TMC Crisis: ಮಮತಾ ವಿರುದ್ಧ ದಂಗೆ ಎದ್ದ ಟಿಎಂಸಿ ಶಾಸಕರು! ಸದ್ಯದಲ್ಲೇ ‘ಅಸಲಿ ತೃಣಮೂಲ’ ಪಕ್ಷ ಘೋಷಣೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಇತ್ತೀಚಿನ ವಾರಗಳಲ್ಲಿ ಹಲವಾರು ಉಚ್ಚಾಟಿತ ಮತ್ತು ಅತೃಪ್ತ ನಾಯಕರು ಕೋಲ್ಕತ್ತಾದ ಶಾಸಕರ ಭವನದಲ್ಲಿ ರಹಸ್ಯ ಸಭೆಗಳನ್ನು ನಡೆಸಿದ್ದಾರೆ. ಟಿಎಂಸಿಯ ಭವಿಷ್ಯ, ಸಾಂಸ್ಥಿಕ ಸುಧಾರಣೆಗಳು ಮತ್ತು ಪರ್ಯಾಯ ರಾಜಕೀಯ ವೇದಿಕೆಯನ್ನು ರಚಿಸುವ ಸಾಧ್ಯತೆಯ ಬಗ್ಗೆ ಈ ಸಭೆಯ ಚರ್ಚೆಗಳು ಕೇಂದ್ರೀಕೃತವಾಗಿವೆ.

News18
News18

ಕೋಲ್ಕತ್ತಾ: 2026 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಹೀನಾಯವಾಗಿ ಸೋತ ನಂತರ, ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಈಗ ಜಗಜ್ಜಾಹೀರಾಗಿದೆ. ಇದೀಗ ತೃಣಮೂಲ ಕಾಂಗ್ರೆಸ್ ಮತ್ತೊಂದು ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರಿಂದ ಹೊರಹಾಕಲ್ಪಟ್ಟ ಶಾಸಕರು ಪಕ್ಷವನ್ನೇ ವಿಭಜನೆ ಮಾಡುವ ಸಲುವಾಗಿ ರಹಸ್ಯ ಸಭೆಗಳಲ್ಲಿ ಭಾಗಿಯಾಗಿದ್ದಾರೆ.

ಇಬ್ಬರು ಪ್ರಬಲ ಟಿಎಂಸಿ ಶಾಸಕರಾದ ಋತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷದಿಂದ ಮಮತಾ ಬ್ಯಾನರ್ಜಿ ಆತುರದಿಂದ ಹೊರಹಾಕಿದ್ದರು. ಆದರೆ ಕಥೆ ಅಲ್ಲಿಗೆ ಮುಗಿದಿಲ್ಲ. ನಿಜವಾದ ಆಟ ಅವರ ಉಚ್ಚಾಟನೆಯ ನಂತರ ಪ್ರಾರಂಭವಾಗಿದ್ದು, ಮಹಾರಾಷ್ಟ್ರದಲ್ಲಿ ಶಿವಸೇನೆ ಇಬ್ಭಾಗವಾದಂತೆ ಟಿಎಂಸಿ ಕೂಡ ಇಬ್ಭಾಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: School Holiday: ಜೂನ್ 1ರಿಂದ 30ರವರೆಗೆ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ! ಈ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್!

ಅಸಲಿಗೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹುದ್ದೆಗೆ ಶೋಭಂದೇಬ್ ಚಟರ್ಜಿ ಅವರ ಹೆಸರನ್ನು ಪ್ರಸ್ತಾಪಿಸುವ ಅಧಿಕೃತ ಪತ್ರಕ್ಕೆ ಸಹಿ ಹಾಕಲು ಇಬ್ಬರು ಶಾಸಕರು ನಿರಾಕರಿಸಿದ್ದರು. ಅತ್ತ ಪಕ್ಷದ ಸಭೆಗಳಿಗೆ ನಿರಂತರವಾಗಿ ಗೈರು ಹಾಜರಾಗುತ್ತಿದ್ದಾರೆ ಎಂದು ಪಕ್ಷವು ಆರೋಪಿಸಿದೆ. ಆದರೆ, ಈ ಕ್ರಮದ ನಂತರ, ಇಬ್ಬರು ಶಾಸಕರು ಮಮತಾ ಬ್ಯಾನರ್ಜಿ ಅವರ ನಾಯಕತ್ವದ ಮೇಲೆ ನೇರ ದಾಳಿ ನಡೆಸಿದರು, ಇದು ಟಿಎಂಸಿಯೊಳಗಿನ ಗಮನಾರ್ಹ ಬಿರುಕನ್ನು ಬಹಿರಂಗಪಡಿಸಿತು.

ರಹಸ್ಯ ಸಭೆ!

ಮೂಲಗಳ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಹಲವಾರು ಉಚ್ಚಾಟಿತ ಮತ್ತು ಅತೃಪ್ತ ನಾಯಕರು ಕೋಲ್ಕತ್ತಾದ ಶಾಸಕರ ಭವನದಲ್ಲಿ ರಹಸ್ಯ ಸಭೆಗಳನ್ನು ನಡೆಸಿದ್ದಾರೆ. ಟಿಎಂಸಿಯ ಭವಿಷ್ಯ, ಸಾಂಸ್ಥಿಕ ಸುಧಾರಣೆಗಳು ಮತ್ತು ಪರ್ಯಾಯ ರಾಜಕೀಯ ವೇದಿಕೆಯನ್ನು ರಚಿಸುವ ಸಾಧ್ಯತೆಯ ಬಗ್ಗೆ ಈ ಸಭೆಯ ಚರ್ಚೆಗಳು ಕೇಂದ್ರೀಕೃತವಾಗಿವೆ ಎಂದು ವರದಿಯಾಗಿದೆ.

‘ಅಸಲಿ ತೃಣಮೂಲ’ ಬ್ಯಾನರ್ ಅಡಿಯಲ್ಲಿ ಪ್ರತ್ಯೇಕ ರಾಜಕೀಯ ಪಕ್ಷದ ರಚನೆಯನ್ನು ಪ್ರಾರಂಭಿಸುವ ಕಲ್ಪನೆಯನ್ನು ಕೆಲವು ಭಿನ್ನಮತೀಯ ನಾಯಕರು ಅನ್ವೇಷಿಸುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಯಾವುದೇ ಅಧಿಕೃತ ಘೋಷಣೆ ಮಾಡದಿದ್ದರೂ, ಅತೃಪ್ತ ಶಾಸಕರಲ್ಲಿ ಬೆಂಬಲವನ್ನು ಕ್ರೋಢೀಕರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಗಳು ಸೂಚಿಸುತ್ತವೆ.

ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿರುವ ನಾಯಕರೊಂದಿಗೆ ಸುಮಾರು 15 ರಿಂದ 20 ಟಿಎಂಸಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಸೂಚನೆಗಳ ಮಧ್ಯೆ ಈ ಬೆಳವಣಿಗೆಗಳು ನಡೆದಿವೆ ಎಂದು ಇಂಡಿಯಾ ಟಿವಿ ವರದಿ ಮಾಡಿದೆ.

ವಿಭಜನೆಗೆ ಕಾರಣರಾದ ಉಚ್ಚಾಟಿತ ಶಾಸಕರು ಯಾರು?

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಟಿಎಂಸಿ ತನ್ನ ಇಬ್ಬರು ಶಾಸಕರಾದ ಋತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷದಿಂದ ಹೊರಹಾಕಿದ ನಂತರ ಇತ್ತೀಚಿನ ರಾಜಕೀಯ ಪ್ರಕ್ಷುಬ್ಧತೆ ತೀವ್ರಗೊಂಡಿತು.

ವಿರೋಧ ಪಕ್ಷದ ನಾಯಕರಿಗೆ ಸಂಬಂಧಿಸಿದ ಪ್ರಸ್ತಾವನೆ ಮತ್ತು ಸಹಿಗಳನ್ನು ಸಂಗ್ರಹಿಸುವ ಪ್ರಕ್ರಿಯೆಯ ಬಗ್ಗೆ ಇಬ್ಬರು ಶಾಸಕರು ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ವರದಿಯಾಗಿದೆ. ಪಕ್ಷದ ಮೂಲಗಳ ಪ್ರಕಾರ, ಆಹ್ವಾನವಿದ್ದರೂ ಇಬ್ಬರೂ ನಾಯಕರು ನಂತರ ಪಕ್ಷದ ಪ್ರಮುಖ ಸಭೆಯನ್ನು ತಪ್ಪಿಸಿಕೊಂಡಿದ್ದಾರೆ. ಅವರನ್ನು ಉಚ್ಚಾಟಿಸಿರುವುದರಿಂದ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಊಹಾಪೋಹಗಳು ಮತ್ತಷ್ಟು ಹೆಚ್ಚಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed