Jailer 2: ‘ಜೈಲರ್ 2’ ಪ್ರಮೋಷನ್‌ಗೆ ತಲೈವಾ ಮಾಸ್ಟರ್ ಪ್ಲ್ಯಾನ್; ಪ್ರಸಾರವಾಗಲಿದೆ ರಜನಿಕಾಂತ್ 3 ಗಂಟೆಗಳ ಸಂದರ್ಶನ! | | ACTPnews

News18


Last Updated:

ಜೈಲರ್ 2 ಪ್ರಚಾರದ ಪ್ರಮುಖ ಆಕರ್ಷಣೆಯಾಗಿರುವುದು ರಜನಿಕಾಂತ್ ಮೂರು ಗಂಟೆಗಳ ವಿಶೇಷ ದೂರದರ್ಶನ ಸಂದರ್ಶನ. ಅಕ್ಟೋಬರ್ 11ರಂದು ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಸಂಜೆ 6:30ರಿಂದ ರಾತ್ರಿ 9:30ರವರೆಗೆ ಸನ್ ಟಿವಿಯಲ್ಲಿ ಪ್ರಸಾರವಾಗಲಿದೆ.

News18
News18

ಜೈಲರ್ 2 (Jailer 2) ಸಿನಿಮಾದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಚಿತ್ರತಂಡ ಪ್ರಚಾರ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಿದೆ. ಸೂಪರ್‌ಸ್ಟಾರ್ ರಜನಿಕಾಂತ್ (Superstar Rajinikanth) ಮತ್ತೊಮ್ಮೆ ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ಮೂಡಿದೆ. ಆ್ಯಕ್ಷನ್ ದೃಶ್ಯಗಳು, ತಾರಾಗಣ ಹಾಗೂ ನೆಲ್ಸನ್ ದಿಲೀಪ್‌ಕುಮಾರ್ (Nelson Dilipkumar) ನಿರ್ದೇಶನದ ಝಲಕ್ ಟ್ರೇಲರ್‌ನಲ್ಲಿ ಗಮನ ಸೆಳೆದಿದೆ. ಇದೀಗ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ವಿಭಿನ್ನ ತಂತ್ರವೊಂದನ್ನು ರೂಪಿಸಿದೆ.

ಆಡಿಯೋ ಲಾಂಚ್ ಬದಲು ಹೊಸ ಪ್ರಚಾರ ತಂತ್ರ

ಸಾಮಾನ್ಯವಾಗಿ ರಜನಿಕಾಂತ್ ಸಿನಿಮಾಗಳಿಗೆ ಅದ್ಧೂರಿಯಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ರಜನಿಕಾಂತ್ ಮಾತುಗಳು ಹಾಗೂ ಅನಿರುದ್ಧ್ ಸಂಗೀತ ಕಾರ್ಯಕ್ರಮ ಪ್ರಮುಖ ಆಕರ್ಷಣೆಯಾಗಿರುತ್ತವೆ. ಆದರೆ ಜೈಲರ್ 2 ವಿಚಾರದಲ್ಲಿ ಚಿತ್ರತಂಡ ಈ ಸಂಪ್ರದಾಯದಿಂದ ಕೊಂಚ ಭಿನ್ನವಾದ ದಾರಿ ಆಯ್ಕೆ ಮಾಡಿಕೊಂಡಿದೆ.

ಅದ್ದೂರಿ ಆಡಿಯೋ ಬಿಡುಗಡೆ ಸಮಾರಂಭದ ಬದಲಿಗೆ ಸರಳವಾದ ಆಲ್ಬಮ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ರಜನಿಕಾಂತ್ ವಿಶೇಷ ಸಂದರ್ಶನದ ಮೂಲಕ ಸಿನಿಮಾವನ್ನು ಪ್ರೇಕ್ಷಕರ ಮನೆಮನೆಗೆ ತಲುಪಿಸುವ ಪ್ರಯತ್ನ ನಡೆಯಲಿದೆ.

ಅಕ್ಟೋಬರ್ 15ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ ಬಿಡುಗಡೆಯಾಗುವುದಕ್ಕೂ ಕೇವಲ ನಾಲ್ಕು ದಿನಗಳ ಮುನ್ನ ನಡೆಯಲಿರುವ ಈ ಸುದೀರ್ಘ ಸಂದರ್ಶನ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವೇಗ ನೀಡುವ ನಿರೀಕ್ಷೆಯಿದೆ.

ರಜನಿಕಾಂತ್ ತಮ್ಮ ಸಿನಿಮಾಗಳ ಪ್ರಚಾರಕ್ಕಾಗಿ ಸುದೀರ್ಘ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಈ ಹಿಂದೆ ಶಂಕರ್ ನಿರ್ದೇಶನದ 2.0 ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅವರು ಸಂದರ್ಶನ ನೀಡಿದ್ದರು. ಇದೀಗ ಜೈಲರ್ 2ಗಾಗಿ ಮೂರು ಗಂಟೆಗಳ ವಿಶೇಷ ಕಾರ್ಯಕ್ರಮದಲ್ಲಿ ರಜನಿಕಾಂತ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ 2 ಚಿತ್ರದಲ್ಲಿ ರಜನಿಕಾಂತ್ ಜೊತೆ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್‌ಜೆ ಸೂರ್ಯ, ಸೂರಜ್ ವೆಂಜರಮೂಡು ಹಾಗೂ ರಮ್ಯಾ ಕೃಷ್ಣನ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ನಟ ವಿಜಯ್ ಸೇತುಪತಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟ್ರೇಲರ್‌ನಲ್ಲಿ ರಜನಿಕಾಂತ್ ಮಾಸ್ ಅವತಾರ, ಆ್ಯಕ್ಷನ್ ದೃಶ್ಯಗಳು ಹಾಗೂ ಹಾಸ್ಯದ ಝಲಕ್ ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿದೆ. ಮೊದಲ ಭಾಗದ ಯಶಸ್ಸಿನ ಬಳಿಕ ಜೈಲರ್ 2 ಮೇಲೆ ನಿರೀಕ್ಷೆ ಹೆಚ್ಚಿದ್ದು, ಅಕ್ಟೋಬರ್ 15ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed