Last Updated:
ಸ್ಯಾಂಡಲ್‌ವುಡ್‌ನ ನಟಭಯಂಕರ ವಜ್ರಮುನಿ ಅವರು ಸಾಕಷ್ಟು ಸಿನಿಮಾಗಳನ್ನ ಮಾಡಿದ್ದಾರೆ. ಖಳನಾಯಕ ನಟನ ಪಾತ್ರವನ್ನೇ ಹೆಚ್ಚು ಮಾಡಿದ್ದಾರೆ. ಅಂದ್ಹಾಗೆ ಇವರು ಆಗ ಒಂದು ಚಿತ್ರಕ್ಕೆ ಅದೆಷ್ಟು ಸಂಭಾವನೆ ಪಡೆಯುತ್ತಿದ್ದರು ಅನ್ನುವ ಪ್ರಶ್ನೆ ಬರುತ್ತದೆ. ವಜ್ರಮುನಿ ಅವರ ಹಿರಿಯ ಮಗ ವಿಶ್ವನಾಥ್ ಈ ಬಗ್ಗೆ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಕನ್ನಡದ ಖಳನಾಯಕ ನಟ ವಜ್ರಮುನಿ (Vajramuni) ಅವರು ತುಂಬಾನೆ ಸ್ಪೆಷಲ್ ಆಗಿದ್ದರು. ಇವರ ಅಮೋಘ ಅಭಿನಯಕ್ಕೆ ಹೆದರುವ ಅದೆಷ್ಟೊ ಪ್ರೇಕ್ಷಕರೂ ಇದ್ದರು. ಇವರನ್ನ ಆರಾಧಿಸೋ ಅಭಿಮಾನಿಗಳು (Fans) ಇದ್ದರು. ಖಳನಾಯಕ (Villain) ಅಂತ ತೆರೆ ಮೇಲೆ ಇವರನ್ನ ಹೇಟ್ ಮಾಡಿದರೂ, ವ್ಯಕ್ತಿ ಆಗಿ ಇವರು ವಿಶೇಷವಾಗಿಯೇ ಇದ್ದರು. ವಜ್ರಮುನಿ ಅವರನ್ನ ಹತ್ತಿರದಿಂದ ಬಲ್ಲವರು ಇವರು ತುಂಬಾನೆ ಒಳ್ಳೆಯವರು ಅಂತಲೆ ಹೇಳ್ತಾ ಇದ್ದರು. ಇವರ ಮಕ್ಕಳು ಈಗ ತಮ್ಮ ತಂದೆ ಬಗ್ಗೆ ಮಾಧ್ಯಮಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ವಜ್ರಮುನಿ (Vajramuni) ಅವರ ಹಿರಯ ಪುತ್ರ ವಿಶ್ವನಾಥ್ ಅವರು ಸಾಕಷ್ಟು ವಿಷಯ ಹೇಳಿಕೊಂಡಿದ್ದಾರೆ. ಅದರಲ್ಲಿ ವಜ್ರಮುನಿ ಅವರ ಸಂಭಾವನೆ ವಿಚಾರವೂ ಇದೆ. ಅದರ ವಿವರ ಇಲ್ಲಿದೆ ಓದಿ.
ಸಂಭಾವನೆ ಎಷ್ಟು ಪಡೀತಿದ್ದರು
(ಚಿತ್ರ ಕೃಪೆ: ವಜ್ರಮುನಿ FB ಪೇಜ್)
ಈ ಒಂದು ಕುತೂಹಲ ಸಹಜವಾಗಿಯೇ ಮೂಡುತ್ತದೆ. ಆದರೆ, ಮಕ್ಕಳು ಎಂದು ತಂದೆಯನ್ನ ಕೇಳಿದವರೇ ಅಲ್ಲ. ನಿಮಗೆ ಸಂಭಾವನೆ ಎಷ್ಟು ಬರುತ್ತದೆ ಅಂತ ವಿಚಾರವನ್ನು ಮಾಡಿದವರಲ್ಲ. ಆದರೆ, ಮನೆಯಲ್ಲಿ ದೊಡ್ಡವರು ಮಾತನಾಡೋದನ್ನೆ ಕೇಳಿಸಿಕೊಂಡಿದ್ದ ಹಿರಿಯ ಪುತ್ರ ವಿಶ್ವನಾಥ್ ಅದನ್ನ ಈಗ ನೆನಪಿಸಿಕೊಂಡಿದ್ದಾರೆ.
ಆ ಟೈಮ್ ಅಲ್ಲಿ ವಜ್ರಮುನಿ ಅವರು 40 ರಿಂದ 50 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ, ಇಡೀ ದುಡ್ಡು ಒಟ್ಟಿಗೆ ಬರ್ತಾನೇ ಇರಲಿಲ್ಲ. ಕೆಲವು ನಿರ್ಮಾಪಕರು ಅರ್ಧ ಡುದ್ದೇ ಕೊಡ್ತಾ ಇದ್ದರು.
ಕೆಲವೊಮ್ಮೆ ಉಳಿದು ದುಡ್ಡು ಬರ್ತಾನೇ ಇರಲಿಲ್ಲ. ಆ ರೀತಿಯ ಸ್ಥಿತಿ ಇತ್ತು. ಹಾಗಾಗಿಯೇ ವಜ್ರಮುನಿ ಅವರು ಪ್ರೊಡಕ್ಷನ್ ಕಾರ್ ಮೇಲೆ ಡಿಪೆಂಡ್ ಆಗಿರಲಿಲ್ಲ. ಸದಾ ತಮ್ಮ ಕಾರ್ ಅನ್ನ ಶೂಟಿಂಗ್ ಸ್ಪಾಟ್‌ಗೆ ತೆಗೆದುಕೊಂಡು ಹೋಗ್ತಾ ಇದ್ದರು. ತಾವೇ ಡಿಸೈಲ್ ಹಾಕಿಸಿಕೊಂಡು ಹೋಗ್ತಾ ಇದ್ದರು.
ಒಂದೊಮ್ಮೆ ಚಿತ್ರದ ಶೂಟಿಂಗ್ ಲೋಕೇಷನ್ ದೂರ ಇದ್ರೆ ಆಯಿತು. ಆಗ ಹತ್ತಿರದಲ್ಲಿಯೇ ರೂಮ್ ಮಾಡುತ್ತಿದ್ದರು. ರೂಮ್ ಮಾಡಿದ್ಮೇಲೂ ಅಲ್ಲಿಗೆ ಹೋಗಲು ತಮ್ಮ ಕಾರ್ ತೆಗೆದುಕೊಂಡು ಹೋಗುತ್ತಿದ್ದರು.
40 ರಿಂದ 50 ಸಾವಿರ ರೂಪಾಯಿ
(ಚಿತ್ರ ಕೃಪೆ: ವಜ್ರಮುನಿ FB ಪೇಜ್)
ವಜ್ರಮುನಿ ಅವರು ಹೀಗೆ ಇದ್ದರು. ಆದರೆ, ತಮ್ಮ ಮಕ್ಕಳನ್ನ ಸಿನಿಮಾರಂಗಕ್ಕೆ ತರಲಿಲ್ಲ. ಚಿತ್ರರಂಗದ ಕಷ್ಟ ನನಗೆ ಇರಲಿ ಅಂತ ಮಕ್ಕಳಿಗೆ ಈಕಡೆಗೆ ಬರಲು ಬಿಡಲಿಲ್ಲ.
ವಜ್ರಮುನಿ ಅವರ ಮಕ್ಕಳು ಸಿನಿಮಾರಂಗದಿಂದ ದೂರವೇ ಇದ್ದಾರೆ. ವಿಶ್ವನಾಥ್ ವಜ್ರಮುನಿ, ಜಗದೀಶ್ ವಜ್ರಮುನಿ, ಸಂದೀಪ್ ವಜ್ರಮುನಿ ಅಂತಲೇ ಇವರ ಹೆಸರು. ಇವರು ಯಾರೂ ಸಿನಿಮಾರಂಗಕ್ಕೆ ಬರಲಿಲ್ಲ.
ಈ ಮೂಲಕ ವಜ್ರಮುನಿ ಅವರಿಗೆ ಗೌರವ ಸಲ್ಲಿಸುವ ಕೆಲಸವು ಆಗಿದೆ. ಇನ್ನುಳಿದಂತೆ ತಂದೆಯ ಸಂಭಾವನೆ ಬಗ್ಗೆ ಮೇಲೆ ಹೇಳಿದ ವಿಷಯವನ್ನ ವಿಶ್ವನಾಥ್ ವಜ್ರಮುನಿ ಅವರು ಸುದ್ದಿಮನೆ ಯುಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 12, 2026 10:45 PM IST













