Troll Video: ಟ್ರೋಲ್‌ ವಿಡಿಯೋಗೆ ಹೋಯ್ತು ಪ್ರಾಣ! ಕಾಮೆಂಟ್ ಸಹಿಸಲಾಗದೇ ಗುಂಡು ಹಾರಿಸಿಕೊಂಡ ವಿದ್ಯಾರ್ಥಿ! | Crime News | ACTPnews

ಸಾಂಕೇತಿಕ ಚಿತ್ರ


Last Updated:

Troll Video: 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯೆಗೆ ಕಾರಣವೆಂದರೆ ಆತ ರಸ್ತೆಬದಿಯಲ್ಲಿ ಕಸ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು!

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಗೋವಾ: ಟ್ರೋಲ್ (Troll) ಮಾಡೋದು, ಅದನ್ನು ನೋಡಿ ಖುಷಿ ಪಡೋದು ಸುಲಭ. ಆದರೆ ಟ್ರೋಲ್‌ಗೆ ಒಳಗಾದ ವ್ಯಕ್ತಿಯ ಮನಸ್ಸಿಗೆ ಎಷ್ಟು ನೋವು, ಎಷ್ಟು ಮುಜುಗರ ಆಗಬಹುದು, ಡಿಜಿಟಲ್ ಬೆದರಿಕೆ ಜೀವಕ್ಕೆ ಎಷ್ಟು ಮಾರಕವಾಗಬಹುದು ಎಂಬುದನ್ನು ವಿವರಿಸುವ ಒಂದು ನೋವಿನ ಮತ್ತು ಆಘಾತಕಾರಿ ಪ್ರಕರಣ ಗೋವಾದಲ್ಲಿ (Goa) ಬೆಳಕಿಗೆ ಬಂದಿದೆ. ಉತ್ತರ ಗೋವಾದ ಮಾಪುಸಾ ಪಟ್ಟಣದ ಬಳಿ ವಾಸಿಸುವ 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು (Student) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯೆಗೆ ಕಾರಣವೆಂದರೆ ಅವರು ರಸ್ತೆಬದಿಯಲ್ಲಿ ಕಸ (garbage) ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು!

ರಸ್ತೆ ಬದಿ ಕಸ ಎಸೆದ ವಿಡಿಯೋ ಟ್ರೋಲ್

ಆತ ರಸ್ತೆ ಬದಿ ಕಸ ಎಸೆಯುತ್ತಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿ, ಸಾಕಷ್ಟು ವೈರಲ್ ಆಗಿತ್ತು. ಆ ನಂತರ, ನೆಟಿಜನ್‌ಗಳು ಅತನ ಬಗ್ಗೆ ತೀವ್ರವಾಗಿ ಕಾಮೆಂಟ್ ಮಾಡೋದಕ್ಕೆ ಶುರು ಮಾಡಿದ್ರಂತೆ. ಇದ್ರಿಂದ ಆತ ತೀವ್ರ ಖಿನ್ನತೆಗೆ ಒಳಗಾಗಿದ್ದ. ಟ್ರೋಲಿಂಗ್ ಇಷ್ಟಕ್ಕೇ ಸೀಮಿತವಾಗಿರಲಿಲ್ಲ; ಈ ಪ್ರಕರಣದಲ್ಲಿ ಅವರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಲಾಯಿತು, ಇದು ಅವರನ್ನು ಈ ಭಯಾನಕ ಹೆಜ್ಜೆ ಇಡಲು ಕಾರಣವಾಯಿತು.

ಬಾತ್‌ ರೂಂನಲ್ಲಿ ಗುಂಡು ಹಾರಿಸಿಕೊಂಡ ವಿದ್ಯಾರ್ಥಿ

ಮೃತ ವಿದ್ಯಾರ್ಥಿಯನ್ನು 23 ವರ್ಷದ ಸ್ಯಾಮ್ಯುಯೆಲ್ ಗಾರ್ವಿನ್ ಡಿ ಬ್ರಗಾಂಕಾ ಎಂದು ಗುರುತಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಗುರುವಾರ ರಾತ್ರಿ ಸ್ಯಾಮ್ಯುಯೆಲ್ ತನ್ನ ಮನೆಯ ಬಾತ್‌ ರೂಂನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಗುಂಡೇಟಿನ ಸದ್ದು ಕೇಳಿದ ತಕ್ಷಣ, ಅವರ ಕುಟುಂಬ ಸದಸ್ಯರು ಅವರನ್ನು ಮಾಪುಸಾದ ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ವಿಡಿಯೋ ಟ್ರೋಲ್ ಆಗುತ್ತಿದ್ದಂತೆ ದೂರು ದಾಖಲು

ಸ್ಯಾಮ್ಯುಯೆಲ್ ರಸ್ತೆ ಬದಿಯಲ್ಲಿ ಕಸದ ಚೀಲವನ್ನು ಎಸೆಯುತ್ತಿದ್ದ. ಈ ವೇಳೆ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಈ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಿದರು. ಈ ವಿಡಿಯೋ ಬೇಗನೆ ವೈರಲ್ ಆಯಿತು. ಬಳಿಕ ಜನರು ಅವನನ್ನು ತೀವ್ರವಾಗಿ ಟ್ರೋಲ್ ಮಾಡಲು ಪ್ರಾರಂಭಿಸಿದರು. ನಂತರ ಮಾಪುಸಾ ಪೊಲೀಸ್ ಠಾಣೆಯಲ್ಲಿ ಸ್ಯಾಮ್ಯುಯೆಲ್ ವಿರುದ್ಧ ದೂರು ದಾಖಲಾಗಿತ್ತು.

ದಂಡ ವಿಧಿಸಿದ ಪೊಲೀಸರು

ಪೊಲೀಸರು ಸ್ಯಾಮ್ಯುಯೆಲ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 271 ಅಂದರೆ ಜೀವಕ್ಕೆ ಅಪಾಯಕಾರಿಯಾದ ರೋಗಗಳ ಸೋಂಕನ್ನು ಹರಡುವ ಸಾಧ್ಯತೆಯ ನಿರ್ಲಕ್ಷ್ಯದ ಕೃತ್ಯ ಮತ್ತು ಗೋವಾ ಜೈವಿಕ ಕೊಳೆಯುವ ಕಸ ನಿಯಂತ್ರಣ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಪೊಲೀಸರು ಅವನನ್ನು ಪೊಲೀಸ್ ಠಾಣೆಗೆ ಕರೆಸಿ ಕಾನೂನಿನ ಪ್ರಕಾರ ನೋಟಿಸ್ ನೀಡಿದರು. ಇದರಿಂತ ಆತ ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದ.

ವಿಡಿಯೋ ಚಿತ್ರೀಕರಿಸಿದವರ ವಿರುದ್ಧ ಆಕ್ರೋಶ

ಇನ್ನು ತನ್ನ ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಆ ವಿದ್ಯಾರ್ಥಿ ಕುಟುಂಬ ಆಗ್ರಹಿಸಿದೆ. ಸ್ಯಾಮ್ಯುಯೆಲ್ ಕಸ ಎಸೆಯುವ ವೀಡಿಯೊವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸುತ್ತಿದೆ.

ಸೂಕ್ತ ತನಿಖೆಗೆ ಗೋವಾ ಸಿಎಂ ಆದೇಶ

ಇನ್ನು ಈ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಅತ್ಯಂತ ದುರದೃಷ್ಟಕರ. ಈ ವಿಷಯದ ಬಗ್ಗೆ ನಿಷ್ಪಕ್ಷಪಾತ ಮತ್ತು ಸಂಪೂರ್ಣ ತನಿಖೆ ನಡೆಸುವಂತೆ ನಾನು ಪೊಲೀಸ್ ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇನೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed