Last Updated:
ಬಿಗ್ ಬಾಸ್ ನೀಡಿದ ಮೊದಲ ಟಾಸ್ಕ್ನಿಂದಲೇ ಸ್ಪರ್ಧಿಗಳ ನಡುವೆ ಕಿರಿಕ್ ಆರಂಭವಾಗಿದ್ದು, ಗಗನ್ ಚಿನ್ನಪ್ಪ (Gagan Chinnappa) ಮತ್ತು ಮಂಜ (Manja) ನಡುವಿನ ಮಾತಿನ ಜಟಾಪಟಿ ಇದೀಗ ಗಮನ ಸೆಳೆಯುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13) ಗ್ರ್ಯಾಂಡ್ ಓಪನಿಂಗ್ಗೆ ಭರ್ಜರಿ ಚಾಲನೆ ಸಿಕ್ಕಿದೆ. ಈ ಬಾರಿ ವಿಭಿನ್ನ ಏವಿಯೇಷನ್ ಥೀಮ್ನೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು, 16 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯತ್ತ ಪ್ರಯಾಣ ಆರಂಭಿಸಿದ್ದಾರೆ. ಆದರೆ ಮನೆ ತಲುಪುವ ಮೊದಲೇ ಸ್ಪರ್ಧಿಗಳ ನಡುವೆ ಮಾತಿನ ಸಮರ ಶುರುವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ನೀಡಿದ ಮೊದಲ ಟಾಸ್ಕ್ನಿಂದಲೇ ಸ್ಪರ್ಧಿಗಳ ನಡುವೆ ಕಿರಿಕ್ ಆರಂಭವಾಗಿದ್ದು, ಗಗನ್ ಚಿನ್ನಪ್ಪ (Gagan Chinnappa) ಮತ್ತು ಮಂಜ (Manja) ನಡುವಿನ ಮಾತಿನ ಜಟಾಪಟಿ ಇದೀಗ ಗಮನ ಸೆಳೆಯುತ್ತಿದೆ.














