Last Updated:
Vijayalakshmi Darshan: ದರ್ಶನ್ ಪತ್ನಿ ಗಂಡನನ್ನು ನೆನಪಿಸಿಕೊಂಡಿದ್ದಾರೆ. ಅವರು ಪತಿಯ ಜೊಗಿರುವ ಫೋಟೋ ಶೇರ್ ಮಾಡಿದ್ದಾರೆ.
ದರ್ಶನ್ (Darshan) ಜೈಲಿನಲ್ಲಿದ್ದಾರೆ. ಜಾಮೀನು (Bail) ಇಲ್ಲ. ಮನೆಮಂದಿಯನ್ನು ಭೇಟಿ ಮಾಡೋಕೂ ಆಗುತ್ತಿಲ್ಲ. ಈ ಹಿಂದೆ ಮದುವೆ ವಾರ್ಷಿಕೋತ್ಸವ ದಿನ ವಿಜಯಲಕ್ಷ್ಮಿ (Vijayalakshmi) ಅವರು ಮಗ ವಿನೀಶ್ (Vinish) ಜೊತೆ ಬಂದು ಗಂಡನನ್ನು ಭೇಟಿ ಮಾಡಿ ಹೋಗಿದ್ದರು. ಆದರೆ ವಿಜಯಲಕ್ಷ್ಮಿ ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಅವರು ಆಗಾಗ ದರ್ಶನ್ ಜೊತೆಗಿರುವಾಗ ಕ್ಲಿಕ್ ಮಾಡಿದ್ದ ಹಳೆಯ ಫೋಟೋಸ್ ಪೋಸ್ಟ್ ಮಾಡುತ್ತಿರುತ್ತಾರೆ.
ಇತ್ತೀಚೆಗೆ ವಿಜಯಲಕ್ಷ್ಮಿ ಅವರು ದರ್ಶನ್ ಜೊತೆಗಿರುವ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಕೆಂಬಣ್ಣದ ಟೀಶರ್ಟ್ ಧರಿಸಿದ್ದರು. ಪಕ್ಕದಲ್ಲಿಯೇ ದರ್ಶನ್ ಕುಳಿತಿರುವುದನ್ನು ಕೂಡಾ ನೋಡಬಹುದು.
ದರ್ಶನ್ ಅವರಯ ಬಿಳಿ ಬಣ್ಣದ ಶರ್ಟ್ ಧರಿಸಿಕೊಂಡು ಕನ್ನಡಕವನ್ನು ಶರ್ಟ್ಗೆ ಸಿಕ್ಕಿಸಿ ಪತ್ನಿ ಪಕ್ಕದಲ್ಲಿ ಕುಳಿತಿದ್ದರು. ವಿಜಯಲಕ್ಷ್ಮಿ ಅವರು ಪತಿಯ ತೋಳಿನಲ್ಲಿ ತಲೆ ಇಟ್ಟು ಪೋಸ್ ಕೊಟ್ಟಿದ್ದರು. ಮುದ್ದಾದ ಫೋಟೋವನ್ನು ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ.
ಇದರಲ್ಲಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಮುದ್ದಾದ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅವರು ಆಗಾಗ ಪತಿಯೊಂದಿಗಿನ ಹಳೆಯ ಫೋಟೋಗಳನ್ನು ಸ್ಟೋರಿ ಅಥವಾ ಪೋಸ್ಟ್ ರೂಪದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.
ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದ್ದ ಬಹುಚರ್ಚಿತ ‘ಬಾಸ್’ ಸಿನಿಮಾಗೆ ಮತ್ತೆ ಕಾನೂನು ಅಡ್ಡಿ ಎದುರಾಗಿದೆ. ಚಿತ್ರದ ಬಿಡುಗಡೆಗೆ ಸಂಬಂಧಿಸಿದ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಇದೀಗ ಕರ್ನಾಟಕ ಹೈಕೋರ್ಟ್‌ನ ಮೆಟ್ಟಿಲೇರಿದ್ದಾರೆ.
ಸ್ಯಾಂಡಲ್‌ವುಡ್ ನಟ ತನುಷ್ ಶಿವಣ್ಣ ಅಭಿನಯದ ‘ಬಾಸ್’ ಚಿತ್ರವು ಆರಂಭದಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ. ಅಷ್ಟೇ ಅಲ್ಲದೆ ಈ ಚಿತ್ರದ ಟೀಸರ್ ಬಿಡುಗಡೆಯಾದ ಸಂದರ್ಭದಲ್ಲಿ ಈ ವಿಷ್ಯ ಮತ್ತೆ ಚರ್ಚೆಗೆ ಕಾರಣವಾಗಿತ್ತು.
ಜೊತೆಗೆ ಇದು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದ ಸಿನಿಮಾ ಎಂದೇ ಹೇಳಲಾಗುತ್ತಿತ್ತು. ಇದೀಗ ಈ ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆಯೇ ಮತ್ತೊಂದು ಕಾನೂನು ಬೆಳವಣಿಗೆ ನಡೆದಿದ್ದು, ಹೀಗಾಗಿ ಬಾಸ್ ಸಿನಿಮಾ ಬಿಡುಗಡೆ ಆಗುವುದು ಬಹುತೇಕ ಅನುಮಾನವಾಗಿದೆ.
Bangalore,Karnataka
Jun 29, 2026 12:33 PM IST













