Vijay: ಹಾಸ್ಟೆಲ್​​ಗೆ ದಿಢೀರ್ ಇನ್​ಸ್ಪೆಕ್ಷನ್​ಗೆ ಬಂದ ದಳಪತಿ, ಟಾಯ್ಲೆಟ್ಸ್ ಕೂಡಾ ಖುದ್ದಾಗಿ ಪರಿಶೀಲಿಸಿದ ಸಿಎಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಿಜಯ್


Last Updated:

CM Vijay: ಸಿಎಂ ವಿಜಯ್ ಅವರು ದಿಢೀರ್ ಹಾಸ್ಟೆಲ್​ಗೆ ಭೇಟಿ ಕೊಟ್ಟಿದ್ದಾರೆ. ಭೇಟಿ ಕೊಟ್ಟು ಹಾಸ್ಟೆಲ್ ಸೌಲಭ್ಯವನ್ನು ಪರಿಶೀಲಿಸಿದರು.

ವಿಜಯ್
ವಿಜಯ್

ಮುಖ್ಯಮಂತ್ರಿ (Chief Minister) ಸಿ ಜೋಸೆಫ್ ವಿಜಯ್ (C Joseph Vijay) ಅವರು ಸೈದಾಪೇಟೆಯಲ್ಲಿರುವ ಹಾಸ್ಟೆಲ್​ಗೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ಅವರು ಶುಕ್ರವಾರ ದಿಢೀರ್ ಆಗಿ ಇನ್​ಸ್ಪೆಕ್ಷನ್​​ಗೆ ಬಂದಿದ್ದು, ಚೆನ್ನೈನ ಎಂಸಿ ರಾಜಾ ಆದಿ ದ್ರಾವಿಡರ್ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿಗಳ ಜೊತೆ ಮಾತನಾಡಿದರು. ವಿದ್ಯಾರ್ಥಿಗಳು ಕಳಪೆ ಆಹಾರದ ಗುಣಮಟ್ಟ, ಸೌಲಭ್ಯಗಳ ಕೊರತೆ, ಇತರ ಸಮಸ್ಯೆಗಳ ಬಗ್ಗೆ ಸಿಎಂ ಜೊತೆ ಮಾತನಾಡಿದರು.

ಹಾಸ್ಟೆಲ್‌ನಲ್ಲಿ ನೀಡಲಾಗುವ ಊಟದಲ್ಲಿ ಹೆಚ್ಚಾಗಿ ಹುಳುಗಳು ಮತ್ತು ಕೀಟಗಳು ಇರುತ್ತವೆ ಎಂದು ಹಾಸ್ಟೆಲ್‌ನಲ್ಲಿರುವ ಯುವಕರು ಆರೋಪಿಸಿದ್ದಾರೆ.

“ಕಳೆದ ವರ್ಷ ನಾವು ಪ್ರತಿಭಟನೆ ನಡೆಸಿದ ನಂತರ ಆಹಾರದ ಗುಣಮಟ್ಟ ಸ್ವಲ್ಪ ಸಮಯದವರೆಗೆ ಸುಧಾರಿಸಿತು, ಆದರೆ ಕೆಲವೇ ದಿನಗಳಲ್ಲಿ ಅದು ಮತ್ತೆ ಹದಗೆಟ್ಟಿತು” ಎಂದು ಅವರು ಮುಖ್ಯಮಂತ್ರಿಗೆ ತಿಳಿಸಿದರು.

ಮುಖ್ಯಮಂತ್ರಿ ವಿಜಯ್ ಹಾಸ್ಟೆಲ್ ಒಳಗೆ ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿಗಳ ಗುಂಪು ಅವರ ಬಳಿಗೆ ಬಂದಾಗ ವಿಜಯ್ ಅರ್ಧದಾರಿಯಲ್ಲೇ ನಿಂತರು. ಅವರು ವಿದ್ಯಾರ್ಥಿಗಳ ಮಾತುಗಳನ್ನು ಕೇಳಲು ನಿಂತರು.

ನೀರು ಸರಬರಾಜು ಕೊರತೆ, ಗಲೀಜಾದ ಬಾತ್​ ರೂಮ್, ಸಿಬ್ಬಂದಿ ಕೊರತೆ, ಅಡುಗೆಮನೆಯಲ್ಲಿ ನೈರ್ಮಲ್ಯದ ಕೊರತೆ ಮತ್ತು ಸಿಸಿಟಿವಿ ಕಣ್ಗಾವಲು ಕೊರತೆಯ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಅಡುಗೆ ಕೆಲಸಗಾರರು ಆಹಾರ ತಯಾರಿಸುವಾಗ ಕೈಗವಸು ಅಥವಾ ಕ್ಯಾಪ್‌ಗಳನ್ನು ಬಳಸುವುದಿಲ್ಲ ಎಂದಿದ್ದಾರೆ.

ಕಂಪಲ್ಸರಿ 64 ಸಿಸಿಟಿವಿ ಕ್ಯಾಮೆರಾಗಳಲ್ಲಿ ಕೇವಲ ಒಂದನ್ನು ಮಾತ್ರ ಫಿಕ್ಸ್ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಟಿಎನ್‌ಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಹಲವಾರು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡು, ರಾತ್ರಿ 9.30 ರ ಹೊತ್ತಿಗೆ ಹಾಸ್ಟೆಲ್ ಗೇಟ್‌ಗಳನ್ನು ಮುಚ್ಚಲಾಯಿತು. ಕೆಲಸ ಅಥವಾ ಕೋಚಿಂಗ್ ಕ್ಲಾಸ್​​ಗೆ ಹೋಗಿ ತಡವಾಗಿ ಹಿಂತಿರುಗುವವರು ಹತ್ತಿರದ ಪಾರ್ಕ್ ಅಥವಾ ಹಾಸ್ಟೆಲ್ ಹೊರಗೆ ಮಲಗಬೇಕಾಗುತ್ತದೆ ಎಂದು ಹೇಳಿದರು.

ಸಮಾಜ ವಿರೋಧಿ ಅಂಶಗಳು ಕೂಡಾ ಹಾಸ್ಟೆಲ್ ಆವರಣಕ್ಕೆ ಬಂದಿವೆ. ಕೆಲವು ವಾರ್ಡನ್‌ಗಳು ಮತ್ತು ವಾಚ್‌ಮೆನ್‌ಗಳು ವಿದ್ಯಾರ್ಥಿಗಳನ್ನು ಮಾತಿನ ಮೂಲಕ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದಾಗಿ ಅನೇಕರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದಿದ್ದಾರೆ.

ನಾವು ಸುಧಾರಿತ ಸೌಕರ್ಯಗಳು, ಕ್ರೀಡಾ ಸೌಲಭ್ಯಗಳು ಮತ್ತು ಹಾಸ್ಟೆಲ್‌ನ ಒಟ್ಟಾರೆ ನಿರ್ವಹಣೆಯನ್ನು ಬಯಸುತ್ತೇವೆ” ಎಂದು ವಿದ್ಯಾರ್ಥಿಯೊಬ್ಬರು ಮುಖ್ಯಮಂತ್ರಿಗೆ ತಿಳಿಸಿದರು. ಪರಿಶೀಲನೆ ಸಮಯದಲ್ಲಿ ಹೇಳಲಾದ ಎಲ್ಲಾ ದೂರುಗಳನ್ನು ಪರಿಹರಿಸಲಾಗುವುದು ಎಂದು ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed