Last Updated:
Upendra: ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಈಗ ಅವರು ಹೇಗಿದ್ದಾರೆ? ಆರೋಗ್ಯ ಹೇಗಿದೆ?
ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಉಪೇಂದ್ರ ಅವರ ತಾಯಿ ಅನಸೂಯ ಬಿ.ಎಂ. (Anasuya BM) ಅವರು ಮಣಿಪಾಲ್ ಆಸ್ಪತ್ರೆ ಯಶವಂತಪುರದಲ್ಲಿ ತಮ್ಮ ಎರಡೂ ಕಾಲುಗಳಿಗೆ ಯಶಸ್ವಿಯಾಗಿ ರೋಬೋಟಿಕ್ ನೆರವಿನ ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ (Surgery) ಒಳಗಾಗಿದ್ದಾರೆ.
81 ವರ್ಷದ ಅನಸೂಯ ಅವರು ಹಲವು ವರ್ಷಗಳಿಂದ ತೀವ್ರವಾದ ಅಸ್ಥಿಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದರು. ಎರಡೂ ಮೊಣಕಾಲುಗಳಲ್ಲಿ ತೀವ್ರ ನೋವು ಹಾಗೂ ತೊಂದರೆ ಅನುಭವಿಸುತ್ತಿದ್ದರು.
ಮೊಣಕಾಲಿನಲ್ಲಿ ನೋವಿನಿಂದಾಗಿ ಕ್ರಮೇಣ ಅವರ ದೈನಂದಿನ ಚಟುವಟಿಕೆಗಳನ್ನು ಕೂಡಾ ಇದು ಬಾಧಿಸಲು ಶುರುವಾಗಿತ್ತು. ಅವರ ಮೊಣಕಾಲಿನ ಕೀಲು ಮತ್ತು ಮೂಳೆ ಆರೋಗ್ಯವನ್ನು ವಿವರವಾಗಿ ನೋಡಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮಣಿಪಾಲ್ ಆಸ್ಪತ್ರೆ ಯಶವಂತಪುರದ ಹಿರಿಯ ಸಲಹೆಗಾರರು ಹಾಗೂ ಜಂಟಿ ಬದಲಿ ಮತ್ತು ಆರ್ಥ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಕಿರಣ್ ಚೌಕ ಅವರ ನೇತೃತ್ವದಲ್ಲಿ ರೋಬೋಟಿಕ್ ನೆರವಿನ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.
ಈ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಾಧುನಿಕ CUVIS ರೋಬೋಟಿಕ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ರೋಗಿಯ ದೇಹರಚನೆಗೆ ಅನುಗುಣವಾಗಿ ಕೃತಕ ಸಂಧಿಗಳ ನಿಖರ ಅಳವಡಿಕೆ ಮಾಡಲಾಗಿದೆ. ಎರಡೂ ಮೊಣಕಾಲುಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಈಗ ಹುಷಾರಾಗಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ ಅವರ ಚೇತರಿಕೆ ಪ್ರಕ್ರಿಯೆ ಸುಗಮವಾಗಿ ಸಾಗಿದ್ದು, ಯಾವುದೇ ಗಂಭೀರ ತೊಂದರೆಗಳು ಕಾಣಿಸಿಕೊಂಡಿಲ್ಲ. ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿಯೇ ಆರಂಭಿಕ ಫಿಸಿಯೋಥೆರಪಿ ಆರಂಭಿಸಲಾಯಿತು. ಬಳಿಕ ಅವರು ಸ್ಥಿರ ಆರೋಗ್ಯ ಸ್ಥಿತಿಯಲ್ಲಿ, ಯಾವುದೇ ಸಮಸ್ಯೆಗಳಿಲ್ಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Bangalore,Karnataka
Jun 02, 2026 12:31 PM IST













