Vande Bharat: ಬೆಂಗಳೂರು-ಮುಂಬೈ-ದೆಹಲಿ ರೈಲ್ವೆ ಸಂಚಾರದಲ್ಲಿ ಕ್ರಾಂತಿ, 9 ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳ ವಿಶೇಷತೆ ಏನು ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ವಂದೇ ಭಾರತ್ ಸ್ಲೀಪರ್ ರೈಲುಗಳು


Last Updated:

ಭಾರತೀಯ ರೈಲ್ವೆ 9 ಮಾರ್ಗಗಳಲ್ಲಿ ವೇಗದ ವಂದೇ ಭಾರತ್ ಸ್ಲೀಪರ್ ರೈಲು ತರಲು ಸಜ್ಜು, ಬೆಂಗಳೂರು ಮುಂಬೈ ದೆಹಲಿ ಸಿಕಂದರಾಬಾದ್ ಸೇರಿ, ವಿಮಾನಕ್ಕೆ ಪೈಪೋಟಿ, ವೇಳಾಪಟ್ಟಿ ದರ ನಿರ್ಧಾರ ಬಾಕಿ.

ವಂದೇ ಭಾರತ್ ಸ್ಲೀಪರ್ ರೈಲುಗಳು
ವಂದೇ ಭಾರತ್ ಸ್ಲೀಪರ್ ರೈಲುಗಳು

ಬೆಂಗಳೂರು: ರೈಲ್ವೆ (Railway) ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ದೂರದ ಪ್ರಯಾಣದ ದಣಿವು ಇರುವುದಿಲ್ಲ, ಬದಲಿಗೆ ಐಷಾರಾಮಿ ಹೋಟೆಲ್‍ನಲ್ಲಿ ಮಲಗಿದ ಅನುಭವ ನಿಮಗೆ ಸಿಗಲಿದೆ. ಹೌದು, ಹೌರಾ-ಕಾಮಾಖ್ಯ ಮಾರ್ಗದಲ್ಲಿ ವಂದೇ ಭಾರತ್ (Vande Bharat) ಸ್ಲೀಪರ್ ರೈಲುಗಳ (Sleeper Trains) ಭರ್ಜರಿ ಯಶಸ್ಸಿನ ನಂತರ, ಇದೀಗ ಭಾರತೀಯ ರೈಲ್ವೆ ಇಡೀ ದೇಶದ ರೈಲ್ವೆ ನಕ್ಷೆಯನ್ನೇ ಬದಲಿಸಲು ಸಜ್ಜಾಗಿದೆ.

ಯಾವೆಲ್ಲಾ ಮಾರ್ಗಗಳಲ್ಲಿ ಈ ರೈಲುಗಳು ಓಡಲಿವೆ?

ಸದ್ಯದ ವರದಿಗಳ ಪ್ರಕಾರ, ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ನವದೆಹಲಿ ಮತ್ತು ಸಿಕಂದರಾಬಾದ್ ಸೇರಿದಂತೆ ದೇಶದಾದ್ಯಂತ ಒಟ್ಟು 9 ಪ್ರಮುಖ ಮಾರ್ಗಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ನಿಯೋಜಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಇದು ಕೇವಲ ರೈಲು ಸೇವೆಯಲ್ಲ, ಭಾರತದ ಅತ್ಯಂತ ವೇಗದ ಮತ್ತು ಆರಾಮದಾಯಕ ಪ್ರಯಾಣದ ಕ್ರಾಂತಿ ಎಂದು ನ್ಯೂಸ್ 18 ಇಂಗ್ಲಿಷ್ ವೆಬ್‍ಸೈಟ್ ವರದಿ ಮಾಡಿದೆ.
ಈ ರೈಲುಗಳ ವಿಶೇಷತೆ ಏನು?

ತಾಸಿಗೆ 160 ಕಿ.ಮೀ ವೇಗದಲ್ಲಿ ಸಾಗುವ ಈ ರೈಲುಗಳು ನಿಮ್ಮ ಪ್ರಯಾಣದ ಸಮಯವನ್ನು ಅರ್ಧಕ್ಕೆ ಇಳಿಸುತ್ತವೆ.ವಿಮಾನದ ಮಾದರಿಯ ಒಳಾಂಗಣ, ಆರಾಮದಾಯಕ ಬೆಡ್‍ಗಳು, ಸ್ಮಾರ್ಟ್ ಲೈಟಿಂಗ್ ಮತ್ತು ಹೈ-ಸ್ಪೀಡ್ ವೈ-ಫೈ ಸೌಲಭ್ಯ.

ಅತ್ಯಾಧುನಿಕ ‘ಕವಾಚ್’ ತಂತ್ರಜ್ಞಾನ ಮತ್ತು ಸಿಸಿಟಿವಿ ಕಣ್ಗಾವಲು, ಇದರಿಂದ ನಿಮ್ಮ ರಾತ್ರಿಯ ಪ್ರಯಾಣ ಸಂಪೂರ್ಣ ಸುರಕ್ಷಿತ.

ಹಗಲಿನಲ್ಲಿ ಕೆಲಸ ಮಾಡಿ, ರಾತ್ರಿ ಈ ರೈಲುಗಳಲ್ಲಿ ನಿದ್ದೆ ಮಾಡುತ್ತಾ ಬೆಳಿಗ್ಗೆ ನಿಮ್ಮ ಗಮ್ಯಸ್ಥಾನ ತಲುಪಿ.

ಪ್ರಯಾಣಿಕರ ಪಾಲಿಗೆ ವರದಾನ

ಮುಂಬೈ-ಬೆಂಗಳೂರು ಅಥವಾ ದೆಹಲಿ-ಸಿಕಂದರಾಬಾದ್‍ನಂತಹ ದೀರ್ಘ ಪ್ರಯಾಣದ ಮಾರ್ಗಗಳಲ್ಲಿ ಈ ರೈಲುಗಳ ಆಗಮನದಿಂದಾಗಿ ವಿಮಾನದ ಟಿಕೆಟ್ ದರಗಳಿಗೂ ಪೈಪೋಟಿ ನೀಡುವ ಸಾಧ್ಯತೆಯಿದೆ. ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಈ ರೈಲುಗಳು ವರದಾನವಾಗಲಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports