Last Updated:
Narendra Modi’s Assets: ನರೇಂದ್ರ ಮೋದಿ ಅವರ ಎಲ್ಲಾ ಆಸ್ತಿಗಳು ಠೇವಣಿ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿವೆ ಎಂದು ಹೇಳಲಾಗಿದೆ. ಘೋಷಣೆಯಲ್ಲಿ ನಾಲ್ಕು ಚಿನ್ನದ ಉಂಗುರಗಳು ಇವೆ ಎನ್ನಲಾಗಿದೆ. ಇನ್ನು ಅವರ ಹೆಸರಿನಲ್ಲಿ ಯಾವುದೇ ಭೂಮಿ, ವಸತಿ ಆಸ್ತಿ, ವಾಣಿಜ್ಯ ಆಸ್ತಿ ಅಥವಾ ವೈಯಕ್ತಿಕ ವಾಹನಗಳು ಅವರ ಹೆಸರಿನಲ್ಲಿ ಇಲ್ಲ ಎಂಬ ದಾಖಲೆಯೂ ಇದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) 76ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದೇ ಸೆಪ್ಟೆಂಬರ್ 17ರಂದು ಹುಟ್ಟುಹಬ್ಬ (Modi Birthday) ಆಚರಿಸಿಕೊಂಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರ ಸಂಬಳ ಎಷ್ಟು? ಆಸ್ತಿ (Modi Assets) ಎಷ್ಟು ಅನ್ನೋ ಬಗ್ಗೆ ಜನರು ಆಸಕ್ತಿಯಿಂದ ತಿಳಿದುಕೊಳ್ಳಲು ಬಯಸುತ್ತಾರೆ. ಇನ್ನು ಪ್ರತಿವರ್ಷ ಮಾರ್ಚ್ನಲ್ಲಿ ಪ್ರಧಾನಿ ಸೇರಿದಂತೆ ಕೇಂದ್ರ ಸಂಪುಟದ ಸಚಿವರು (Union Ministers) ತಮ್ಮ ಆಸ್ತಿ ವಿವರಗಳನ್ನು ಪ್ರಧಾನ ಮಂತ್ರಿ ಕಚೇರಿಗೆ (PMO) ಸಲ್ಲಿಸಬೇಕು. ಇದೀಗ 2025-2026ನೇ ಸಾಲಿನಲ್ಲಿ ಮೋದಿ ಆಸ್ತಿ ಎಷ್ಟಿದೆ ಎಂಬ ವಿವರ ಸಾರ್ವಜನಿಕವಾಗಿ ಲಭ್ಯವಾಗಿದೆ.
ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) 2025-26ನೇ ಸಾಲಿನ ಆಸ್ತಿ ಘೋಷಣೆಯ ಪ್ರಕಾರ ನರೇಂದ್ರ ಮೋದಿಯವರ ಒಟ್ಟೂ ಆಸ್ತಿ 4.02 ಕೋಟಿ ರೂಪಾಯಿಗಳಂತೆ. ಇನ್ನು ಅವರ ಸಂಬಳ, ಪ್ರಯಾಣ ಭತ್ಯೆ, ಆಸ್ತಿಗಳು ಮತ್ತು ಅಧಿಕೃತ ಸೌಲಭ್ಯಗಳ ಬಗ್ಗೆ ಸಹ ಮಾಹಿತಿ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ವಿವರಗಳಲ್ಲಿ ಬ್ಯಾಂಕ್ ಠೇವಣಿ ಮತ್ತು ಸ್ಥಿರ ಠೇವಣಿಗಳು ಪ್ರಮುಖ ಭಾಗವಾಗಿವೆ. ಅವರ ಒಟ್ಟು ಆಸ್ತಿ ಮೌಲ್ಯ 4.01 ಕೋಟಿ ರೂ. ಆಗಿದ್ದು, ಇದರಲ್ಲಿ ಸುಮಾರು 3.79 ಕೋಟಿ ರೂ. ಸ್ಥಿರ ಠೇವಣಿ ರೂಪದಲ್ಲಿದೆ ಎಂದು ಆಸ್ತಿ ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಬಾರಿ ಅವರ ಆಸ್ತಿ ಮೊತ್ತ 3 ಕೋಟಿ 43 ಲಕ್ಷ ರೂಪಾಯಿಗಳಿತ್ತು. ಈ ಬಾರಿ 4.01 ಕೋಟಿ ರೂಪಾಯಿಗಳಾಗಿವೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ ಮೋದಿಯವರ ಆಸ್ತಿ 58 ಲಕ್ಷ ರೂಪಾಯಿಗಳಷ್ಟು ಜಾಸ್ತಿಯಾಗಿವೆ.
ನರೇಂದ್ರ ಮೋದಿ ಅವರ ಎಲ್ಲಾ ಆಸ್ತಿಗಳು ಠೇವಣಿ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿವೆ ಎಂದು ಹೇಳಲಾಗಿದೆ. ಘೋಷಣೆಯಲ್ಲಿ ನಾಲ್ಕು ಚಿನ್ನದ ಉಂಗುರಗಳು ಇವೆ ಎನ್ನಲಾಗಿದೆ. ಇನ್ನು ಅವರ ಹೆಸರಿನಲ್ಲಿ ಯಾವುದೇ ಭೂಮಿ, ವಸತಿ ಆಸ್ತಿ, ವಾಣಿಜ್ಯ ಆಸ್ತಿ ಅಥವಾ ವೈಯಕ್ತಿಕ ವಾಹನಗಳು ಅವರ ಹೆಸರಿನಲ್ಲಿ ಇಲ್ಲ ಎಂಬ ದಾಖಲೆಯೂ ಇದೆ.
ಇನ್ನು ಪ್ರಧಾನಿ ಮೋದಿ ಅವರು ಎಸ್ಬಿಐನ ಗಾಂಧಿನಗರ ಎನ್ಎಸ್ಸಿ ಶಾಖೆಯಲ್ಲಿ ₹3,79,76,101 ಎಫ್ಡಿಆರ್ಗಳು ಮತ್ತು ಎಂಒಡಿ ಠೇವಣಿಗಳನ್ನು ಹೊಂದಿದ್ದಾರೆ. ಅವರ ಬ್ಯಾಂಕ್ ಖಾತೆಯಲ್ಲಿ ₹3,562 ಇದೆಯಂತೆ. ಅವರು ₹34,429 ನಗದು ಕೈಯಲ್ಲಿದೆ ಎಂದು ವರದಿ ಮಾಡಿದ್ದಾರೆ.
ಇನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಅವರ ಬಳಿಯಿವೆ. ಅವರ NSC ಹಿಡುವಳಿಗಳ ಮೌಲ್ಯ ₹10,24,724 ಇದೆ. ಅವರ ಬಳಿ ನಾಲ್ಕು ಚಿನ್ನದ ಉಂಗುರಗಳಿದ್ದು, ಅವುಗಳ ತೂಕ ಸುಮಾರು 45 ಗ್ರಾಂ ಆಗಿದ್ದು, ಇದರ ಮೌಲ್ಯ ₹4,58,864 ಎನ್ನಲಾಗಿದೆ.
ಘೋಷಣೆಯು ಬಾಂಡ್ಗಳು, ಷೇರುಗಳು, ಮ್ಯೂಚುವಲ್ ಫಂಡ್ಗಳು ಮತ್ತು ಇತರ ಭದ್ರತೆಗಳಲ್ಲಿ ಯಾವುದೇ ಹೂಡಿಕೆಗಳನ್ನು ಹೊಂದಿಲ್ಲ ಎಂದು ತೋರಿಸಿದೆ. ಮೋದಿಯವರ ಚರ ಆಸ್ತಿಗಳ ಒಟ್ಟು ಮೌಲ್ಯ ₹4,01,60,999 ಎಂದು ವರದಿಯಾಗಿದೆ. ಸಂಬಳ ಮತ್ತು ಬ್ಯಾಂಕ್ ಎಫ್ಡಿಆರ್ ಬಡ್ಡಿಯಿಂದ ಟಿಡಿಎಸ್ ₹6,63,309 ಎಂದು ವರದಿಯಾಗಿದೆ. ಮಾರ್ಚ್ 2026ರ ಘೋಷಣೆಯ ಆಧಾರದ ಮೇಲೆ, ಅವರ ಒಟ್ಟು ಘೋಷಿತ ಆಸ್ತಿಗಳು ಸರಿಸುಮಾರು ₹4.02 ಕೋಟಿಗಳಷ್ಟಿವೆ ಅಂತ ಜಾಗರಣ್ ಜೋಶ್ ವರದಿ ಮಾಡಿದೆ.














