ವೇದಿಕೆಯಲ್ಲಿ ಮಾತನಾಡಿದ ನಟ ತಮ್ಮ ಜೀವನದ ವೈಯಕ್ತಿಕ ನಿರ್ಧಾರ, ಆಯ್ಕೆಗಳ ಬಗ್ಗೆಯೇ ಹೆಚ್ಚು ಮಾತನಾಡಿದರು. ರವಿ ಮೋಹನ್ ತಮ್ಮ ತಪ್ಪುಗಳನ್ನು ಒಪ್ಪಿಕೊಂಡರು.
“ನನ್ನ ಜೀವನದ ಅರ್ಧದಷ್ಟು ನಾನು ಸಿನಿಮಾದಲ್ಲಿದ್ದೇನೆ. ನನ್ನ ವೈಯಕ್ತಿಕ ನಿರ್ಧಾರವು ಎಲ್ಲರಿಗೂ ನೋವುಂಟು ಮಾಡಿದೆ ಎಂಬ ಒಂದೇ ಒಂದು ಬೇಸರ ನನಗಿದೆ. ನಾನು ನಿಮ್ಮೆಲ್ಲರ ಮುಂದೆ ಮಂಡಿಯೂರಿ ಕೇಳುತ್ತೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ ಎಂದಿದ್ದಾರೆ.
ಅವರು ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಿ ಹೊಸ ಜೀವನವನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದರು. ನಟ ಜೀವನದ ಬಗ್ಗೆ ತಮ್ಮ ಆಲೋಚನೆಗಳನ್ನು ಸಹ ಹಂಚಿಕೊಂಡರು, “ಶಾಂತಿ ಮತ್ತು ಯಶಸ್ಸಿನ ನಡುವೆ, ನಾನು ಯಾವಾಗಲೂ ಶಾಂತಿಯನ್ನು ಆರಿಸಿಕೊಳ್ಳುತ್ತೇನೆ. ಖ್ಯಾತಿ ಮತ್ತು ಸಂತೋಷದ ನಡುವೆ, ನಾನು ಸಂತೋಷವನ್ನು ಆರಿಸಿಕೊಳ್ಳುತ್ತೇನೆ” ಎಂದು ಹೇಳಿದರು.
ಅವರು ಸೆಲ್ಫ್ ಲವ್ ಮತ್ತು ನಮ್ಮ ಸುತ್ತಮುತ್ತಲಿನವರನ್ನು ನೋಡಿಕೊಳ್ಳುವ ಮಹತ್ವದ ಬಗ್ಗೆ ಮಾತನಾಡಿದರು. ಅವರ ಅಭಿಮಾನಿಗಳ ಪ್ರೀತಿ ಅವರಿಗೆ ಯಾವುದೇ ಪ್ರಶಸ್ತಿಗಿಂತ ಹೆಚ್ಚು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ತಮ್ಮ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ, ತಮ್ಮ ಚೊಚ್ಚಲ ಚಿತ್ರ ಜಯಂ ಯಾವಾಗಲೂ ವಿಶೇಷವಾಗಿ ಉಳಿಯುತ್ತದೆ ಎಂದು ಹೇಳಿದರು. “ನನ್ನನ್ನು ಇಲ್ಲಿಯವರೆಗೆ ಕರೆತಂದ ಸಿನಿಮಾ ಅದು ಎಂದಿದ್ದಾರೆ.
ಸಿನಿಮಾಗಳ ಬಗ್ಗೆ ಮಾತ್ರ ಮಾತನಾಡುವ ಬದಲು, ರವಿ ಮೋಹನ್ ಯಶಸ್ಸು ಮತ್ತು ಸಂಬಂಧಗಳ ಬಗ್ಗೆ ತಮ್ಮ ವೈಯಕ್ತಿಕ ದೃಷ್ಟಿಕೋನವನ್ನು ತೆರೆದಿಟ್ಟರು. ಇದು ತಕ್ಷಣ ಎಲ್ಲರ ಗಮನವನ್ನು ಸೆಳೆಯಿತು. “ಒಬ್ಬ ವ್ಯಕ್ತಿಯು ತನ್ನ ಬಗ್ಗೆ ತೋರಿಸುವ ಪ್ರೀತಿ ಮತ್ತು ಕಾಳಜಿ ಬಹಳ ಮುಖ್ಯ ಎಂದು ನಾನು ನಂಬುತ್ತೇನೆ. ನಾವು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲು ಕಲಿತಾಗ, ನಾವು ಸ್ವಾಭಾವಿಕವಾಗಿ ನಮ್ಮ ಸುತ್ತಮುತ್ತಲಿನ ಜನರನ್ನು ನೋಡಿಕೊಳ್ಳಲು ಪ್ರಾರಂಭಿಸುತ್ತೇವೆ ಎಂದಿದ್ದಾರೆ.
ನಾನು ಸಂತೋಷವಾಗಿದ್ದರೆ, ನನ್ನ ಸುತ್ತಮುತ್ತಲಿನವರನ್ನು ಸಹ ಸಂತೋಷವಾಗಿಡಬಹುದು. ಜನರು ನನಗೆ ತೋರಿಸಿದ ಪ್ರೀತಿ ಯಾವುದೇ ಪ್ರಶಸ್ತಿಗಿಂತ ದೊಡ್ಡದು. ಅವರ ಪ್ರೀತಿಯಿಂದಾಗಿ ನಾನು ನಿಜವಾಗಿಯೂ ಧನ್ಯನಾಗಿದ್ದೇನೆ” ಎಂದು ಅವರು ಹೇಳಿದರು.













