Last Updated:
Mukesh Khanna-Sharmila Tagore: ವಂದೇ ಮಾತರಂ ವಿವಾದದ ನಡುವೆ ಹಿರಿಯ ನಟಿ ಶರ್ಮಿಳಾ ಟಾಗೋರ್ ಅವರು ಹೇಳಿದ ಮಾತುಗಳು ಮತ್ತು ಅದಕ್ಕೆ ನಟ, ಶಕ್ತಿಮಾನ್ ಖ್ಯಾತಿಯ ಮುಖೇಶ್ ಖನ್ನಾ ನೀಡಿದ ಪ್ರತಿಕ್ರಿಯೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ಮುಂಬೈ: ವಂದೇ ಮಾತರಂ ವಿವಾದದ (Vande Mataram controversy) ನಡುವೆ ಹಿರಿಯ ನಟಿ ಶರ್ಮಿಳಾ ಟಾಗೋರ್ (Sharmila Tagore) ಅವರು ಹೇಳಿದ ಮಾತುಗಳು ಮತ್ತು ಅದಕ್ಕೆ ನಟ, ಶಕ್ತಿಮಾನ್ (Shaktimaan) ಖ್ಯಾತಿಯ ಮುಖೇಶ್ ಖನ್ನಾ (Mukesh Khanna) ನೀಡಿದ ಪ್ರತಿಕ್ರಿಯೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. “ಎಲ್ಲಾ ಧರ್ಮದವರೂ ಇರೋದ್ರಿಂದ ವಂದೇ ಮಾತರಂನ ಮೊದಲ 2 ಪ್ಯಾರಾ ಓಕೆ” ಅಂತ ಶರ್ಮಿಳಾ ಟಾಗೋರ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖೇಶ್ ಖನ್ನಾ, “ಮದುವೆಯ ನಂತರವೇ ಇಸ್ಲಾಂ (Islam) ಧರ್ಮವೂ ಇದೆ ಎಂದು ನಿಮಗೆ ಅರಿವಾಯಿತೇ?” ಅಂತ ತಿರುಗೇಟು ನೀಡಿದ್ದಾರೆ.














