Last Updated:
ಸೂರ್ಯವಂಶಿ ಅವರ ಯಶಸ್ಸಿಗೆ ಅವರ ಕುಟುಂಬದ ಬೆಂಬಲವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವೈಭವ್ ಸೂರ್ಯವಂಶಿ ಬೆನ್ನುಲುಬಾಗಿ ನಿಂತಿರುವ ತಂದೆ ಯಾರು? ವೈಭವ್ ಯಶಸ್ಸಿಗೆ ಅವರು ಮಾಡಿದ ತ್ಯಾಗಗಳೇನು ಅನ್ನೋದ್ರ ಮಾಹಿತಿ ಇಲ್ಲಿದೆ.
15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) 2026ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಅದ್ಭುತ ಪ್ರದರ್ಶನ ನೀಡಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ತಮ್ಮ ಅಬ್ಬರ ಬ್ಯಾಟಿಂಗ್ನಿಂದಲೇ ‘ವಂಡರ್ ಕಿಡ್‘ ಎಂದು ಫೇಮಸ್ ಆಗಿರುವ ವೈಭವ್ ಸೂರ್ಯವಂಶಿ ಟೀಂ ಇಂಡಿಯಾದಲ್ಲೂ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಯಶಸ್ಸಿಗೆ ಅವರ ಕುಟುಂಬದ ಬೆಂಬಲವೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವೈಭವ್ ಸೂರ್ಯವಂಶಿ ಬೆನ್ನುಲುಬಾಗಿರುವ ತಂದೆ ಯಾರು? ವೈಭವ್ ಯಶಸ್ಸಿಗೆ ಅವರು ಮಾಡಿದ ತ್ಯಾಗಗಳೇನು ಅನ್ನೋದ್ರ ಮಾಹಿತಿ ಇಲ್ಲಿದೆ.
ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟಿಗನಾಗಲು ಸಾಧ್ಯವಾಗದ ಹಿನ್ನೆಲೆ ಸಂಜೀವ್ ಸೂರ್ಯವಂಶಿ ತನ್ನ ಪುತ್ರನ ಯಶಸ್ಸಿಗೆ ಸಹಾಯ ಮಾಡಲು ಸಂಪೂರ್ಣವಾಗಿ ತನ್ನನ್ನು ತಾನು ಅರ್ಪಿಸಿಕೊಂಡರು. ತಮ್ಮ ಮಗನ ಅಭಿವೃದ್ಧಿ ಮತ್ತು ತರಬೇತಿಯತ್ತ ಗಮನಹರಿಸಲು ತಮ್ಮ ಕೆಲಸ ಮತ್ತು ವ್ಯವಹಾರವನ್ನು ತೊರೆದರು. ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ವೈಭವ್ ಸೂರ್ಯವಂಶಿಗೆ ಗುಣಮಟ್ಟದ ತರಬೇತಿ ಕೊಡಿಸಲು, ಸಂಜೀವ್ ಸೂರ್ಯವಂಶಿ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಅಕಾಡೆಮಿ ಶುಲ್ಕ, ಪ್ರಯಾಣ ವೆಚ್ಚ ಮತ್ತು ಇತರ ಕ್ರಿಕೆಟ್ ತರಬೇತಿ ವೆಚ್ಚಗಳನ್ನು ಭರಿಸಲು ಬಳಸಿದರು.













