UPSC Coaching: ಭಾರತದ ಪ್ರಸಿದ್ಧ ಐಎಎಸ್‌ ಟ್ರೈನರ್‌ಗಳಿಂದ ತರಬೇತಿ ಪಡೆಯಬೇಕೆ? 3 ವರ್ಷ ಊಟ-ವಸತಿಯ ಜೊತೆ ಇಲ್ಲಿ ಕೋಚಿಂಗ್‌ ಫ್ರೀ! | | ACTPnews

ತರಬೇತಿ ಉಚಿತ


Last Updated:

ಸ್ಪರ್ಶ ಟ್ರಸ್ಟ್ ಬೆಂಗಳೂರು ಬಡ ಹೆಣ್ಣುಮಕ್ಕಳಿಗೆ ಯುಪಿಎಸ್‌ಸಿ, ಕೆಎಎಸ್, ಸಿಎ ಉಚಿತ ತರಬೇತಿ ಯೋಜನೆ ಆರಂಭಿಸಿದೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪೋಸ್ಟರ್ ಬಿಡುಗಡೆ ಮಾಡಿ ಅರ್ಜಿ ಕೋರಿದ್ದಾರೆ

ತರಬೇತಿ ಉಚಿತ
ತರಬೇತಿ ಉಚಿತ

ಬೆಂಗಳೂರು: ಕರ್ನಾಟಕದ ಬಡ ಹೆಣ್ಣುಮಕ್ಕಳಿಗೆ (Poor Girls) ಯುಪಿಎಸ್‌ಸಿ, ಕೆಎಎಸ್ ಹಾಗೂ ಸಿಎ ವ್ಯಾಸಂಗಕ್ಕೆ ಉಚಿತ ತರಬೇತಿ ನೀಡುವ ಮಹತ್ವದ ಯೋಜನೆಯೊಂದನ್ನು (Project)  ಸ್ಪರ್ಶ ಸಂಸ್ಥೆ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದು, ಈ ಯೋಜನೆಯ ಯುವಿಕಾ ಕಾರ್ಯಕ್ರಮದ ಪೋಸ್ಟರ್ ಅನ್ನು ಚಿಕ್ಕಮಗಳೂರು (Chikkamagaluru) ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ತಮ್ಮ ಕಚೇರಿಯಲ್ಲಿ (Office) ನಡೆದ ಸರಳ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೋಸ್ಟರ್‌ ಬಿಡುಗಡೆ

ಸ್ಪರ್ಶ ಟ್ರಸ್ಟ್‌ನ ಪದಾಧಿಕಾರಿಗಳು, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ವಿಧೇಯ ಬಳೆಗೋಡ, ಮಾಜಿ ವಿಟಿಯು ಸದಸ್ಯರು ಹಾಗೂ ನಗರದ ಹೋಟೆಲ್ ಉದ್ಯಮಿ ಜಿತೇಂದ್ರ ಕ್ರಿಸ್ಟಲಿನ್ ಅವರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಜಿಲ್ಲಾಧಿಕಾರಿಗಳು ಈ ಯೋಜನೆಗೆ ವೈಯಕ್ತಿಕವಾಗಿ ಸಹಾಯ ಹಾಗೂ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಇಂತಹ ಮಕ್ಕಳಿಗೆ ಮಾತ್ರ ಅವಕಾಶ

ತಂದೆ-ತಾಯಿ ಇಲ್ಲದ, ಏಕ ಪೋಷಕ ಕುಟುಂಬದ ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಪಾಲನಾ ಗೃಹಗಳಲ್ಲಿ (CCI) ಬೆಳೆದ 21 ರಿಂದ 27 ವರ್ಷ ವಯೋಮಾನದ ಬಿಪಿಎಲ್ ಕುಟುಂಬದ ಹೆಣ್ಣುಮಕ್ಕಳಿಗೆ ಈ ಯೋಜನೆಯ ಸೌಲಭ್ಯ ಲಭ್ಯವಿದ್ದು, ಒಟ್ಟು 40 ರಿಂದ 50 ಹೆಣ್ಣುಮಕ್ಕಳಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ.
ಶೂನ್ಯ ಶುಲ್ಕದಲ್ಲಿ ತರಬೇತಿ

ಮೂರು ವರ್ಷಗಳ ಕಾಲದ ಈ ತರಬೇತಿ ಕಾರ್ಯಕ್ರಮದಲ್ಲಿ ಆನ್‌ಲೈನ್ ಮತ್ತು ನೇರ ತರಗತಿಗಳ ಮೂಲಕ 24 ತಾಸು ಅಧ್ಯಯನದ ಅವಕಾಶ, ಉಚಿತ ವಸತಿ, ಊಟ ಹಾಗೂ ಉದ್ಯೋಗ ದೊರೆಯುವವರೆಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ. ಇಡೀ ಕಾರ್ಯಕ್ರಮ ಶೂನ್ಯ ಶುಲ್ಕದಲ್ಲಿ ನಡೆಯಲಿದ್ದು, ಇದರಲ್ಲಿ “ಇಂಡಿಯಾ ಫಾರ್ ಐಎಎಸ್” ನ ಪುಸ್ತಕಗಳು, ಶಿಕ್ಷಕರು, ಆನ್‌ಲೈನ್‌ ಟೀಚಿಂಗ್‌ ಮತ್ತು ನಿರಂತರ ಕೋಚಿಂಗ್‌ ನಡೆಯಲಿದೆ.

ಈವರೆಗೆ 93 ಜನರಿಗೆ ಯುಪಿಎಸ್ಸಿಯಲ್ಲಿ ಯಶಸ್ಸು

ಬೆಂಗಳೂರಿನ India4IAS ಸಂಸ್ಥೆಯು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸತತವಾಗಿ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಾ ಬಂದಿದೆ. ಈ ಸಂಸ್ಥೆಯ ಸಾಧನೆಯ ಹಾದಿಯನ್ನು ಗಮನಿಸಿದರೆ, 2020-21ರ ಅವಧಿಯಲ್ಲಿ ಸುಮಾರು 21 ಜನ ಯಶಸ್ಸು ಸಾಧಿಸುವ ಮೂಲಕ ಭರವಸೆ ಮೂಡಿಸಿದ್ದರು. ನಂತರದ ವರ್ಷಗಳಲ್ಲಿ ಈ ಯಶಸ್ಸಿನ ಪಯಣ ಮುಂದುವರಿದಿದ್ದು, 2022ರಲ್ಲಿ ಸುಮಾರು 15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಸಾಧನೆಯ ಗ್ರಾಫ್ ಏರುತ್ತಲೇ ಸಾಗಿ, 2024ರಲ್ಲಿ 23 ವಿದ್ಯಾರ್ಥಿಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದರು. ಇನ್ನು 2025ರ ಸಾಲಿನಲ್ಲಿ ದಾಖಲೆಯ 34 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಈ ಸಂಸ್ಥೆಯು ನಾಗರಿಕ ಸೇವಾ ಪರೀಕ್ಷಾ ತರಬೇತಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ.

ಯೋಜನೆಗೆ ಸೇರಲು ಏನು ಮಾಡಬೇಕು?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports