Last Updated:
KSRTC ಬೆಂಗಳೂರು-ಜೋಗ ಜಲಪಾತಕ್ಕೆ ವಾರಾಂತ್ಯದ ಪ್ಯಾಕೇಜ್ ಟೂರ್ ಆರಂಭಿಸಿದೆ. ನಾನ್-ಎಸಿ ಸ್ಲೀಪರ್ ಬಸ್, ಊಟ ಸೇರಿ ವಯಸ್ಕರಿಗೆ ₹3,300, ಮಕ್ಕಳಿಗೆ ₹3,000. ಆಗಸ್ಟ್ 8, 2026 ರಿಂದ ಲಭ್ಯ.
ಬೆಂಗಳೂರು: ವಾರಾಂತ್ಯದಲ್ಲಿ (Weekend) ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಪ್ರಸಿದ್ಧ “ಬೆಂಗಳೂರು-ಜೋಗ ಜಲಪಾತ” ಮಾರ್ಗದಲ್ಲಿ ನಾನ್-ಎಸಿ ಸ್ಲೀಪರ್ ವಾಹನದ ಮೂಲಕ ಅತ್ಯಾಕರ್ಷಕ ವಾರಾಂತ್ಯದ ಪ್ಯಾಕೇಜ್ ಟೂರ್ ಅನ್ನು KSRTC ಬೆಂಗಳೂರು ಕೇಂದ್ರೀಯ ವಿಭಾಗವು ಆರಂಭಿಸುತ್ತಿದೆ
ಬೆಂಗಳೂರಿನಿಂದ ರಾತ್ರಿ 22:30ಕ್ಕೆ ಹೊರಡುವ ಬಸ್, ಬೆಳಗ್ಗೆ 05:30ಕ್ಕೆ ಸಾಗರ ತಲುಪಲಿದೆ. ಅಲ್ಲಿ ಫ್ರೆಶ್ ಅಪ್ ಆದ ಬಳಿಕ ವರದಹಳ್ಳಿ, ವರದಮೂಲ, ಇಕ್ಕೇರಿ, ಕೆಳದಿ ಐತಿಹಾಸಿಕ ಸ್ಥಳಗಳ ವೀಕ್ಷಣೆ ಹಾಗೂ ಜೋಗ ಜಲಪಾತದ ಭೇಟಿ ಬಳಿಕ ರಾತ್ರಿ ವಾಪಸ್ ಬೆಂಗಳೂರಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ.
ವಯಸ್ಕರಿಗೆ: ಒಟ್ಟು ರೂ. 3,300/- (ಇದರಲ್ಲಿ ಬಸ್ ಶುಲ್ಕ, ಮೂರು ಹೊತ್ತಿನ ಊಟ, ಗೈಡ್ ಶುಲ್ಕ ರೂ. 500, ಪ್ರವೇಶ ಶುಲ್ಕ ಹಾಗೂ ಟೋಲ್ ಶುಲ್ಕಗಳು ಸೇರಿವೆ).
ಮಕ್ಕಳಿಗೆ (6 ರಿಂದ 12 ವರ್ಷದವರೆಗೆ): ಒಟ್ಟು ರೂ. 3,000/-.
ಸಾರ್ವಜನಿಕರು ಈ ಅದ್ಭುತ ಪ್ಯಾಕೇಜ್ ಟೂರ್ ಸೌಲಭ್ಯದ ಲಾಭ ಪಡೆಯಲು ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಅಥವಾ www.ksrtc.karnataka.gov.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು.
Bangalore [Bangalore],Bangalore,Karnataka
Aug 05, 2026 10:21 AM IST














