Vijay: ಚಾಂಪಿಯನ್ ಜೊತೆ ದಳಪತಿ ಚೆಸ್ ಆಟ! ಪ್ರಜ್ಞಾನಂದಗೆ ತಮಿಳುನಾಡು ಸಿಎಂ ಬಂಪರ್ ಗಿಫ್ಟ್! | | ACTPnews

ಸಿಎಂ ದಳಪತಿ ವಿಜಯ್


Last Updated:

ಜೂನ್ 6ರಂದು ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ 2026 ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಜರ್ಮನಿಯ ಬಲಿಷ್ಠ ಆಟಗಾರ ವಿನ್ಸೆಂಟ್ ಕೀಮರ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಸಿಎಂ ದಳಪತಿ ವಿಜಯ್
ಸಿಎಂ ದಳಪತಿ ವಿಜಯ್

ಭಾರತದ ಯುವ ಚೆಸ್ ಪ್ರತಿಭೆ ಆರ್. ಪ್ರಜ್ಞಾನಂದ (R. Praggnanandha) ಮತ್ತೊಮ್ಮೆ ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಪ್ರತಿಷ್ಠಿತ ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ. ಈ ಐತಿಹಾಸಿಕ ಸಾಧನೆಯನ್ನು ಗೌರವಿಸಿ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ (Vijay) ಅವರು ಪ್ರಜ್ಞಾನಂದ ಅವರನ್ನು ವಿಶೇಷವಾಗಿ ಸನ್ಮಾನಿಸಿದ್ದು, 50 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಿ ಅಭಿನಂದಿಸಿದ್ದಾರೆ.

ಜೂನ್ 6ರಂದು ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ 2026 ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಜರ್ಮನಿಯ ಬಲಿಷ್ಠ ಆಟಗಾರ ವಿನ್ಸೆಂಟ್ ಕೀಮರ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ನಾರ್ವೆ ಚೆಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಿಎಂ ವಿಜಯ್ ಅವರಿಂದ ಅದ್ದೂರಿ ಸನ್ಮಾನ

ಪ್ರಜ್ಞಾನಂದ ಅವರ ಸಾಧನೆಯನ್ನು ಗುರುತಿಸಿ ತಮಿಳುನಾಡು ಸರ್ಕಾರ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಯುವ ಚೆಸ್ ತಾರೆಗೆ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಅಭಿನಂದಿಸಿದರು.

ಸನ್ಮಾನ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಮುಖ್ಯಮಂತ್ರಿ ವಿಜಯ್ ಮತ್ತು ಪ್ರಜ್ಞಾನಂದ ನಡುವಿನ ಚೆಸ್ ಪಂದ್ಯ ಹೊರಹೊಮ್ಮಿತು. ಸಾಮಾನ್ಯವಾಗಿ ರಾಜಕೀಯ ಮತ್ತು ಆಡಳಿತ ಚಟುವಟಿಕೆಗಳಲ್ಲಿ ನಿರತರಾಗಿರುವ ಮುಖ್ಯಮಂತ್ರಿ ವಿಜಯ್ ಅವರು ಚೆಸ್ ಆಟದಲ್ಲಿ ಆಸಕ್ತಿ ತೋರಿದ್ದು ಅನೇಕರ ಗಮನ ಸೆಳೆಯಿತು.

ಕಾರ್ಯಕ್ರಮದ ವೇಳೆ ಇಬ್ಬರೂ ಸುಮಾರು 15 ನಿಮಿಷಗಳ ಕಾಲ ಚೆಸ್ ಆಡಿದರು. ಈ ಸಂದರ್ಭವನ್ನು ಕಂಡು ಅಲ್ಲಿ ನೆರೆದಿದ್ದವರು ಆಶ್ಚರ್ಯ ವ್ಯಕ್ತಪಡಿಸಿದರು. ಪ್ರಜ್ಞಾನಂದ ಅವರಂತಹ ವಿಶ್ವಮಟ್ಟದ ಆಟಗಾರನೊಂದಿಗೆ ಮುಖ್ಯಮಂತ್ರಿ ನೇರವಾಗಿ ಚೆಸ್ ಆಡುವುದು ಅಪರೂಪದ ಕ್ಷಣವಾಗಿತ್ತು.

ಸನ್ಮಾನ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಜ್ಞಾನಂದ, ಮುಖ್ಯಮಂತ್ರಿ ವಿಜಯ್ ಅವರ ಚೆಸ್ ಕೌಶಲ್ಯವನ್ನು ಪ್ರಶಂಸಿಸಿದರು. ಚೆಸ್ ಬೋರ್ಡ್ ಜೊತೆಗೆ ಬರಲು ಹೇಳಲಾಗಿತ್ತು. ಆದರೆ ಮುಖ್ಯಮಂತ್ರಿ ತಮ್ಮೊಂದಿಗೆ ಚೆಸ್ ಆಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದರು.

ಈ ಗೌರವ ಕಾರ್ಯಕ್ರಮದ ಕುರಿತು ತಮಿಳುನಾಡು ಮುಖ್ಯಮಂತ್ರಿ ಕಚೇರಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದೆ. ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಪ್ರಜ್ಞಾನಂದ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ತಿಳಿಸಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports