Last Updated:
ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಬೆನ್ನಲ್ಲೇ ಕರ್ನಾಟಕ ಸಿಎಂ ಹಾಗೂ ತಮಿಳುನಾಡು ಸಿಎಂ ನಡುವಿನ ಸಭೆ ಫಿಕ್ಸ್ ಆಗಿದೆ. ಆಗಸ್ಟ್ 3ರಂದು ಡಿಕೆ ಶಿವಕುಮಾರ್ ಹಾಗೂ ತಮಿಳುನಾಡು ಸಿಎಂ ವಿಜಯ್ ಮೀಟಿಂಗ್ ನಡೆಯಲಿದೆ.
ರಾಜ್ಯದಲ್ಲಿ ಮತ್ತೆ ಕಾವೇರಿ (Cauvery River) ಕಾಡ್ಗಿಚ್ಚು ಹೊತ್ತಿಕೊಂಡಿದೆ. ಬರದ ಬೇಗೆಯಲ್ಲಿ ಬೆಂದ ಅನ್ನದಾತರ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ತಮಿಳುನಾಡಿಗೆ (Tamil Nadu) ನೀರು ಹರಿಸಬೇಕು ಅನ್ನೋ CWRC (Cauvery Water Regulation Committee) ಆದೇಶಕ್ಕೆ ಕೆರಳಿ ಕೆಂಡವಾಗಿದ್ದಾರೆ. 4 ಟಿಎಂಸಿ (TMC) ಅಲ್ಲ, ಒಂದೇ ಒಂದು ಹನಿ ನೀರು ಬಿಟ್ಟರೂ ಹರಿಯೋದು ರಕ್ತ ಅಂತ ರೊಚ್ಚಿಗೆದ್ದಿದ್ದಾರೆ. ಬೀದಿಗಿಳಿದ ರೈತರು (Farmers) ಹೋರಾಟದ ಉಗ್ರ ಹೋರಾಟದ ರಣಕಹಳೆ ಮೊಳಗಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ಬೆನ್ನಲ್ಲೇ ಕರ್ನಾಟಕ ಸಿಎಂ ಹಾಗೂ ತಮಿಳುನಾಡು ಸಿಎಂ ನಡುವಿನ ಸಭೆ ಫಿಕ್ಸ್ ಆಗಿದೆ. ಆಗಸ್ಟ್ 3ರಂದು ಡಿಕೆ ಶಿವಕುಮಾರ್ ಹಾಗೂ ತಮಿಳುನಾಡು ಸಿಎಂ ವಿಜಯ್ ಮೀಟಿಂಗ್ ನಡೆಯಲಿದೆ. ಕಾವೇರಿ ನೀರು ಬಿಡುವ ವಿಚಾರದ ಬಗ್ಗೆ ಉಭಯ ಸಿಎಂಗಳು ಚರ್ಚೆ ಮಾಡಲಿದ್ದಾರೆ. ಆದ್ರೀಗ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರ ಕರ್ನಾಟಕ ಪ್ರವಾಸಕ್ಕೇ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ.
ಕಾವೇರಿ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ನೀರು ಹರಿಸದಂತೆ ಆಗ್ರಹಿಸಿ ಜುಲೈ 31ರಂದು ಬಿಜೆಪಿಯಿಂದ ಪ್ರತಿಭಟನೆಗೆ ಕರೆ ನೀಡಿದೆ. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆಗೆ ಸಜ್ಜಾಗಿದೆ. ಇತ್ತ ಜೆಡಿಎಸ್ ಕೂಡ ನೀರು ಬಿಡಬಾರದು ಅಂತ ಆಗ್ರಹಿಸಿದೆ.
ಇನ್ನು, CWMA ಆದೇಶ ರಾಜ್ಯಕ್ಕೆ ಸಂಕಷ್ಟ ತಂದಿಡುತ್ತಿದೆ. ಕುಡಿಯೋ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗೋ ಹಂತದಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ಕಾನೂನು ಹೋರಾಟಕ್ಕೆ ಸಜ್ಜಾಗಿದೆ. ಮತ್ತೊಂದ್ಕಡೆ CWRC ಸೂಚನೆ ಸಂಬಂಧ CWMAಗೆ ಮೇಲ್ಮನವಿ ಸಲ್ಲಿಸಿದೆ. ಈ ಸಂಬಂಧ ನಾಳೆ CWMA ತುರ್ತು ಸಭೆ ಕರೆದಿದೆ. ಮಧ್ಯಾಹ್ನ 2.30ಕ್ಕೆ ಮೀಟಿಂಗ್ ಮಹತ್ವದ ಚರ್ಚೆ ನಡೆಯಲಿದೆ.
(ವರದಿ: ಕೃಷ್ಣ, ನ್ಯೂಸ್18 ಕನ್ನಡ, ಬೆಂಗಳೂರು)
Bangalore,Karnataka














