Vijay Joseph: ‘ಕಾವೇರಿ’ ಸಂಧಾನಕ್ಕೆ ಡೇಟ್‌ ಫಿಕ್ಸ್; ಅತ್ತ ದಳಪತಿ ವಿಜಯ್ ಕರ್ನಾಟಕ ಪ್ರವಾಸಕ್ಕೆ ತಮಿಳುನಾಡು ವಿರೋಧ! ಮುಂದೇನಾಗುತ್ತೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಿಎಂ ವಿಜಯ್​ ​​


Last Updated:

ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಬೆನ್ನಲ್ಲೇ ಕರ್ನಾಟಕ ಸಿಎಂ ಹಾಗೂ ತಮಿಳುನಾಡು ಸಿಎಂ ನಡುವಿನ ಸಭೆ ಫಿಕ್ಸ್ ಆಗಿದೆ. ಆಗಸ್ಟ್‌ 3ರಂದು ಡಿಕೆ ಶಿವಕುಮಾರ್‌ ಹಾಗೂ ತಮಿಳುನಾಡು ಸಿಎಂ ವಿಜಯ್‌ ಮೀಟಿಂಗ್ ನಡೆಯಲಿದೆ.

ಸಿಎಂ ವಿಜಯ್​ ​​
ಸಿಎಂ ವಿಜಯ್​ ​​

ರಾಜ್ಯದಲ್ಲಿ ಮತ್ತೆ ಕಾವೇರಿ (Cauvery River) ಕಾಡ್ಗಿಚ್ಚು ಹೊತ್ತಿಕೊಂಡಿದೆ. ಬರದ ಬೇಗೆಯಲ್ಲಿ ಬೆಂದ ಅನ್ನದಾತರ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ತಮಿಳುನಾಡಿಗೆ (Tamil Nadu) ನೀರು ಹರಿಸಬೇಕು ಅನ್ನೋ CWRC (Cauvery Water Regulation Committee) ಆದೇಶಕ್ಕೆ ಕೆರಳಿ ಕೆಂಡವಾಗಿದ್ದಾರೆ. 4 ಟಿಎಂಸಿ (TMC) ಅಲ್ಲ, ಒಂದೇ ಒಂದು ಹನಿ ನೀರು ಬಿಟ್ಟರೂ ಹರಿಯೋದು ರಕ್ತ ಅಂತ ರೊಚ್ಚಿಗೆದ್ದಿದ್ದಾರೆ. ಬೀದಿಗಿಳಿದ ರೈತರು (Farmers) ಹೋರಾಟದ ಉಗ್ರ ಹೋರಾಟದ ರಣಕಹಳೆ ಮೊಳಗಿಸಿದ್ದಾರೆ.

ವಿಜಯ್​ ಕರ್ನಾಟಕ ಪ್ರವಾಸಕ್ಕೆ ತಮಿಳುನಾಡಿನಲ್ಲಿ ವಿರೋಧ

ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಬೆನ್ನಲ್ಲೇ ಕರ್ನಾಟಕ ಸಿಎಂ ಹಾಗೂ ತಮಿಳುನಾಡು ಸಿಎಂ ನಡುವಿನ ಸಭೆ ಫಿಕ್ಸ್ ಆಗಿದೆ. ಆಗಸ್ಟ್‌ 3ರಂದು ಡಿಕೆ ಶಿವಕುಮಾರ್‌ ಹಾಗೂ ತಮಿಳುನಾಡು ಸಿಎಂ ವಿಜಯ್‌ ಮೀಟಿಂಗ್ ನಡೆಯಲಿದೆ. ಕಾವೇರಿ ನೀರು ಬಿಡುವ ವಿಚಾರದ ಬಗ್ಗೆ ಉಭಯ ಸಿಎಂಗಳು ಚರ್ಚೆ ಮಾಡಲಿದ್ದಾರೆ. ಆದ್ರೀಗ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರ ಕರ್ನಾಟಕ ಪ್ರವಾಸಕ್ಕೇ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: Cauvery Water: ಕರ್ನಾಟಕ ಬಂದ್, ಬಂದ್, ಬಂದ್? ಕಾವೇರಿ ನೀರು ಬಿಟ್ರೆ ಕರುನಾಡೇ ಸ್ತಬ್ಧವಾಗೋದು ಪಕ್ಕಾ

ವಿರೋಧ ಪಕ್ಷದ ಡಿಎಂಕೆ ಸೇರಿ ಟಿವಿಕೆ ಪಕ್ಷಕ್ಕೆ ಬೆಂಬಲ ಸೂಚಿಸಿರುವ ಮಿತ್ರ ಪಕ್ಷಗಳು ವಿಜಯ್​ ಅವರ ಕರ್ನಾಟಕ ಪ್ರವಾಸಕ್ಕೆ ವಿರೋಧ ವ್ಯಕ್ತಪಡಿಸಿವೆ. ಕರ್ನಾಟಕಕ್ಕೆ ಹೋಗದಂತೆಯೂ ಸಿಎಂ ವಿಜಯ್​ಗೆ ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇಷ್ಟು ದಿನ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿಯೇ ಹೋರಾಟ ಮಾಡಲಾಗಿದೆ. ಅದೇ ರೀತಿಯಲ್ಲಿ ಕರ್ನಾಟಕ ವಿಷಯದಲ್ಲಿ ಅದೇ ನಡೆ ಮುಂದುವರಿಸಲು ವಿಪಕ್ಷ ಹಾಗೂ ಮಿತ್ರ ಪಕ್ಷಗಳು ಆಗ್ರಹಿಸಿವೆ.
ಇನ್ನು, ಇದೇ ಆಗಸ್ಟ್ 3ರಂದು ವಿಧಾನಸೌಧದಲ್ಲಿ ಮೇಕೆದಾಟು ಯೋಜನೆ ಸಂಬಂಧ ಸಿಎಂ ಡಿಕೆ ಶಿವಕುಮಾರ್​ ಮತ್ತು ಸಿಎಂ ವಿಜಯ್​​ ಸಭೆ ನಿಗದಿಯಾಗಿದ್ದು, ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲದ ಬಗ್ಗೆ ಮತ್ತು ಸಿಎಂ ವಿಜಯ್​ ಅವರನ್ನು ಕೆಆರ್​ಎಸ್ ಡ್ಯಾಮ್​ಗೆ ಕರೆದುಕೊಂಡು ಹೋಗಿ ವಾಸ್ತವಿಕ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾವೇರಿಗಾಗಿ ‘ಕೇಸರಿ’ ಕಹಳೆ!

ಕಾವೇರಿ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ನೀರು ಹರಿಸದಂತೆ ಆಗ್ರಹಿಸಿ ಜುಲೈ 31ರಂದು ಬಿಜೆಪಿಯಿಂದ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆಗೆ ಸಜ್ಜಾಗಿದೆ. ಇತ್ತ ಜೆಡಿಎಸ್‌ ಕೂಡ ನೀರು ಬಿಡಬಾರದು ಅಂತ ಆಗ್ರಹಿಸಿದೆ.

ಕಾವೇರಿ ಕದನ.. ನಾಳೆ CWMA ಮೀಟಿಂಗ್‌

ಇನ್ನು, CWMA ಆದೇಶ ರಾಜ್ಯಕ್ಕೆ ಸಂಕಷ್ಟ ತಂದಿಡುತ್ತಿದೆ. ಕುಡಿಯೋ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗೋ ಹಂತದಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೆ ಸಜ್ಜಾಗಿದೆ. ಮತ್ತೊಂದ್ಕಡೆ CWRC ಸೂಚನೆ ಸಂಬಂಧ CWMAಗೆ ಮೇಲ್ಮನವಿ ಸಲ್ಲಿಸಿದೆ. ಈ ಸಂಬಂಧ ನಾಳೆ CWMA ತುರ್ತು ಸಭೆ ಕರೆದಿದೆ. ಮಧ್ಯಾಹ್ನ 2.30ಕ್ಕೆ ಮೀಟಿಂಗ್ ಮಹತ್ವದ ಚರ್ಚೆ ನಡೆಯಲಿದೆ.

(ವರದಿ: ಕೃಷ್ಣ, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed