Dhanush Movie: ಧನುಷ್ ಚಿತ್ರಕ್ಕೂ ಓಂ ಟೈಟಲ್! ವಿಡಿಯೋ ವೈರಲ್ | | ACTPnews

ಧನುಷ್ ಚಿತ್ರಕ್ಕೂ ಓಂ ಟೈಟಲ್; ವಿಡಿಯೋ ವೈರಲ್; ಆದರೆ ಇದು ಬ್ಯಾರೆ ಕಥೆ!


Last Updated:

ಕನ್ನಡದಲ್ಲಿ 31 ವರ್ಷದ ಹಿಂದೆ ಓಂ ಚಿತ್ರ ಬಂದಿದೆ. ಉಪ್ಪಿ ಮತ್ತು ಶಿವಣ್ಣ ಅವರ ಈ ಚಿತ್ರ ಕಲ್ಟ್ ಚಿತ್ರವೇ ಆಗಿದೆ. ಆದರೆ, ಕನ್ನಡದಲ್ಲಿ ಓಂ ಮಾಡುವ ಸಾಹಸ ಯಾರೂ ಮಾಡಲೇ ಇಲ್ಲ. ಇದರ ನಡುವೆ ಇದೀಗ ತಮಿಳು ನಟ ಧನುಷ್ ಅಭಿನಯದ 55 ನೇ ಚಿತ್ರಕ್ಕೆ ಓಂ ಅನ್ನುವ ಹೆಸರು ಇಟ್ಟಿದ್ದಾರೆ. ಇದರ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.

 ಧನುಷ್ ಚಿತ್ರಕ್ಕೂ ಓಂ ಟೈಟಲ್; ವಿಡಿಯೋ ವೈರಲ್; ಆದರೆ ಇದು ಬ್ಯಾರೆ ಕಥೆ!
ಧನುಷ್ ಚಿತ್ರಕ್ಕೂ ಓಂ ಟೈಟಲ್; ವಿಡಿಯೋ ವೈರಲ್; ಆದರೆ ಇದು ಬ್ಯಾರೆ ಕಥೆ!

ಕನ್ನಡದಲ್ಲಿ ಶಿವರಾಜ್ ಕುಮಾರ್ (Shiva Rajkumar) ಓಂ ಚಿತ್ರ (OM Movie) ಬಂದಿದೆ. ಇದು ಕನ್ನಡದ ಕಲ್ಟ್ ಚಿತ್ರವೂ ಹೌದು.1995 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಬಂದು ಇದೀಗ 31 ವರ್ಷ ಆಗಿದೆ. ಉಪೇಂದ್ರ ಅವರ ಈ ಚಿತ್ರದಿಂದ ಸ್ಪೂರ್ತಿ ಪಡೆದು ಅದೆಷ್ಟೋ ರೌಡಿಸಂ ಚಿತ್ರಗಳು ಕನ್ನಡದಲ್ಲಿಯೇ ಬಂದಿವೆ. ಆದರೆ, ತಮಿಳಿನಲ್ಲಿ ಒಂದು ಓಂ ಚಿತ್ರ ಬರ್ತಿದೆ. ಕನ್ನಡದ ಓಂ ಚಿತ್ರಕ್ಕೂ ತಮಿಳಿನ ಓಂ ಸಿನಿಮಾಕ್ಕೂ (Tamil OM Movie) ಎಲ್ಲೂ ಸಂಬಂಧವೇ ಇಲ್ಲ. ಆದರೆ, ತಮಿಳು ಡೈರೆಕ್ಟರ್ ರಾಜ್‌ಕುಮಾರ್ ಪೆರಿಯಸಾಮಿ ಅದ್ಯಾಕೋ ಈ ಚಿತ್ರಕ್ಕೆ ಓಂ ಅಂತ ಇಟ್ಟರೋ ಏನೋ? ಆದರೆ, ಈ ಚಿತ್ರದ ಟೈಟಲ್ ಗ್ಲಿಂಪ್ಸ್ (Title Glimps) ಕುತೂಹಲ ಮೂಡಿಸುತ್ತಿದೆ. ಹೋರಾಟದ ಕತೆಯೊಂದನ್ನ ಇದು ಹೇಳುತ್ತಿದೆ. ಇದರ ಸುತ್ತ ಈಗಿರೋ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.

ಓಂ ಸಿನಿಮಾ

ತಮಿಳು ಓಂ ಚಿತ್ರದ ಟೀಸರ್ ಅಲ್ಲಿ ಒಂದು ವೈಬ್ರೇಷನ್ ಇದೆ. ದಟ್ಟ ಕಾಡಿದೆ, ಇದರ ಮಧ್ಯೆ ಹಳ್ಳಿಯ ಜನರ ನೋವು ಕೇಳುತ್ತಿದೆ. ಸುತ್ತಲು ಮಿಲಿಟರಿ ಡ್ರೆಸ್‌ನಲ್ಲಿ ಶಸ್ತ್ರ ಸಜ್ಜಿತ ಪಡೆ ಇದೆ.

Kollywood Actor Dhanush OM Chapter 1 Udhiram the Blood Wood Glimps Release

ಓಂ ಸಿನಿಮಾ

(ಚಿತ್ರ ಕೃಪೆ: ಧನುಷ್ ಇನ್‌ಸ್ಟಾಗ್ರಾಮ್)

ಮಂಡಿಯೂರಿ ಕುಳಿತ ಹಳ್ಳಿ ಜನರ ಮೇಲೆ ಗುಂಡು ಹಾರಿಸಬೇಕು, ಅಷ್ಟರಲ್ಲಿಯೇ ಕೊಡಲಿ ಒಂದು ಹಾರಿ ಬರುತ್ತದೆ. ಅಲ್ಲಿಯೇ ಇದ್ದ ಮರದ ಬುಡಕ್ಕೆ ಕಚ್ಚಿಕೊಳ್ಳುತ್ತದೆ. ಇದನ್ನ ನೋಡಿದ ಆ ಹಳ್ಳಿಯ ಜನರ ಮುಖದಲ್ಲಿ ಸಣ್ಣದೊಂದು ಖಷಿ ಕಾಣಿಸುತ್ತದೆ.

ಓಡಿ ಬರ್ತಾರೆ ಧನುಷ್

ಓಂ ಚಿತ್ರದ ಈ ಗ್ಲಿಂಪ್ಸ್ ಅಲ್ಲಿ ಧನುಷ್ ಪರಿಚಯ ಈ ರೀತಿ ಆಗುತ್ತದೆ. ಸುರಿಯವ ಮಳೆ ಹನಿಯನ್ನು ಇಲ್ಲಿ ಅಷ್ಟೆ ಚೆನ್ನಾಗಿ ಕ್ಯಾಪ್ಚರ್ ಮಾಡಿದ್ದಾರೆ. ಮಳೆ ಹನಿನೂ ಇಲ್ಲಿ ನಾಯಕನ ಖದರ್ ಅನ್ನ ಇನ್ನಷ್ಟು ಹೆಚ್ಚಿಸುತ್ತದೆ.
ಇದು ಧನುಷ್ 55ನೇ ಚಿತ್ರ

ಧನುಷ್ ಚಿತ್ರ ಜೀವನದ 55 ನೇ ಚಿತ್ರ ಇದಾಗಿದೆ. ಅದಕ್ಕೇನೆ ತಾತ್ಕಾಲಿಕವಾಗಿ ಇದನ್ನ D-55 ಅಂತ ಕರೆಯುತ್ತಿದ್ದರು. ಈಗ ಈ ಚಿತ್ರಕ್ಕೆ ಓಂ ಅನ್ನುವ ಟೈಟಲ್ ಇಟ್ಟಿದ್ದಾರೆ.

ರಾಜ್‌ಕುಮಾರ್ ಪೆರಿಯಸಾಮಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಾಯಿ ಪಲ್ಲವಿ, ಶ್ರೀಲೀಲಾ ಅಭಿನಯಿಸುತ್ತಿದ್ದಾರೆ.

Kollywood Actor Dhanush OM Chapter 1 Udhiram the Blood Wood Glimps Release

ಇದು ಧನುಷ್ 55 ನೇ ಚಿತ್ರ

(ಚಿತ್ರ ಕೃಪೆ: ಧನುಷ್ ಇನ್‌ಸ್ಟಾಗ್ರಾಮ್)

ಮಾಲಿವುಡ್ ಸ್ಟಾರ್

ಈ ಚಿತ್ರದಲ್ಲಿ ಇನ್ನೂ ಒಂದು ಹೈಲೈಟ್ ಇದೆ. ಅದು ಮಾಲಿವುಡ್ ಸ್ಟಾರ್ ಅಂತ ಹೇಳಬಹುದು. ಮಮ್ಮುಟ್ಟಿ ಈ ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ.

ಓಂ-2 ಚಿತ್ರವೂ ಬರುತ್ತಾ

ಸದ್ಯದ ಟೈಟಲ್ ನೋಡಿದರೆ ಹಾಗೆ ಅನಿಸುತ್ತಿದೆ. ಓಂ ಆದ್ಮೇಲೆ ಓಂ-2 ಚಿತ್ರವೂ ಬರುತ್ತದೆ. ಆದರೆ, ಚಾಪ್ಟರ್ ಒನ್ ಚಿತ್ರದ ರಿಲೀಸ್ ಡೇಟ್ ಈಗಾಗಲೇ ಬಹಿರಂಗೊಂಡಿದೆ.

ಈ ವರ್ಷ ಅಕ್ಟೋಬರ್-16,2026 ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ವಿಶ್ವದಾದ್ಯಂತ ಈ ಚಿತ್ರ ತೆರೆ ಕಾಣುತ್ತಿದೆ. ಇನ್ನುಳಿದಂತೆ ಈ ಸಿನಿಮಾದ ವಿಡಿಯೋ ತುಣುಕು ಈಗ ಎಲ್ಲರ ಗಮನ ಸೆಳೆಯುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *