Vijay Trisha: ವಿಜಯ್ ಜೊತೆಗಿನ ತ್ರಿಷಾ ಫೋಟೋ ನಕಲಿಯಾ? AI ಇಮೇಜ್ ಇಟ್ಟುಕೊಂಡು ಯಾಮಾರಿಸಿದ್ರಾ ನಟಿ? | | ACTPnews

ನಟಿ ತ್ರಿಶಾ


Last Updated:

ದಳಪತಿ ವಿಜಯ್ (Vijay) ಅವರ 52ನೇ ಹುಟ್ಟುಹಬ್ಬದ ಸಂಭ್ರಮದ ನಡುವೆ ನಟಿ ತ್ರಿಷಾ (Trisha) ಹಂಚಿಕೊಂಡಿದ್ದ ಒಂದು ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನಟಿ ತ್ರಿಶಾ
ನಟಿ ತ್ರಿಶಾ

ದಳಪತಿ ವಿಜಯ್ (Vijay) ಅವರ 52ನೇ ಹುಟ್ಟುಹಬ್ಬದ ಸಂಭ್ರಮದ ನಡುವೆ ನಟಿ ತ್ರಿಷಾ (Trisha) ಹಂಚಿಕೊಂಡಿದ್ದ ಒಂದು ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರಂಭದಲ್ಲಿ ಈ ಚಿತ್ರವನ್ನು ನೋಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರೂ, ಕೆಲವೇ ಗಂಟೆಗಳಲ್ಲಿ ಚಿತ್ರದ ನೈಜತೆ ಕುರಿತ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ. ತ್ರಿಷಾ ಹಂಚಿಕೊಂಡ ಚಿತ್ರ AI ನಿಂದ ಸೃಷ್ಟಿಸಲಾಗಿದೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಕಾರಣವಾಗಿದೆ.

ಜೂನ್ 22ರಂದು ದಳಪತಿ ವಿಜಯ್ ತಮ್ಮ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ತಮಿಳು ಚಿತ್ರರಂಗದ ಅನೇಕ ಗಣ್ಯರು ಮತ್ತು ಅಭಿಮಾನಿಗಳು ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದರು. ಆದರೆ ತ್ರಿಷಾ ಅವರಿಂದ ಯಾವುದೇ ಪೋಸ್ಟ್ ಕಾಣಿಸದ ಕಾರಣ ಅಭಿಮಾನಿಗಳಲ್ಲಿ ಪ್ರಶ್ನೆಗಳು ಮೂಡಿದ್ದವು.

ಇತ್ತೀಚಿನ ದಿನಗಳಲ್ಲಿ ವಿಜಯ್ ಮತ್ತು ತ್ರಿಷಾ ಕುರಿತ ಗಾಸಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಇಬ್ಬರ ನಡುವೆ ಎಲ್ಲವೂ ಸರಿಯಿದೆಯೇ ಎಂಬ ಚರ್ಚೆ ಶುರುವಾಯಿತು. ಆದರೆ ಕೆಲ ಸಮಯದ ಬಳಿಕ ತ್ರಿಷಾ ಹಂಚಿಕೊಂಡ ಫೋಟೋ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಂತಾಯಿತು.

ವಿಜಯ್ ಅವರ ಉಡುಗೆ, ಹೇರ್ ಸ್ಟೈಲ್, ಹೀಗೆ ಅನೇಕ ಸೂಕ್ಷ್ಮ ವಿವರಗಳನ್ನು ಗಮನಿಸಿದ ಅಭಿಮಾನಿಗಳು ಇದು ಅಸಲಿ ಫೋಟೋ ಅಲ್ಲ ಬದಲಾಗಿ ಇದು AI ಫೋಟೋ ಎಂದು ಹೇಳಿಕೊಂಡಿದ್ದಾರೆ.

ಆದರೆ ಚಿತ್ರ ವೈರಲ್ ಆದ ಕೆಲವೇ ಹೊತ್ತಿನಲ್ಲಿ ಅದರಲ್ಲಿರುವ ಕೆಲವು ವಿವರಗಳು ನೆಟ್ಟಿಗರ ಗಮನ ಸೆಳೆದವು. ದೊಡ್ಡ ಕೇಕ್ ಪಕ್ಕದಲ್ಲಿರುವ ಚಾಕುವಿನ ಮೇಲೆ ಕೇಕ್ ತುಂಡುಗಳು ಅಂಟಿಕೊಂಡಿರುವುದು ಕಂಡುಬಂದಿದೆ. ಆದರೆ ಕೇಕ್ ಕತ್ತರಿಸಿರುವ ಯಾವುದೇ ಸ್ಪಷ್ಟ ಗುರುತು ಚಿತ್ರದಲ್ಲಿ ಕಾಣಿಸಿಲ್ಲ.

ಇದೇ ರೀತಿಯಾಗಿ ಎರಡು ಕೇಕ್‌ಗಳ ಮೇಲಿರುವ ಮೇಣದಬತ್ತಿಗಳಲ್ಲಿಯೂ ವ್ಯತ್ಯಾಸ ಕಂಡುಬಂದಿದೆ. ಒಂದರಲ್ಲಿ ಸಾಮಾನ್ಯವಾಗಿ ಬೆಂಕಿ ಉರಿಯುತ್ತಿರುವಂತೆ ಕಂಡರೆ, ಮತ್ತೊಂದರಲ್ಲಿ ಬಿಳಿ ಬಣ್ಣದ ವಿಚಿತ್ರ ಜ್ವಾಲೆ ಕಾಣಿಸುತ್ತಿದೆ.

ಫೋಟೋದಲ್ಲಿರುವ ಮೂರು ಸಣ್ಣ ಕೇಕ್‌ಗಳ ಬಗ್ಗೆಯೂ ನೆಟ್ಟಿಗರು ಮಾಹಿತಿ ಸಂಗ್ರಹಿಸಿದ್ದಾರೆ. ಅವು ನಿರ್ದಿಷ್ಟ ಪ್ರೀಮಿಯಂ ಬೊಟಿಕ್ ಪ್ಯಾಟಿಸ್ಸೆರಿ ಮತ್ತು ಕೆಫೆಯಿಂದ ಬಂದಿರುವಂತಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆ ಸಂಸ್ಥೆಯ ಮಳಿಗೆಗಳು ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಇದ್ದು, ಚೆನ್ನೈನಲ್ಲಿ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.

ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನೆಟ್ಟಿಗರು, ತ್ರಿಶಾ ಅವರು ವಿಜಯ್ ಬರ್ತ್​​ಡೇಗೆ ಹಂಚಿಕೊಂಡಿರುವುದು ಇತ್ತೀಚಿನ ಫೋಟೋ ಅಲ್ಲವೇ ಅಲ್ಲ, ಅದು AI ಎಂದು ಕನ್ಫರ್ಮ್ ಮಾಡಿದ್ದಾರೆ. ಆದರೆ ಈ ಕುರಿತು ತ್ರಿಷಾ ಅಥವಾ ವಿಜಯ್ ತಂಡದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed