Last Updated:
2026ರ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಊರ್ವಶಿ ರೌಟೇಲಾ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆ ನಟಿ ರ್ಯಾಂಪ್ ವಾಕ್ ಮಾಡಿದ್ದು, ಮಾಧ್ಯಮಗಳೊಂದಿಗೂ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ನಟಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ಹೊಂದಿರುವ ಆಫ್-ಶೋಲ್ಡರ್ ಗೌನ್ ಧರಿಸಿದ್ದರು.
2026ರ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದ್ದು, ಕೇರಳದ ಕೆಜಿಯಾ ಲಿಜ್ ಮೆಜೊ (Kaziah Liz Mejo) ಪ್ರತಿಷ್ಠಿತ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಕೆಜಿಯಾ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಆದರೆ ಈ ಬಾರಿ ಸ್ಪರ್ಧೆಯ ಫಲಿತಾಂಶಕ್ಕಿಂತಲೂ ತೀರ್ಪುಗಾರರಲ್ಲೊಬ್ಬರಾಗಿದ್ದ ನಟಿ ಊರ್ವಶಿ ರೌಟೇಲಾ (Urvashi Rautela) ಧರಿಸಿದ್ದ ತ್ರಿವರ್ಣ-ಪ್ರೇರಿತ ಗೌನ್ ಹೆಚ್ಚು ಚರ್ಚೆಗೆ ಕಾರಣವಾಗಿದೆ.














