Last Updated:
ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಆದರೆ ಅವರು ವಿಶ್ವ ದಾಖಲೆ ಮುರಿಯುವ ಅವಕಾಶವನ್ನು ಕಳೆದುಕೊಂಡರು.
ಭಾರತ(India)ದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೆ ಮೈದಾನದಲ್ಲಿ ಸದ್ದು ಮಾಡಿದರು. ಜಿಂಬಾಬ್ವೆ (Zimbabwe) ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕ್ರೀಸ್ಗೆ ಬಂದ ಕೂಡಲೇ ಬೌಲರ್ಗಳಿಗೆ ವೈಭವ್ ಕಾಡಿದರು. ಕೇವಲ 49 ಬಾಲ್ಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರು. ವೈಭವ್ ಟಿ20 ಪಂದ್ಯದಲ್ಲಿ ತಮ್ಮ ವಿಶೇಷ ಶೈಲಿಯಲ್ಲಿ ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್(Cricket)ನಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೆ ತೋರಿಸಿದರು.
ಜಿಂಬಾಬ್ವೆ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ ತಮ್ಮ ಮೊದಲ ಅರ್ಧಶತಕ ಬಾರಿಸಿ ಔಟಾದರು. ಹೀಗಾಗಿ ಎರಡನೇ ಪಂದ್ಯದಲ್ಲಿ ಅವರು ಬಿಗ್ ಇನ್ನಿಂಗ್ಸ್ ಆಡಬಹುದು ಎಂದು ಎಲ್ಲರಿಗೂ ಅನಿಸಿತು. ಅದರಂತೆ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್ ಮಾಡಿದರು.
ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ 49 ಬಾಲ್ಗಳಲ್ಲಿ 81 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 165 ಇತ್ತು. ಸಾಮಾನ್ಯವಾಗಿ 200ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ಆಡುವ ಅವರು, ಈ ಬಾರಿ ಪಿಚ್ ನೋಡಿ ನಿಧಾನವಾಗಿ ಮತ್ತು ಶಾಂತವಾಗಿ ಆಡಿದರು. ಇದನ್ನು ನೋಡಿ ಅಭಿಮಾನಿಗಳು ವೈಭವ್ ಬ್ಯಾಟ್ನಿಂದ ಚೊಚ್ಚಲ ಶತಕ ಗ್ಯಾರೆಂಟಿ ಅಂದುಕೊಂಡಿದ್ದರು. ಆದರೆ, 15 ನೇ ಓವರ್ನಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿತು.
ವೆಸ್ಲಿ ಮಧ್ವರೆ ಎಸೆದ 15ನೇ ಓವರಿನ ಕೊನೆಯ ಎಸೆತದಲ್ಲಿ ವೈಭವ್ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸಿದರು. ಲಾಂಗ್ ಆಫ್ನಲ್ಲಿ ನಿಂತಿದ್ದ ಬ್ರಾಡ್ ಇವಾನ್ಸ್ ಮುಂದಕ್ಕೆ ಡೈವ್ ಮಾಡಿ ಅದ್ಭುತ ಕ್ಯಾಚ್ ಹಿಡಿದರು. ವೈಭವ್ ಹೊರಹೋಗಲು ಸಿದ್ಧರಾಗಿರಲಿಲ್ಲ, ರಿವ್ಯೂಗಾಗಿ ಕಾಯುತ್ತಿದ್ದರು. ಆದರೆ ಟಿವಿ ಅಂಪೈರ್ ಅದು ಸರಿಯಾದ ಕ್ಯಾಚ್ ಎಂದು ದೃಢಪಡಿಸಿದಾಗ ಅವರು ಬಹಳ ನಿರಾಶೆಯಿಂದ ಹಿಂತಿರುಗಿದರು.
ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಶತಕ ಹೊಡೆದಿದ್ದರೆ, ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಹೊಡೆದ ಅತಿ ಚಿಕ್ಕ ವಯಸ್ಸಿನ ಆಟಗಾರನೆಂಬ ದಾಖಲೆ ಅವರಿಗೆ ಸಿಗುತ್ತಿತ್ತು. ಅವರ ವಯಸ್ಸು ಕೇವಲ 15 ವರ್ಷ 121 ದಿನಗಳು. ಆದರೆ ಅವರು ಶತಕ ಹೊಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸೂರ್ಯವಂಶಿ ವಿಶ್ವ ದಾಖಲೆಯನ್ನು ಮಿಸ್ ಮಾಡಿಕೊಂಡರು.
ವೈಭವ್ ಸೂರ್ಯವಂಶಿ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅತಿ ಚಿಕ್ಕ ವಯಸ್ಸಿನ ಆಟಗಾರ. ಜುಲೈ 23ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ 15 ವರ್ಷ 118 ದಿನಗಳ ವಯಸ್ಸಿನಲ್ಲಿ ಅವರು ಈ ದಾಖಲೆ ಮಾಡಿದರು. ಆ ಪಂದ್ಯದಲ್ಲಿ ಎಡಗೈ ಆರಂಭಿಕ ಬ್ಯಾಟರ್ ಕೇವಲ 18 ಎಸೆತಗಳಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಅರ್ಧಶತಕವನ್ನು ಹೊಡೆದರು. ಈ ಇನ್ನಿಂಗ್ಸ್ನಿಂದ ಅವರು ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಫಾರ್ಮ್ಯಾಟ್ಗಳಲ್ಲಿ ಅರ್ಧಶತಕ ಹೊಡೆದ ಅತಿ ಕಿರಿಯ ಆಟಗಾರರೂ ಆದರು.














