರ ಗರಿಷ್ಠ ಸ್ಕೋರ್ 227 ರನ್‌ಗಳಾಗಿದ್ದು, ಇದನ್ನು ಅವರು ದೆಹಲಿಯಲ್ಲಿ ಜಿಂಬಾಬ್ವೆ ವಿರುದ್ಧ ಸಿಡಿಸಿದ್ದರು.

ಇನ್ನು, ವಿನೋದ್ ಕಾಂಬ್ಳಿ ಅವರು 104 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 32.59 ರ ಸರಾಸರಿಯಲ್ಲಿ 2477 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅವರು 2 ಶತಕ ಮತ್ತು 14 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕಾಂಬ್ಳಿ 129 ಪ್ರಥಮ ದರ್ಜೆ ಪಂದ್ಯಗಳ 181 ಇನ್ನಿಂಗ್ಸ್‌ಗಳಲ್ಲಿ 9965 ರನ್ ಗಳಿಸಿದ್ದಾರೆ. ಅವರು 221 ಲಿಸ್ಟ್-ಎ ಪಂದ್ಯಗಳಲ್ಲಿ 6476 ರನ್ ಗಳಿಸಿದ್ದು, ಇದರಲ್ಲಿ 11 ಶತಕ ಮತ್ತು 35 ಅರ್ಧಶತಕಗಳನ್ನು ದಾಖಲಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed