Last Updated:
Vijay: ಮುಖ್ಯಮಂತ್ರಿ ವಿಜಯ್ (Vijay) ಅವರನ್ನು ಭೇಟಿ ಮಾಡಿ ಗೋಟ್ ಸಿನಿಮಾ ನಿರ್ದೇಶಕ ವೆಂಕಟ್ ಪ್ರಭು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಇತ್ತೀಚೆಗಷ್ಟೇ ನಡೆದ ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆಯಲ್ಲಿ (Assembly Election) ಭರ್ಜರಿ ಜಯಗಳಿಸಿ ನೂತನ ಮುಖ್ಯಮಂತ್ರಿಯಾಗಿ (Chief Minister) ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಉತ್ತಮ ಅಧಿಕಾರ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ವಿಜಯ್ (Vijay) ಅವರನ್ನು ಭೇಟಿ ಮಾಡಿ ಗೋಟ್ ಸಿನಿಮಾ ನಿರ್ದೇಶಕ ವೆಂಕಟ್ ಪ್ರಭು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಹೌದು ದಳಪತಿ ವಿಜಯ್ ನಟನೆಯ ಜನಪ್ರೀಯ ಸಿನಿಮಾಗಳಲ್ಲಿ ಒಂದಾಗಿರುವ ಗೋಟ್ ಚಿತ್ರದ ಸಂದರ್ಭದಲ್ಲಿ ಬಳಸಲಾದ TN07 CM 2026 ಎಂಬ ನಂಬರ್ ಪ್ಲೇಟ್, ಹೊಸ ಸರ್ಕಾರದ ಬೆಳವಣಿಗೆಗಳ ನಡುವೆ ಮತ್ತೆ ಭಾರೀ ವೈರಲ್ ಆಗಿತ್ತು. ಈ ನಂಬರ್ ಕೇವಲ ಸಿನಿಮಾ ಪ್ರಾಪ್ ಮಾತ್ರವಲ್ಲ, ಇಂದಿನ ರಾಜಕೀಯ ಪರಿಸ್ಥಿತಿಗೆ ಅಚ್ಚರಿ ರೀತಿಯಲ್ಲಿ ಹೊಂದಾಣಿಕೆ ಆಗಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿತ್ತು .
A history is made..
From a thought… to a vision… to this moment.Happy to have met our honourable CM @TVKVijayHQ na today and present the very first manifestation of #GOAT. ❤️❤️❤️
This is only the beginning.
TN07CM2026 pic.twitter.com/VxwvFOKTo4— venkat prabhu (@vp_offl) May 18, 2026
ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಚಿತ್ರದ ಒಂದು ದೃಶ್ಯದಲ್ಲಿ, ನಾಯಕ ಪಾತ್ರಧಾರಿ ವಿಜಯ್ ಅವರು ಚಾಲನೆ ಮಾಡುತ್ತಿದ್ದ ಕಾರಿನಲ್ಲಿ TN07 CM 2026 ಎಂಬ ನಂಬರ್ ಬಳಸಲಾಗಿತ್ತು. ಸಿನಿಮಾ ಬಿಡುಗಡೆಯಾದ ವೇಳೆಯಲ್ಲೇ ಇದು ಗಮನ ಸೆಳೆದಿದ್ದರೂ, ಆಗ ಅದನ್ನು ಕೇವಲ ಸಿನಿಮಾದ ಕಲ್ಪನೆ ಎಂದುಕೊಂಡಿದ್ದರು. ಆದರೆ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಸಂಭಾವ್ಯ ಹಿನ್ನೆಲೆಯಲ್ಲಿರುವ ಇಂದಿನ ಘಟನಾವಳಿಗಳ ನಡುವೆ, ಈ ಒಂದು ನಂಬರ್ ಮತ್ತೆ ಜನಮನ ಸೆಳೆದಿದೆ.
ಇದೀಗ ನಿರ್ದೇಶಕ ವೆಂಕಟ್ ಪ್ರಭು ಆ ನಂಬರ್ ಪ್ಲೇಟ್ ಅನ್ನು ದೊಡ್ಡದಾಗಿ ಫ್ರೇಮ್ ಹಾಕಿಸಿಕೊಂಡು ಸಿಎಂ ವಿಜಯ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತಾದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಲ್ಲಿ ಟ್ರೆಂಡ್ ಆಗುತ್ತಿವೆ.
Bangalore [Bangalore],Bangalore,Karnataka













