Vijay Sethupathi Movie: ವಿಜಯ್ ಸೇತುಪತಿ-ಸಾಯಿ ಪಲ್ಲವಿ ಜೋಡಿ ಮ್ಯಾಜಿಕ್! ಕೊಲ್ಕತ್ತಾದಲ್ಲಿ ರೋಮ್ಯಾಂಟಿಕ್ ಶೂಟ್! | | ACTPnews

News18


Last Updated:

ವಿಜಯ್ ಸೇತುಪತಿ ಯಾಕೆ ಸಣ್ಣ ಆಗಿದ್ದಾರೆ. ಯಾವ ಚಿತ್ರಕ್ಕೆ ಈ ಲುಕ್ ಅನ್ನುವ ಪ್ರಶ್ನೆ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಮಣಿರತ್ನಂ ಅವರ ಚಿತ್ರದಲ್ಲಿಯೇ ವಿಜಯ್ ಅಭಿನಯಿಸುತ್ತಿದ್ದಾರೆ. ಸಾಯಿ ಪಲ್ಲವಿ ಜೋಡಿ ಆಗಿದ್ದಾರೆ. ಇವರ ಸಿನಿಮಾದ ಶೂಟಿಂಗ್ ಕೊಲ್ಕತ್ತಾದ ಹೌರಾ ಬ್ರಿಡ್ಜ್ ಅಲ್ಲಿ ನಡೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

News18
News18

ಕಾಲಿವುಡ್‌ನ ವಿಜಯ್ ಸೇತುಪತಿ (Vijay Sethupathi) ತುಂಬಾನೆ ಸಣ್ಣ ಆಗಿದ್ದಾರೆ. ಪಕ್ಕಾ ಕಾಲೇಜು ಹುಡುಗನ ತರವೇ ಕಾಣಿಸುತ್ತಿದ್ದಾರೆ. ಆದರೆ, ಈ ಲುಕ್ ಯಾಕೆ ಅನ್ನುವ ಪ್ರಶ್ನೆ ಇತ್ತು. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ. ಡೈರೆಕ್ಟರ್ ಮಣಿರತ್ನಂ ಅವರ ಪ್ರೇಮಕತೆಯ ಚಿತ್ರಕ್ಕೆ ವಿಜಯ್ ಸೇತುಪತಿ (Vijay Sethupathi) ನಾಯಕರಾಗಿದ್ದಾರೆ. ಸಾಯಿ ಪಲ್ಲವಿ (Sai Pallavi) ಈ ಚಿತ್ರದ ನಾಯಕಿ ನೋಡಿ. ಇವರ ಚಿತ್ರೀಕರಣ ಶುರು ಆಗಿದೆ. ಕೊಲ್ಕತ್ತಾದ ಹೌರಾ ಬ್ರಿಡ್ಜ್ (Howrah Bridge) ಮೇಲೇನೆ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದರ ಫೋಟೋ ಮತ್ತು ವಿಡಿಯೋ ಕೂಡ ವೈರಲ್ ಆಗಿವೆ. ಇದರ ಸುತ್ತ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಲವ್ ಸ್ಟೋರಿ

ಹೌರಾ ಬ್ರಿಡ್ಜ್ ಮೇಲೆ ಸಾಯಿ ಪಲ್ಲವಿ ನಡೆದುಕೊಂಡು ಹೋಗ್ತಿದ್ದಾರೆ. ವಿಜಯ್ ಸೇತುಪತಿ ಜೊತೆಗೆ ಹೋಗುತ್ತಿದ್ದಾರೆ. ಇವರ ಈ ಒಂದು ವಿಡಿಯೋ ನೋಡಿದಾಗ ಸಡನ್ ಆಗಿ ಇದು ಸಿನಿಮಾ ಶೂಟಿಂಗ್ ಅನಿಸೋದಿಲ್ಲ.
Vijay Sethupathi Sai Pallavi Mani Ratnam Kolkata Howrah Bridge Film Shooting Latest Updates

ಹೌರಾ ಬ್ರಿಡ್ಜ್

(ಚಿತ್ರ ಕೃಪೆ: t2 ಟೆಲಿಗ್ರಾಫ್ ಇನ್‌ಸ್ಟಾಗ್ರಾಮ್)

ಯಾಕೆಂದ್ರೆ ವಿಜಯ್ ಸೇತುಪತಿ ಇಲ್ಲಿ ಗುರುತೇ ಸಿಗೋದಿಲ್ಲ. ಅಷ್ಟು ಸಣ್ಣ ಆಗಿದ್ದಾರೆ. ಸಾಯಿ ಪಲ್ಲವಿ ಕೂಡ ಸಿಂಪಲ್ ಡ್ರೆಸ್ ಅಲ್ಲಿಯೇ ಇದ್ದಾರೆ. ಇವರನ್ನ ನೋಡಿದರೆ ಯಾರೋ ಇಬ್ಬರು ಹೋಗ್ತಿದ್ದಾರೆ ಅನಿಸಿ ಬಿಡುತ್ತದೆ.

ಮಣಿರತ್ನಂ ಸಿನಿಮಾ

ಮರಣಿರತ್ನಂ ಅವರು ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹೆಸರಿಟ್ಟಿರೋ ಸುದ್ದಿ ಏನೂ ಇಲ್ಲ. ಆದರೆ, ಲವ್ ಸ್ಟೋರಿ ಇರೋ ಸಿನಿಮಾ ಮಾಡ್ತಿದ್ದಾರೆ ಅನ್ನೋದು ಗೊತ್ತಾಗಿದೆ.

ಈ ಚಿತ್ರಕ್ಕಾಗಿಯೇ ವಿಜಯ್ ಸೇತುಪತಿ ಸಣ್ಣ ಆಗಿದ್ದಾರೆ. ಕಾಲೇಜು ಯುವಕನ ರೀತಿನೇ ಕಾಣಿಸುತ್ತಿದ್ದಾರೆ. ಸಾಯಿ ಪಲ್ಲವಿ ಅಲ್ಲಿ ಅಂತಹ ಭಾರೀ ಬದಲಾವಣೆ ಏನು ಕಾಣಿಸುತ್ತಿಲ್ಲ. ಸಾಯಿ ಪಲ್ಲವಿ ಮೊದಲೇ ಯುವತಿಯ ತರವೇ ಇದ್ದಾರೆ ಬಿಡಿ.

Vijay Sethupathi Sai Pallavi Mani Ratnam Kolkata Howrah Bridge Film Shooting Latest Updates

ವಿಜಯ್ ಸೇತುಪತಿ-ಸಾಯಿ ಪಲ್ಲವಿ ಸಿನಿಮಾ ಶೂಟಿಂಗ್

(ಚಿತ್ರ ಕೃಪೆ: t2 ಟೆಲಿಗ್ರಾಫ್ ಇನ್‌ಸ್ಟಾಗ್ರಾಮ್)

ಹೌರಾ ಬ್ರಿಡ್ಜ್

ಹೌರಾ ಬ್ರಿಡ್ಜ್ ಮೇಲೆ ಅನೇಕ ಚಿತ್ರಗಳು ಶೂಟ್ ಆಗಿವೆ. ಆ ಸಾಲಿನಲ್ಲಿ ಈ ಚಿತ್ರವೂ ಸೇರಿದೆ. ಈ ಚಿತ್ರದ ಶೂಟಿಂಗ್ ಅನ್ನ ರಾತ್ರಿನೇ ಮಾಡಿದ್ದಾರೆ. ಅದು ವಿಡಿಯೋ ನೋಡಿದ್ರೇನೆ ತಿಳಿಯುತ್ತದೆ.

Vijay Sethupathi Sai Pallavi Mani Ratnam Kolkata Howrah Bridge Film Shooting Latest Updates

ಮಣಿರತ್ನಂ ಸಿನಿಮಾ

(ಚಿತ್ರ ಕೃಪೆ: t2 ಟೆಲಿಗ್ರಾಫ್ ಇನ್‌ಸ್ಟಾಗ್ರಾಮ್)

ಈ ಹಿಂದೆ ಬಂದಿದ್ದರು

ಮಣಿರತ್ನಂ ಅವರು ಈ ಹಿಂದೆ 2009 ರಲ್ಲಿ ಕೊಲ್ಕತ್ತಾಗೆ ಬಂದಿದ್ದರು. ಇಲ್ಲಿ ತಮ್ಮ ರಾವಣ ಚಿತ್ರದ ಶೂಟಿಂಗ್ ಮಾಡಿದ್ದರು. ಅದಾದ್ಮೇಲೆ ಈಗಲೇ ಈ ಹೊಸ ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದಾರೆ.

ಪ್ರೇಮ ಕತೆಯ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಹಾಗೂ ವಿಜಯ್ ಸೇತುಪತಿ ಹೀರೋ, ಹೀರೋಯಿನ್ ಅನ್ನೋದು ಗೊತ್ತೇ ಇದೆ. ಆದರೆ, ಈ ಚಿತ್ರದ ಬಗ್ಗೆ ಬೇರೆ ಮಾಹಿತಿ ಏನೂ ಇಲ್ಲ. ಬದಲಾಗಿ ಥಗ್‌ ಲೈಫ್ ಚಿತ್ರ ಆದ್ಮೇಲೆ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಗೆಲುವಿನ ನಿರೀಕ್ಷೆನೂ ಮಾಡುತ್ತಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed