Last Updated:
ಮೀನು ತಿನ್ನಲು ಆಸೆ, ಆದರೆ ಅದನ್ನು ಖರೀದಿಸಲು ಹಣವಿರಲಿಲ್ಲ. ಹೀಗಂತ ಮಹಿಳೆಯೊಬ್ಬರು ಮೀನಿನ ಮಾರುಕಟ್ಟೆಯಿಂದ ಮೀನಿನೊಂದಿಗೆ ಪರಾರಿಯಾಗಿದ್ದು, ಕೆಲ ದಿನಗಳ ನಂತರ ಆಕೆ ಸಿಕ್ಕಿಬಿದ್ದಿದ್ದಾಳೆ. ಇದೀಗ ಪೊಲೀಸರು ಬಂಧಿಸಿದ್ದಾರೆ.
ಮೀನು ತಿನ್ನಲು (Fish) ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಅದೇ ರೀತಿ ಇಲ್ಲೊಬ್ಬ ವೃದ್ಧ ಮಹಿಳೆ ಹಿಲ್ಸಾ ಮೀನು (Hilsa Fish) ತಿನ್ನಲು ಬಯಸಿದ್ದಳು, ಆದರೆ ಅದನ್ನು ಖರೀದಿಸಲು ಆಕೆಯ ಬಳಿ ಸಾಕಷ್ಟು ಹಣವಿರಲಿಲ್ಲ ಎಂದು ವರದಿಯಾಗಿದೆ. ಅದಕ್ಕಾಗಿಯೇ ಅವಳು ಹಿಲ್ಸಾ ಮೀನನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಆರೋಪಿಸಲಾಗಿದೆ. ಮಧ್ಯಮಗ್ರಾಮ್ ಮಾರುಕಟ್ಟೆಯಿಂದ ಹಿಲ್ಸಾ ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮಧ್ಯಮಗ್ರಾಮ್ ಪೊಲೀಸ್ ಠಾಣೆಯ ಪೊಲೀಸರು ಅಂತಿಮವಾಗಿ ಬಂಧಿಸಿದ್ದಾರೆ.














