ಹುಬ್ಬಳ್ಳಿಯ ನೈಋತ್ಯ ವಲಯದ ರೈಲ್ವೆ ಬಳಕೆದಾರರ ಸಮಲೋಚನಾ ಸಮಿತಿಯ ಸದಸ್ಯ ಮಹೇಂದ್ರ ಸಿಂಘಿ ಅವರು, ನೈಋತ್ಯ ವಲಯದ ಮ್ಯಾನೇಜರ್ ಮೂಲಕ ರೈಲು ಕೋರಿ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಈ ಮಾರ್ಗವೂ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಈ ಆರು ಜಿಲ್ಲೆಗಳು ಆರ್ಥಿಕವಾಗಿ ಮಹತ್ವದಾಗಿವೆ. ಮಹಾರಾಷ್ಟ್ರದ ಕಡೆಯಿಂದ ಸಂಗ್ಲಿ, ಸತಾರಾ, ಪುಣೆ, ಮತ್ತು ಥಾಣೆಯು ಇದರ ಪ್ರಯೋಜನ ಪಡೆಯಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ಹಾಗೂ ಪುಣೆ ಮತ್ತು ಮುಂಬೈ ನಡುವಿನ ಭಾರೀ ಸಂಚಾರದ ನಿಟ್ಟಿನಲ್ಲಿ ಈ ಯೋಜನೆ ಅಗತ್ಯ. ಇಷ್ಟಲ್ಲದೇ ಈ ಯೋಜನೆಯು ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಇಷ್ಟಲ್ಲದೇ ದಾವಣಗೆರೆಯ ಸಂಸದೆಯಾದ ಪ್ರಭಾ ಮಲ್ಲಿಕಾರ್ಜುನ್ ಕೂಡ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ವಂದೇ ಭಾರತ್ ಸ್ಲೀಪರ್ ಕೋರಿ ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದಾರೆ.













