US Iran Ceasefire: ಕೊನೆಗೂ ಕದನ ವಿರಾಮದತ್ತ ದೊಡ್ಡ ಹೆಜ್ಜೆ; ಯುಎಸ್-ಇರಾನ್ ನಡುವೆ ಯಾರ ಕೈ ಮೇಲೆ? ಆ 10 ಷರತ್ತುಗಳ ಒಪ್ಪಂದ ಏನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

US Iran Ceasefire: ಕೊನೆಗೂ ಕದನ ವಿರಾಮದತ್ತ ದೊಡ್ಡ ಹೆಜ್ಜೆ; ಯುಎಸ್-ಇರಾನ್ ನಡುವೆ ಯಾರ ಕೈ ಮೇಲೆ? ಆ 10 ಷರತ್ತುಗಳ ಒಪ್ಪಂದ ಏನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


ಪಶ್ಚಿಮ ಏಷ್ಯಾದಲ್ಲಿ (Middle East) ಮಹಾ ಸ್ಫೋಟಕ್ಕೆ ಕಾರಣವಾಗಬೇಕಿದ್ದ ಆ ರಣಕೇಕೆ ಕೊನೆಗೂ ಶಾಂತವಾಗುವ (Peace) ಮುನ್ಸೂಚನೆ ಸಿಕ್ಕಿದೆ. ಇಡೀ ಜಗತ್ತನ್ನೇ ಮೂರನೇ ಮಹಾಯುದ್ಧದ ಭೀತಿಯಲ್ಲಿ ಇಟ್ಟಿದ್ದ ಅಮೆರಿಕ ಮತ್ತು ಇರಾನ್ (America And US), ಕೊನೆಗೂ ಕದನ ವಿರಾಮದತ್ತ (Ceasefire) ದೊಡ್ಡ ಹೆಜ್ಜೆಯನ್ನಿಟ್ಟಿವೆ. ಆದರೆ, ತೆರೆಮರೆಯ ರಾಜತಾಂತ್ರಿಕ ಯುದ್ಧದಲ್ಲಿ ಅಂತಿಮವಾಗಿ ಯಾರ ಕೈ ಮೇಲಾಗಿದೆ? ಜಾಗತಿಕ ಸೂಪರ್ ಪವರ್ ಅಮೆರಿಕ, ಇರಾನ್‌ಗೆ ಶರಣಾಯಿತೇ ಅಥವಾ ಕಠಿಣ ಆರ್ಥಿಕ ನಿರ್ಬಂಧಗಳಿಗೆ ಹೆದರಿ ಇರಾನ್ ಮಣಿಯಿತೇ? ಇಡೀ ವಿಶ್ವವೇ ಕೌಂಟ್‌ಡೌನ್ ಆರಂಭಿಸಿ ಕಾಯುತ್ತಿರುವ ಆ ಜಂಟಿ ಘೋಷಣೆಯ ಹಿಂದೆ, ಉಭಯ ದೇಶಗಳ ಅಸ್ತಿತ್ವವನ್ನೇ ಪಣಕ್ಕಿಟ್ಟು ರೂಪಿಸಲಾದ ಆ 10 ರೋಚಕ ಷರತ್ತುಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. 

ಸಹಿಯಷ್ಟೇ ಬಾಕಿ ಇದೆ!

ಮಧ್ಯಪ್ರಾಚ್ಯದಲ್ಲಿ ಹಲವು ವಾರಗಳಿಂದ ಉದ್ವಿಗ್ನತೆಯನ್ನುಂಟುಮಾಡಿದ್ದ ಅಮೆರಿಕಾ–ಇರಾನ್ ಸಂಘರ್ಷ ಕೆಲವೇ ಗಂಟೆಗಳಲ್ಲಿ ತಾತ್ಕಾಲಿಕ ಅಂತ್ಯ ಕಾಣುವ ಸಾಧ್ಯತೆ ಹೆಚ್ಚಾಗಿದೆ. ಅಮೆರಿಕಾ ಮತ್ತು ಇರಾನ್ ನಡುವಿನ ಮಧ್ಯಸ್ಥಿಕೆ ಮಾತುಕತೆಗಳು ಅಂತಿಮ ಹಂತ ತಲುಪಿದ್ದು, ಪಾಕಿಸ್ತಾನ ಮತ್ತು ಕೆಲವು ಅರಬ್ ರಾಷ್ಟ್ರಗಳ ಮಧ್ಯಸ್ಥಿಕೆಯಲ್ಲಿ 10 ಪ್ರಮುಖ ಷರತ್ತುಗಳ ಕರಡು ಒಪ್ಪಂದ ಸಿದ್ಧವಾಗಿದೆ ಎಂದು ಅಂತರರಾಷ್ಟ್ರೀಯ ವರದಿಗಳು ಹೇಳಿವೆ. ಆದರೆ ಅಧಿಕೃತ ಸಹಿ ಇನ್ನೂ ಬಾಕಿಯಿದ್ದು, ಅಂತಿಮ ಘೋಷಣೆಯ ನಿರೀಕ್ಷೆಯಿದೆ.

ಕರಡು ಒಪ್ಪಂದದ 10 ಅಂಶಗಳು;

1. ತಕ್ಷಣದ ಯುದ್ಧ ವಿರಾಮ

ಅಮೆರಿಕಾ ಹಾಗೂ ಅದರ ಮಿತ್ರಪಡೆಗಳು ಇರಾನ್ ಮೇಲಿನ ಎಲ್ಲಾ ದಾಳಿ ನಿಲ್ಲಿಸಬೇಕು; ಇರಾನ್ ಪ್ರತಿದಾಳಿಯನ್ನೂ ನಿಲ್ಲಿಸಬೇಕು.

2. ಹೋರ್ಮುಜ್ ಜಲಸಂಧಿ ಪುನಃ ತೆರೆಯುವುದು

ಜಾಗತಿಕ ವಾಣಿಜ್ಯ ಸಾಗಾಟಕ್ಕೆ ಹೋರ್ಮುಜ್ ದಾರಿಯನ್ನು ಇರಾನ್ ತಕ್ಷಣ ತೆರೆಯಬೇಕು.

3. ಸುರಕ್ಷಿತ ಸಾಗರ ಮಾರ್ಗ ವ್ಯವಸ್ಥೆ

ಪ್ರಾದೇಶಿಕ ರಾಷ್ಟ್ರಗಳ ಸಹಕಾರದಿಂದ ಹಡಗುಗಳಿಗೆ ಭದ್ರತಾ ಗ್ಯಾರಂಟಿ ಒದಗಿಸಲಾಗುವುದು.

4. ಇರಾನ್ ಅಣುಶಸ್ತ್ರ ಅಭಿವೃದ್ಧಿಗೆ ಮಿತಿ

ಇರಾನ್ ತನ್ನ ಅಣುಕಾರ್ಯಕ್ರಮವನ್ನು ಕೇವಲ ಶಾಂತಿಯುತ ಉದ್ದೇಶಗಳಿಗೆ ಸೀಮಿತಗೊಳಿಸಬೇಕು.

5. ಯುರೇನಿಯಂ ಸಂಗ್ರಹದ ಅಂತರರಾಷ್ಟ್ರೀಯ ಮೇಲ್ವಿಚಾರಣೆ!

ಇರಾನ್‌ನ ಸಂಗ್ರಹದ ಮೇಲೆ ಸ್ವತಂತ್ರ ಅಂತರರಾಷ್ಟ್ರೀಯ ತಪಾಸಣೆ ಇರಲಿದೆ.

6. ಹಂತ ಹಂತವಾಗಿ ಅಮೆರಿಕದ ನಿರ್ಬಂಧ ಸಡಿಲಿಕೆ!

ಒಪ್ಪಂದ ಪಾಲನೆಯಾದಂತೆ ಅಮೆರಿಕಾ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುತ್ತದೆ.

7. ಸ್ಥಗಿತಗೊಂಡಿರುವ ಇರಾನ್ ಆಸ್ತಿ ಬಿಡುಗಡೆ!

ವಿದೇಶಗಳಲ್ಲಿ ಜಪ್ತಿಯಾಗಿರುವ ಕೆಲವು ಇರಾನ್ ನಿಧಿಗಳನ್ನು ಬಿಡುಗಡೆ ಮಾಡಲಾಗುವುದು.

8. ಹೊಸ ಶಾಂತಿ ಸಂವಾದ ವ್ಯವಸ್ಥೆ

ಮುಂದಿನ 15–20 ದಿನಗಳಲ್ಲಿ ಶಾಶ್ವತ ಒಪ್ಪಂದಕ್ಕಾಗಿ ನಿರಂತರ ಮಾತುಕತೆ ನಡೆಯಲಿದೆ.

9. ಪ್ರಾದೇಶಿಕ ಪ್ರಾಕ್ಸಿ ಗುಂಪುಗಳ ಚಟುವಟಿಕೆ ನಿಯಂತ್ರಣ!

ಇರಾನ್ ಬೆಂಬಲಿತ ಶಸ್ತ್ರಸಜ್ಜಿತ ಗುಂಪುಗಳ ದಾಳಿಗಳನ್ನು ನಿಯಂತ್ರಿಸುವ ಬದ್ಧತೆ. ಪರಸ್ಪರ

10. ಆಕ್ರಮಣವಿಲ್ಲ ಎಂಬ ಭದ್ರತಾ ಭರವಸೆ!

ಒಪ್ಪಂದ ಅವಧಿಯಲ್ಲಿ ಇಬ್ಬರೂ ಪರಸ್ಪರ ಹೊಸ ಸೈನಿಕ ಕ್ರಮ ಕೈಗೊಳ್ಳಬಾರದು.

ವಿಶ್ಲೇಷಕರು ಹೇಳುವುದೇನು?

ವಿಶ್ಲೇಷಕರ ಪ್ರಕಾರ, ಇದು ಪೂರ್ಣ ಶಾಂತಿ ಒಪ್ಪಂದವಲ್ಲ; ಮೊದಲ ಹಂತದ ತಾತ್ಕಾಲಿಕ ತಣಿವು ಮಾತ್ರ. ಅಣುಕಾರ್ಯಕ್ರಮ, ಜಲಸಂಧಿ ನಿಯಂತ್ರಣ ಮತ್ತು ನಿರ್ಬಂಧ ಸಡಿಲಿಕೆ ವಿಷಯಗಳಲ್ಲಿ ಇನ್ನೂ ಭಿನ್ನಾಭಿಪ್ರಾಯಗಳಿವೆ. ಆದರೂ, ಈ ಒಪ್ಪಂದಕ್ಕೆ ಸಹಿ ಬಿದ್ದರೆ ಮಧ್ಯಪ್ರಾಚ್ಯದಲ್ಲಿ ತಾತ್ಕಾಲಿಕ ಶಾಂತಿ ಸ್ಥಾಪನೆ ಆಗಿ, ಜಾಗತಿಕ ತೈಲ ಮಾರುಕಟ್ಟೆಗೂ ದೊಡ್ಡ ನೆಮ್ಮದಿ ಸಿಗಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports