Varanasi Movie: ವಾರಣಾಸಿ ಶೂಟಿಂಗ್ ಇನ್ನೆಷ್ಟು ಬಾಕಿ ಇದೆ? ಬಾಹುಬಲಿ ಡೈರೆಕ್ಟರ್ ಕೊಟ್ರು ಬಿಗ್ ಅಪ್ಡೇಟ್ | | ACTPnews

ರಾಜಮೌಳಿ ಕೊಟ್ರು ಶೂಟಿಂಗ್ ಡಿಟೈಲ್ಸ್!


Last Updated:

ರಾಜಮೌಳಿ ತಮ್ಮ ವಾರಣಾಸಿಯ ಶೂಟಿಂಗ್ ಅಪ್‌ಡೇಟ್ ಕೊಟ್ಟಿದ್ದಾರೆ. ಇನ್ನು 80 ದಿನದ ಶೂಟಿಂಗ್ ಬಾಕಿ ಇದೆ ಅಂತ ಹೇಳಿದ್ದಾರೆ. ಇನ್ನು ಸಾಕಷ್ಟು ವಿಷಯ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ರಾಜಮೌಳಿ ಕೊಟ್ರು ಶೂಟಿಂಗ್ ಡಿಟೈಲ್ಸ್!
ರಾಜಮೌಳಿ ಕೊಟ್ರು ಶೂಟಿಂಗ್ ಡಿಟೈಲ್ಸ್!

ಡೈರೆಕ್ಟರ್ ರಾಜಮೌಳಿ (Director Rajamouli) ದೊಡ್ಡ ಚಿತ್ರವನ್ನೆ ಮಾಡುತ್ತಿದ್ದಾರೆ. ಈ ಚಿತ್ರ 1,400 ಕೋಟಿ ಬಜೆಟ್ ಅಲ್ಲಿಯೇ ರೆಡಿ ಆಗುತ್ತಿದೆ. ಇದರ ಶೂಟಿಂಗ್ (Shooting) ಏನೆಲ್ಲ ಆಗುತ್ತಿದೆ ಅನ್ನುವ ಕುತೂಹಲಕ್ಕೆ ದೂರದ ಪ್ರಾನ್ಸ್ ನ ವೇದಿಕೆ ಮೇಲೆ ರಾಜಮೌಳಿ ಅವರು ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ. ವಾರಣಾಸಿ ಚಿತ್ರದ (Varanasi Movie) ಪ್ರಮುಖವಾದ ಆ್ಯಕ್ಷನ್ ದೃಶ್ಯಗಳೆಲ್ಲ (Shooting Scene) ಕಂಪ್ಲೀಟ್ ಆಗಿದೆ. ಇನ್ನು ಒಂದು ಚಿಕ್ಕ ಸೀನ್ ಇದೆ. ಅದನ್ನ 80 ದಿನದಲ್ಲಿ ಶೂಟಿಂಗ್ ಮಾಡುತ್ತೇವೆ. ಅದು ಮುಗಿದರೆ ಆಯಿತು. ಶೂಟಿಂಗ್ ಪೂರ್ಣ ಆಗುತ್ತದೆ ಅಂತ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಇನ್ನು 80 ದಿನ ಶೂಟ್ ಆದ್ರೆ ಆಯಿತು

ಈ ಮಾತನ್ನೆ ರಾಜಮೌಳಿ ಹೇಳಿದ್ದಾರೆ. ಅತಿ ದೊಡ್ಡ ಬಜೆಟ್‌ನ ವಾರಣಾಸಿ ಚಿತ್ರದ ಕೆಲಸ ಜೋರಾಗಿಯೇ ನಡೆಯುತ್ತಿದೆ. ಅದ್ದೂರಿ ಆಗಿಯೇ ಶುರು ಆಗಿರೋ ಈ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ.
Tollywood Director S S Rajamouli Share Mahesh Babu Varanasi Film Shooting Updates

ಅಕ್ಟೋಬರ್ ಎಂಡ್‌ಗೆ ಶೂಟಿಂಗ್ ಕಂಪ್ಲೀಟ್

(ಚಿತ್ರ ಕೃಪೆ: ಎಸ್.ಎಸ್. ರಾಜಮೌಳಿ ಇನ್‌ಸ್ಟಾಗ್ರಾಮ್)

ಚಿತ್ರದ ಪ್ರಮುಖ ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ಆಗಿದೆ. ಒಂದು ಚಿಕ್ಕ ಸೀನ್ ಇದೆ. ಇದನ್ನ 80 ದಿನಗಳಲ್ಲಿ ಕಂಪ್ಲೀಟ್ ಮಾಡುತ್ತೇವೆ. ಇಷ್ಟಾದರೆ ಆಯಿತು. ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆದಂತೆ ಅಂತಲೇ ರಾಜಮೌಳಿ ಹೇಳಿದ್ದಾರೆ.

ಫ್ರಾನ್ಸ್ ಅಲ್ಲಿ ಈ ವಿಷಯ ರಿವೀಲ್

ಪ್ರಾನ್ಸ್‌ನ ವಿಶ್ವ ಪ್ರಸಿದ್ಧ ಹೆನ್ರಿ ಲ್ಯಾಂಗ್ಲೋಯಿಸ್ ಆಡಿಟೋರಿಯಂನಲ್ಲಿ ರಾಜಮೌಳಿ ಅವರ ಬಾಹುಬಲಿ, ಈಗ, ಟ್ರಿಪಲ್ ಆರ್ ಚಿತ್ರಗಳ ಪ್ರದರ್ಶನ ಆಗಿದೆ.

ಇದೇ ಥಿಯೇಟರ್ ಅಲ್ಲಿಯೇ ರಾಜಮೌಳಿ ಅವರ ಹೆಸರಿನಲ್ಲಿ ಖಾಯಂ ಆಗಿಯೇ ಒಂದು ಸೀಟ್ ಮೀಸಲಿಡಲಾಗಿದೆ. ಈ ಮೂಲಕ ರಾಜಮೌಳಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಭಾರತದ ಮಹಾನ್ ಡೈರೆಕ್ಟರ್ ಸತ್ಯಜಿತ್ ರೇ ಆದ್ಮೇಲೆ ರಾಜಮೌಳಿ ಅವರಿಗೇನೆ ಈ ಗೌರವ ಸಂದಿದೆ.

ಈ ಸಮಯದಲ್ಲಿ ಚಿತ್ರದ ವಿಚಾರ

ರಾಜಮೌಳಿ ಅವರು ತಮ್ಮ ಚಿತ್ರಗಳ ಪ್ರದರ್ಶನದ ಬಳಿಕ ವಾರಣಾಸಿ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ನಿರೂಪಕಿ ಕೇಳಿದ ಪ್ರಶ್ನೆಗೆ ವಾರಣಾಸಿ ಚಿತ್ರದ ಮಾಹಿತಿ ಕೊಟ್ಟಿದ್ದಾರೆ.

Tollywood Director S S Rajamouli Share Mahesh Babu Varanasi Film Shooting Updates

ಜುಲೈ-7 ರಂದು ಶೂಟಿಂಗ್ ಶುರು

(ಚಿತ್ರ ಕೃಪೆ: ಎಸ್.ಎಸ್. ರಾಜಮೌಳಿ ಇನ್‌ಸ್ಟಾಗ್ರಾಮ್)

ಇಲ್ಲಿವರೆಗೂ ಏನೆಲ್ಲ ಆಗಿದೆ, ಇನ್ನು ಏನೆಲ್ಲ ಆಗಬೇಕಿದೆ ಅನ್ನುವುದನ್ನು ಹೇಳಿಕೊಂಡಿದ್ದಾರೆ. ಒಂದು ಚಿಕ್ಕ ಸೀನ್ ಅನ್ನ 80 ದಿನ ಶೂಟ್ ಮಾಡೋದಿದೆ ಅಂತಲೂ ಹೇಳಿದ್ದಾರೆ.

ಅಕ್ಟೋಬರ್ ಎಂಡ್‌ಗೆ ಶೂಟಿಂಗ್ ಕಂಪ್ಲೀಟ್

ವಾರಣಾಸಿ ಚಿತ್ರದ ಕೆಲಸ ನಡೀತಾನೇ ಇದೆ. ಸೆಪ್ಟೆಂಬರ್ ಇಲ್ಲವೆ ಅಕ್ಟೋಬರ್ ಅಲ್ಲಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗುತ್ತಿದೆ. ಆದರೆ, ಈ ಚಿತ್ರ ಒಂದು ದೃಶ್ಯಕ್ಕೆ 3,500 ಜನ ಜೂನಿಯರ್ ಕಲಾವಿದರನ್ನು ಬಳಕೆ ಮಾಡಲಾಗುತ್ತಿದೆ.

ಜುಲೈ-7 ರಂದು ಶೂಟಿಂಗ್ ಶುರು

ಈ ಒಂದು ದೃಶ್ಯದ ಶೂಟಿಂಗ್ ಅನ್ನ ಹೈದ್ರಾಬಾದ್ ಅಲ್ಲಿ ಪ್ಲಾನ್ ಮಾಡಲಾಗಿದೆ. ಜುಲೈ-7 ರಿಂದ ಇದು ಶುರು ಆಗುತ್ತದೆ ಅನ್ನುವ ಮಾಹಿತಿನೂ ಸಿಗುತ್ತದೆ.

ಇನ್ನುಳಿದಂತೆ ವಾರಣಾಸಿ ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿದ್ದಾರೆ. ಬಾಹುಬಲಿ ಅಂತಹ ಚಿತ್ರ ಕೊಟ್ಟ ಜಕ್ಕಣ್ಣ ಈ ಸಲ ವಾರಣಾಸಿ ಚಿತ್ರ ಕೊಡ್ತಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports