Last Updated:
Trisha: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಫೋಟೋಗಳಲ್ಲಿ, ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಚಿತ್ರೀಕರಣದ ಸಮಯದಲ್ಲಿ ಖುಷಿ ಖುಷಿಯಿಂದ ಸಮಯ ಕಳೆಯುತ್ತಿರುವುದನ್ನು ಕಾಣಬಹುದು.
ತಮಿಳು ಸೂಪರ್‌ಸ್ಟಾರ್ ಸೂರ್ಯ ಅವರ “ಕರುಪ್ಪು” ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಅಭಿಮಾನಿಗಳು ಈಗಾಗಲೇ ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ , ಹೀಗಿರುವಾಗ ಇದೀಗ ಈ ಚಿತ್ರದ ಸೆಟ್‌ನ ತೆರೆಮರೆಯ ಫೋಟೋಗಳು ಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ , ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಚಿತ್ರೀಕರಣದ ಸಮಯದಲ್ಲಿ ಖುಷಿ ಖುಷಿಯಿಂದ ಸಮಯ ಕಳೆಯುತ್ತಿರುವುದನ್ನು ಕಾಣಬಹುದು. ಇಬ್ಬರ ಕೆಮಿಸ್ಟ್ರಿಯನ್ನು ನೋಡಿ, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಇತ್ತೀಚೆಗೆ, ಚಿತ್ರ ತಂಡದ ಸದಸ್ಯರೊಬ್ಬರು “ಕರುಪ್ಪು” ಸೆಟ್‌ಗಳಿಂದ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ವೈರಲ್ ಆದವು. ಫೋಟೋಗಳಲ್ಲಿ, ಸೂರ್ಯ ಮತ್ತು ತ್ರಿಶಾ ತುಂಬಾನೇ ಖುಷಿ ಖುಷಿಯಿಂದ ಸಮಯ ಕಳೆಯುತ್ತಿರುವುದನ್ನು ಕಾಣಬಹುದಾಗಿದೆ.
ಒಂದು ವೀಡಿಯೊದಲ್ಲಿ, ತ್ರಿಶಾ ಕೇಕ್ ಕತ್ತರಿಸುತ್ತಿದ್ದರೆ, ಸೂರ್ಯ ನಗುನಗುತ್ತಾ ಚಪ್ಪಾಳೆ ತಟ್ಟುವುದನ್ನು ಕಾಣಬಹುದು. ಈ ವಿಡಿಯೋ ಕಂಡ ಫ್ಯಾನ್ಸ್, ಇಬ್ಬರ ಬಾಂಧವ್ಯವನ್ನು ಹಾಡಿ ಹೊಗಳಿದ್ದಾರೆ.,ಹಲವರು ತ್ರಿಶಾ ಅವರನ್ನು “ಕ್ವೀನ್ ” ಎಂದೂ ಕರೆದಿದ್ದಾರೆ . ಇನ್ನೂ ಕೆಲವು ಬಳಕೆದಾರರು, “ಇದು ಅತ್ಯುತ್ತಮ ಜೋಡಿ” ಎಂದು ಕಾಮೆಂಟ್ ಮಾಡಿದ್ದಾರೆ.
“ಕರುಪ್ಪು” ತಮಿಳು ಚಿತ್ರರಂಗಕ್ಕೆ ಮಾತ್ರವಲ್ಲದೆ ಸೂರ್ಯ ಅವರ ವೃತ್ತಿಜೀವನಕ್ಕೂ ಮಹತ್ವದ ಮೈಲಿಗಲ್ಲು ಎಂದು ಸಾಬೀತಾಗಿದೆ. ಇದು ಅವರ ವೃತ್ತಿಜೀವನದ ಅತಿದೊಡ್ಡ ವಾಣಿಜ್ಯ ಹಿಟ್ ಆಗಿದೆ. ವರದಿಗಳ ಪ್ರಕಾರ, ಈ ಚಿತ್ರವು ಭಾರತದಲ್ಲಿ ಸುಮಾರು ₹285 ಕೋಟಿ ಮತ್ತು ವಿಶ್ವಾದ್ಯಂತ ₹518 ಕೋಟಿಗೂ ಹೆಚ್ಚು ಗಳಿಸಿದೆ.
ಚೆನ್ನೈನಲ್ಲಿ ನಡೆದ ಚಿತ್ರದ ಯಶಸ್ಸಿನ ಪಾರ್ಟಿಯಲ್ಲಿ, ಸೂರ್ಯ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. “ಕರುಪ್ಪು” ಚಿತ್ರಕ್ಕೆ ದೊರೆತ ಪ್ರೀತಿಗೆ ಅವರು ತಮ್ಮ ಆಳವಾದ ಭಾವನೆಯನ್ನು ವ್ಯಕ್ತಪಡಿಸಿದರು. ಕೇವಲ 30 ರಿಂದ 45 ನಿಮಿಷಗಳ ಸಂಭಾಷಣೆಯ ನಂತರ ಅವರು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಸೂರ್ಯ ಬಹಿರಂಗಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಅವರ ಚಿತ್ರಗಳಿಗೆ ಇಷ್ಟೊಂದು ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದರು. ಎಲ್ಲಾ ವಯಸ್ಸಿನ ಜನರು ಚಿತ್ರವನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಸೇರುತ್ತಿದ್ದಾರೆ ಎಂಬ ಅಂಶದ ಬಗ್ಗೆ ಸೂರ್ಯ ಸಂತೋಷವನ್ನು ವ್ಯಕ್ತಪಡಿಸಿದರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ಹೌಸ್‌ಫುಲ್ ಚಿತ್ರಮಂದಿರಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ ಎಂದು ಖುಷಿಯಿಂದ ಹೇಳಿಕೊಂಡರು.
ಈ ಚಿತ್ರವು ನಟ ಸೂರ್ಯಗೆ ಮತ್ತೆ ಕಮ್ ಬ್ಯಾಕ್ ಸಿನಿಮಾ ಆಗಲಿದೆ ಎಂದು ಅನೇಕ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ‘ಕರುಪ್ಪು’ ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ಸೂರ್ಯ ಹಾಗೂ ವಕೀಲ ಬೇಬಿ ಕಣ್ಣನ್ ಪಾತ್ರವನ್ನು ನಿರ್ವಹಿಸುವ ಆರ್.ಜೆ ಬಾಲಾಜಿ ನಡುವಿನ ಹೋರಾಟವಾಗಿದೆ. ಭ್ರಷ್ಟ ಆರ್ ಜೆ ಬಾಲಾಜಿ ಕೈಯಲ್ಲಿ ಜಿಲ್ಲಾ ಕ್ರಿಮಿನಲ್ ಕೋರ್ಟ್ ಇರುತ್ತದೆ . ಈ ವೇಳೆ ಕುರುಪ್ಪಸ್ವಾಮಿ ಅವತಾರದಲ್ಲಿರುವ ಸೂರ್ಯ ನ್ಯಾಯಾಲಯದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡುತ್ತಾನೆ. ನ್ಯಾಯಾಲಯದಲ್ಲಿ ನ್ಯಾಯವನ್ನು ಸ್ಥಾಪಿಸುವ ಈ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕಥೆ.
Bangalore [Bangalore],Bangalore,Karnataka













