Last Updated:
ವೇಗವಾಗಿ ಚಲಿಸುತ್ತಿದ್ದ ಸ್ಪೀಡ್‌ಬೋಟ್‌ನಲ್ಲಿ 32 ಭಾರತೀಯ ಪ್ರವಾಸಿಗರು ಸೇರಿದಂತೆ ಒಟ್ಟು 36 ಜನ ಪ್ರಯಾಣಿಸುತ್ತಿದ್ದರು. ಬೋಟ್ ಮುಳುಗುತ್ತಿದ್ದಂತೆ ರಕ್ಷಣಾ ಪಡೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಸದ್ಯಕ್ಕೆ 32 ಜನರ ಪೈಕಿ 18 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ವಿದೇಶ ಪ್ರವಾಸಕ್ಕೆ ತೆರಳಿದ್ದ ಭಾರತೀಯರಿಗೆ ವಿಯೆಟ್ನಾಂನಲ್ಲಿ (Vietnam) ಭೀಕರ ಜಲಗಂಡಾಂತರ ಎದುರಾಗಿದೆ. ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫೂ ಕ್ವಕ್ ದ್ವೀಪದ (Island of Phu Quoc) ಬಳಿ ಪ್ರವಾಸಿಗರಿದ್ದ ಸ್ಪೀಡ್‌ಬೋಟ್ (Speed Boat) ಮುಳುಗಡೆಯಾಗಿ ಭೀಕರ ದುರಂತ ಸಂಭವಿಸಿದೆ. ವಿಯೆಟ್ನಾಂನ ದಕ್ಷಿಣ ಕರಾವಳಿಯ ದ್ವೀಪದ ಬಳಿ ಬೆಳಗ್ಗೆ ಸುಮಾರು 10:30ರ ವೇಳೆಗೆ ಈ ಘೋರ ದುರ್ಘಟನೆ ನಡೆದಿದೆ.
ವೇಗವಾಗಿ ಚಲಿಸುತ್ತಿದ್ದ ಸ್ಪೀಡ್‌ಬೋಟ್‌ನಲ್ಲಿ 32 ಭಾರತೀಯ ಪ್ರವಾಸಿಗರು ಸೇರಿದಂತೆ ಒಟ್ಟು 36 ಜನ ಪ್ರಯಾಣಿಸುತ್ತಿದ್ದರು. ಬೋಟ್ ಮುಳುಗುತ್ತಿದ್ದಂತೆ ರಕ್ಷಣಾ ಪಡೆಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ಸದ್ಯಕ್ಕೆ 32 ಜನರ ಪೈಕಿ 18 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇನ್ನುಳಿದ ಪ್ರವಾಸಿಗರ ಪತ್ತೆಗಾಗಿ ಕಡಲಿನಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಇನ್ನು ಈ ದುರಂತದಲ್ಲಿ ಕನಿಷ್ಠ 15 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇಡೀ ದೇಶವೇ ಬೆಚ್ಚಿಬೀಳುವಂತಾಗಿದೆ.
ಬೋಟ್‌ನಲ್ಲಿದ್ದ ಪ್ರವಾಸಿಗರನ್ನು ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮೂಲದವರೆಂದು ಗುರುತಿಸಲಾಗಿದ್ದು, ತಮಿಳುನಾಡಿನ 17, ಆಂಧ್ರದ ಐವರು ಸೇರಿದಂತೆ 4 ವಿಯೆಟ್ನಾಂ ಸಿಬ್ಬಂದಿ ಬೋಟ್‌ನಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಓಷನ್ ಪರ್ಲ್ ಸಂಸ್ಥೆ ನಿರ್ವಹಿಸುತ್ತಿದ್ದ ಬೋಟ್ ನೀರಿನಲ್ಲಿ ಮಗುಚಿದೆ.
ಇನ್ನು ಭಾರತದ ರಾಯಭಾರ ಕಚೇರಿ 3 ಹೆಲ್ಪ್‌ಲೈನ್ ತೆರೆದಿದ್ದು, ಕುಟುಂಬಸ್ಥರು ಹೆಲ್ಪ್‌ಲೈನ್ ಸಂಪರ್ಕಿಸಲು ಕೋರಿದೆ. +84 36 281 7930 +84 91 552 3714 +84 33 452 0414














